Ad Widget .

ಆರೋಗ್ಯ‌ ಸಿಬ್ಬಂದಿಯ ಕಾಮಪುರಾಣ| ಆರೋಪಿಯ ಮತ್ತೊಂದು ಮುಖವಾಡ ಬಯಲು|

Ad Widget . Ad Widget .

ಮಂಗಳೂರು: ಆರೋಗ್ಯ ಇಲಾಖೆ ಅಧಿಕಾರಿಯ ಕಾಮಪುರಾಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ವೈದ್ಯ ಡಾ. ರತ್ನಾಕರ್​ನ ಮತ್ತೊಂದು ಮುಖವಾಡ ಇದೀಗ ಬಯಲಾಗಿದೆ.

Ad Widget . Ad Widget .

ಆಯುಷ್ಮಾನ್ ನೋಡೆಲ್ ಆಫೀಸರ್ ಹಾಗೂ ಕುಷ್ಠರೋಗ ವಿಭಾಗದ ಆರೋಗ್ಯಾಧಿಕಾರಿ ಡಾ.ರತ್ನಾಕರ್ ವಿರುದ್ಧ ಮಹಿಳಾ ಸಿಬ್ಬಂದಿಯ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಗಂಭೀರ ಆರೋಪ ಕೇಳಿಬಂದ ಬೆನ್ನಲ್ಲೇ ಭ್ರಷ್ಟಾಚಾರದ ಆರೋಪ ಸಹ ಮಾಡಲಾಗಿದೆ.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಡಿಯಲ್ಲಿ ಜಿಲ್ಲಾ‌ ಕಾರ್ಯಕ್ರಮದ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಡಾ. ರತ್ನಾಕರ್, ಕಾರ್ಯಕ್ರಮ ಆಯೋಜನೆ ಹೆಸರಿನಲ್ಲಿಯೂ ಹಣ ದೋಚುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಅಲ್ಲದೆ, ಕ್ಯಾಂಟಿನ್​ ಬಿಲ್​ನಲ್ಲಿಯೂ ಸಾವಿರ ರೂ. ಅಕ್ರಮ ಬಿಲ್ ಮಾಡುತ್ತಿದ್ದ ಆರೋಪವಿದೆ.

ಎರಡ್ಮೂರು ದಿನಕ್ಕೊಮ್ಮೆ 150 ರಿಂದ 200 ಜನರಿಗೆ ಟೀ ತಿಂಡಿ ಎಂದು ಉಲ್ಲೇಖ ಮಾಡಿ 5 ರಿಂದ 10 ಸಾವಿರ ಮೊತ್ತದ ಒಂದೊಂದು ಕ್ಯಾಂಟಿನ್​ ಬಿಲ್ ಪಡೆಯುತ್ತಿದ್ದ ಎಂದು ತಿಳಿದುಬಂದಿದೆ. ಹೀಗಾಗಿ ಈ ಬಗ್ಗೆಯು ನಡೆಸುವಂತೆ ಒತ್ತಾಯಗಳು ಕೇಳಿಬರುತ್ತಿದೆ.

ಇನ್ನು ಮಹಿಳಾ ಸಿಬ್ಬಂದಿ ಮೇಲಿನ ದೌರ್ಜನ್ಯಕ್ಕೂ ಜಿಲ್ಲಾ ಆಸ್ಪತ್ರೆಗೂ ಸಂಬಂಧ ಇಲ್ಲ ಎಂದ ವೆನ್​ಲಾಕ್ ಜಿಲ್ಲಾಸ್ಪತ್ರೆಯ ಅಧೀಕ್ಷಕರು ಸ್ಪಷ್ಟೀಕರಣ ನೀಡಿದ್ದಾರೆ. ಮಹಿಳಾ ಸಿಬ್ಬಂದಿಯು ಜಿಲ್ಲಾ ಕಾರ್ಯಕ್ರಮ ಅಧಿಕಾರಿ ಕಚೇರಿಯಲ್ಲಿನ ಸಿಬ್ಬಂದಿಗಳೆಂದು ಹೇಳಿದ್ದಾರೆ.

Leave a Comment

Your email address will not be published. Required fields are marked *