Ad Widget .

ಹೊಟ್ಟೆನೋವು ಎಂದ ಮಗಳನ್ನು ಆಸ್ಪತ್ರೆಗೆ ಕೊಂಡೊಯ್ದರು| ಆದರೆ ಆಸ್ಪತ್ರೆಯಲ್ಲಿ ಆಗಿದ್ದೇ ಬೇರೆ…! ಪೋಷಕರಿಗೆ ಕಾದಿತ್ತು ಬಿಗ್ ಶಾಕ್|

Ad Widget . Ad Widget .

ಕೊಪ್ಪಳ: ಹೊಟ್ಟೆನೋವು ಎಂದ ಪುತ್ರಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದ ಸಂದರ್ಭದಲ್ಲಿ ಪರೀಕ್ಷಿಸಿದ ವೈದ್ಯರು ಗರ್ಬಿಣಿಯಾಗಿರುವುದನ್ನು ತಿಳಿಸಿದ್ದಾರೆ. 17 ವರ್ಷದ ಅಪ್ರಾಪ್ತೆಗೆ ಹೆರಿಗೆಯಾಗಿದ್ದು ಜನಿಸಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ ಎಂದು ಹೇಳಲಾಗಿದೆ.

Ad Widget . Ad Widget .

ಕೊಪ್ಪಳ ಜಿಲ್ಲೆ ಗಂಗಾವತಿಯ ಕಾರಟಗಿಯಲ್ಲಿ 17 ವರ್ಷದ ಬಾಲಕಿಗೆ ನವೆಂಬರ್ 23ರಂದು ತೀವ್ರತರವಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಪೋಷಕರು ಆಕೆಯನ್ನು ಕಾರಟಗಿಯ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ತಪಾಸಣೆ ಮಾಡಿದ ವೈದ್ಯರು ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ಇದರಿಂದ ಆತಂಕಗೊಂಡ ಪೋಷಕರು ಪುತ್ರಿಯನ್ನು ವಿಚಾರಿಸಿದಾಗ ಆಕೆ ಯಾವುದೇ ಮಾಹಿತಿ ನೀಡಿಲ್ಲ.

ಕಾಲೇಜ್ ನಲ್ಲಿ ಓದುತ್ತಿರುವ ಆಕೆ ಘಟನೆಗೆ ಕಾರಣನಾದವನ ಬಗ್ಗೆ ಪೋಷಕರಿಗೆ ತಿಳಿಸಿಲ್ಲ. ಹೊಟ್ಟೆ ನೋವು ಇದ್ದ ಕಾರಣ ಆಸ್ಪತ್ರೆಯಲ್ಲಿಯೇ ದಾಖಲಾಗಿದ್ದ ಅಪ್ರಾಪ್ತೆಗೆ ನವೆಂಬರ್ 25 ರಂದು ಮಧ್ಯಾಹ್ನ ಹೆರಿಗೆ ನೋವು ಕಾಣಿಸಿಕೊಂಡು ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಜನಿಸಿದ ಕೆಲವೇ ಕ್ಷಣದಲ್ಲಿ ಮಗು ಮೃತಪಟ್ಟಿದೆ. ಪೋಷಕರು ಗಂಗಾವತಿ ಪೊಲೀಸ್ ಠಾಣೆಗೆ ದೂರು ನೀಡಿ ತಪ್ಪಿತಸ್ಥನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *