Ad Widget .

ಎಂಭತ್ತರ ವೃದ್ಧನಿಂದ 65ರ ವೃದ್ದೆ ಮೇಲೆ‌ ಅತ್ಯಾಚಾರ| ಆರೋಪಿಯ ಹುಡುಕಾಟಕ್ಕೆ ಬಲೆ ಬೀಸಿದ ಪೊಲೀಸರು|

Ad Widget . Ad Widget .

ಭೋಪಾಲ್: ಇಲ್ಲಿನ ಜಬಲ್‌ಪುರದ ಗಧಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ 80 ವರ್ಷದ ವ್ಯಕ್ತಿಯೊಬ್ಬ 65 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ. ಅತ್ಯಾಚಾರದ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಿಕೊಂಡು ಆರೋಪಿ ವೃದ್ಧನ ಹುಡುಕಾಟವನ್ನು ಪೊಲೀಸರು ಆರಂಭಿಸಿದ್ದಾರೆ.

Ad Widget . Ad Widget .

ಮೂಲಗಳ ಪ್ರಕಾರ ನಾಗಪುರದ ಅಮರಾವತಿಯ ನಿವಾಸಿ 65 ವರ್ಷದ ವೃದ್ಧೆ ಗರ್ಹಾ ಪ್ರದೇಶದಲ್ಲಿ ಕೆಲವು ವರ್ಷಗಳಿಂದ ಬಾಡಿಗೆಗೆ ವಾಸಿಸುತ್ತಿದ್ದು, ಕೆಲ ತಿಂಗಳುಗಳ ಹಿಂದೆ ಆಕೆಗೆ ವೃದ್ಧನ ಪರಿಚಯವಾಗಿತ್ತು. ವೃದ್ಧ ಆಗಾಗ್ಗೆ ಅವರ ಮನೆಗೆ ಭೇಟಿ ನೀಡಲು ಪ್ರಾರಂಭಿಸಿದ್ದು ಮನೆಗೆ ಹೋಗುವಾಗ ವೃದ್ಧ ಬಲವಂತವಾಗಿ ದೈಹಿಕ ಸಂಬಂಧ ಬೆಳೆಸಿದ್ದ ಎಂದು ಸಂತ್ರಸ್ತೆ ದೂರಿನಲ್ಲಿ ತಿಳಿಸಿದ್ದಾರೆ.

ಇದಾದ ಬಳಿಕ ವೃದ್ಧ ಏಕಾಏಕಿ ಮನೆಗೆ ನುಗ್ಗಿ ಅತ್ಯಾಚಾರ ನಡೆಸುತ್ತಿದ್ದ. ಈತನ ಕಿರುಕುಳ ತಡೆಯಲು ಸಾಧ್ಯವಾಗದಾಗ ಮಹಿಳೆ ತಡರಾತ್ರಿ ಪೊಲೀಸ್‌ ಠಾಣೆಗೆ ತೆರಳಿ ಆರೋಪಿಯ ವಿರುದ್ಧ ಎಫ್‌ಐಆರ್‌ ದಾಖಲಿಸಿದ್ದಾರೆ.

ಸಂತ್ರಸ್ತೆ ವೃದ್ಧೆಯ ಮಾತನ್ನು ಕೇಳಿದ ಪೊಲೀಸರೂ ಮೊದಲಿಗೆ ಆಶ್ಚರ್ಯಪಟ್ಟರೂ, ಬಳಿಕ ಪ್ರಕರಣವನ್ನು ಗಂಭೀರವಾಗಿ ಭಾವಿಸಿದ್ದು ಎಫ್ ಐಆರ್ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ಆರೋಪಿಯ ಹೆಸರು ಜ್ವಾಲಾ ಸಿಂಗ್ ಎಂದು ಹೇಳಲಾಗುತ್ತಿದ್ದು, ಮೊದಲು ವೃದ್ಧಾಪ್ಯದಲ್ಲಿ ಆಸರೆಯಾಗಲು ಸಹಾನುಭೂತಿ ತೋರಿಸಿ ಈ ಕೃತ್ಯ ಎಸಗಿರುವುದಾಗಿ ಹೇಳಲಾಗಿದೆ.

ಮುದುಕಿಯನ್ನು ತನ್ನ ಕಾಮತೃಷೆಗೆ ಬಳಸಿಕೊಂಡ ಆರೋಪಿ ಅತ್ಯಾಚಾರಿ ಜ್ವಾಲಾ ಸಿಂಗ್ ತಲೆಮರೆಸಿಕೊಂಡಿದ್ದು, ಆತನ ಪತ್ತೆಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *