Ad Widget .

ಆಸ್ಪತ್ರೆಯಲ್ಲಿ ಅಶ್ಲೀಲ ವರ್ತನೆ| ಆರೋಪಿ ಡಾ| ರತ್ನಾಕರ್ ಗೆ ಜಾಮೀನು

Ad Widget . Ad Widget .

ಮಂಗಳೂರು: ಕಚೇರಿಯ ಮಹಿಳಾ ಸಿಬಂದಿ ಜತೆ ಕಚೇರಿ ವೇಳೆ ಅಸಭ್ಯವಾಗಿ ವರ್ತಿಸುವ ಜತೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ ದ.ಕ.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಾರ್ಯಕ್ರಮ ಅಧಿಕಾರಿ ಡಾ| ರತ್ನಾಕರ್‌ ಅವರಿಗೆ 3ನೇ ಜೆಎಂಎಫ್ ಸಿ ನ್ಯಾಯಾಲಯ ಜಾಮೀನು ನೀಡಿದ್ದು, ಬಿಡುಗಡೆಯಾಗಿದ್ದಾನೆ.

Ad Widget . Ad Widget .

ಮಹಿಳಾ ಸಿಬಂದಿಗಳ ಜತೆ ಕಚೇರಿ ವೇಳೆ ಅಸಭ್ಯವಾಗಿ ವರ್ತಿಸುವ ಫೋಟೊ ಹಾಗೂ ವೀಡಿಯೋ ತುಣುಕು ಜಾಲತಾಣದಲ್ಲಿ ವೈರಲ್‌ ಆಗಿತ್ತು. ಸುಮಾರು 2-3 ತಿಂಗಳ ಹಿಂದೆ ಈ ಘಟನೆ ಸಂಭವಿಸಿದ್ದು, ತಡವಾಗಿ ಬೆಳಕಿಗೆ ಬಂದಿತ್ತು. ರತ್ನಾಕರ್‌ ಮಹಿಳಾ ಸಿಬಂದಿ ಜತೆ ಅಸಭ್ಯವಾಗಿ ವರ್ತಿಸುತ್ತಿರುವ ದೃಶ್ಯಾವಳಿಗಳು ಮಾಧ್ಯಮದಲ್ಲಿ ಶುಕ್ರವಾರ ಪ್ರಸಾರವಾದ ಬೆನ್ನಲ್ಲೇ ಕಚೇರಿ ಸಿಬಂದಿಯೊಬ್ಬರು ನಗರ ಪೊಲೀಸ್‌ ಆಯುಕ್ತರು ಹಾಗೂ ಮಹಿಳಾ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಮೇಲೆ ಆರೋಪಿ ರತ್ನಾಕರ್‌ನನ್ನು ಹೆಚ್ಚಿನ ವಿಚಾರಣೆಗಾಗಿ ಪೊಲೀಸರು
ವಶಕ್ಕೆ ಪಡೆದುಕೊಂಡಿದ್ದರು.

Leave a Comment

Your email address will not be published. Required fields are marked *