Ad Widget .

ಪುತ್ತೂರು: ವಿದ್ಯಾರ್ಥಿಗಳ ಹೊಡೆದಾಟ ಪ್ರಕರಣ| ಅರುಣ್ ಪುತ್ತಿಲ, ಜಗದೀಶ್ ಕಾರಂತ್ ಮೇಲೆ ಪ್ರಕರಣ ದಾಖಲಿಸಿದ ಪೊಲೀಸರು|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಪುತ್ತೂರು: ನಗರದ ಕೊಂಬೆಟ್ಟು ಜ್ಯೂನಿಯರ್ ಕಾಲೇಜ್ ವಿವಾದ ತಾರಕಕ್ಕೇರಿದ್ದು ಇದೀಗ ಪ್ರಮುಖ ಹಿಂದೂ ಸಂಘಟನೆಗಳ ನಾಯಕರ ಮೇಲೆ ಪ್ರಕರಣ ದಾಖಲಾಗಿದೆ.

Ad Widget . Ad Widget . Ad Widget .

ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಹಾಗೂ ಹಿಂದೂ ಜಾಗರಣೆ ವೇದಿಕೆ ಆಯೋಜಕರ ಮೇಲೆ ಐಪಿಸಿ ಸಕ್ಷನ್ 153 ಎ ಯಂತೆ ಪ್ರಕರಣ ದಾಖಲಾಗಿದೆ ಎಂದು ತಿಳಿದುಬಂದಿದೆ.

ಕೊಂಬೆಟ್ಟು ಜ್ಯೂ. ಕಾಲೇಜ್ ವಿದ್ಯಾರ್ಥಿಗಳ ನಡುವೆ ಹೊಡೆದಾಟ ನಡೆಯಲು ಅರುಣ್ ಕುಮಾರ್ ಪುತ್ತಿಲ ಹಾಗೂ ಚಿನ್ಮಯ ಈಶ್ವರಮಂಗಳ ನೇರ ಹೊಣೆ ಎಂದು ಕ್ಯಾಂಪಸ್ ಫ್ರಂಟ್ ಹಾಗೂ ಎಸ್ ಡಿ ಪಿ ಐ ಆರೋಪಿಸಿತ್ತು.

ವಾರದ ಹಿಂದೆ ಕೆಲ ವಿದ್ಯಾರ್ಥಿಗಳು ಚೂರಿಯಂತಹ ಚೂಪಾದ ಆಯುಧದ ಇರಿತಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾದ ಸಂದರ್ಭ
ಪುತ್ತೂರು ನಗರ ಠಾಣೆಗೆ ಮುತ್ತಿಗೆ ಹಾಕಿದ ಈ ಸಂಘಟನೆಗಳ ಮುಖಂಡರು ಪುತ್ತಿಲ ಹಾಗೂ ಚಿನ್ಮಯ್ ರೈ ಹೆಸರು ಉಲ್ಲೇಖಿಸಿ ಗುರುತರ ಆರೋಪಗಳನ್ನು ಮಾಡಿದ್ದರು

ಜ್ಯೂನಿಯರ್ ಕಾಲೇಜಿನ 7 ವಿದ್ಯಾರ್ಥಿಗಳನ್ನು ಪೊಲೀಸರು ಠಾಣೆಗೆ ಕರೆದೊಯಿದಿದ್ದಾರೆ ಎಂದು ಆರೋಪಿಸಿ ನ.26ರಂದು ಸಂಜೆ ಹಿಂದೂ ಸಂಘಟನೆಗಳು ಪುತ್ತೂರು ಠಾಣೆಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದವು. ಆ ನಂತರ ಎಸ್ ಡಿಪಿಐ ಕೂಡ ಮುತ್ತಿಗೆ ಹಾಕಿತು.

ಪುತ್ತಿಲ ವಿರುದ್ದ ಪ್ರಕರಣ ದಾಖಲಾದ ಬಗೆಗಿನ ಸುದ್ದಿ ಹಬ್ಬುತ್ತಿದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರ ವಾಟ್ಸಪ್ ಗ್ರೂಪಿಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.

ಎರಡು ದಿನಗಳ ಹಿಂದೆ ದ.ಕ.ಡಿಸಿ ನೀಡಿದ ದೂರಿನಂತೆ ಹಿಂಜಾವೇಯ ಕ್ಷೇತ್ರಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ ಕಾರಂತ ವಿರುದ್ದ ಬಂಟ್ವಾಳ ತಾಲೂಕಿನ ಪೂಂಜಾಲು ಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಗಿತ್ತು. ಇದೀಗ ಜಿಲ್ಲೆಯ ಇಬ್ಬರು ಹಿಂದೂ ನಾಯಕರ ವಿರುದ್ದ ದೂರು ದಾಖಲಾಗಿದೆ.

ಬಿಜೆಪಿಯ ಅಡಳಿತದ ಅವಧಿಯಲ್ಲಿಯೇ ಹಿಂದೂ ನಾಯಕರ ವಿರುದ್ದ ಪ್ರಕರಣ ದಾಖಲಾಗಿರುವುದು ಬಿಜೆಪಿ ಬೆಂಬಲಿತ ಕಾರ್ಯಕರ್ತರಿಗೆ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಹೀಗಾಗಿ ಸರಕಾರದ ವಿರುದ್ದ ಪಕ್ಷ ಹಾಗೂ ಸಂಘಟನೆಯ ಕಾರ್ಯಕರ್ತರು ಆಕ್ರೋಶ ವ್ಯಕ್ತ ಪಡಿಸುತ್ತಿದ್ದಾರೆ.

Leave a Comment

Your email address will not be published. Required fields are marked *