Ad Widget .

ನೇಣಿಗೆ ಕೊರಳೊಡ್ಡಿದ ಪುನೀತ್ ಅಭಿಮಾನಿ| ನಿಲ್ಲದ ಅಭಿಮಾನಿಗಳ ಸಾವಿನ‌ ಓಟ|

Ad Widget . Ad Widget .

ಹಾಸನ: ಪುನೀತ್ ರಾಜ್‌ಕುಮಾರ್ ಅಗಲಿ ತಿಂಗಳಾಗುತ್ತಾ ಬಂದರೂ ಅವರ ಅಗಲಿಕೆಯ ನೋವು ಅಭಿಮಾನಿಗಳ ಮನದಲ್ಲಿ ಮಡುಗಟ್ಟಿದೆ. ಪುನೀತ್ ಇನ್ನಿಲ್ಲ ಎಂಬ ಕಠುಸತ್ಯವನ್ನು ಅಭಿಮಾನಿಗಳಿಗೆ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.

Ad Widget . Ad Widget .

ದೊಡ್ಮನೆ ಕುಟುಂಬದವರು ಅಭಿಮಾನಿಗಳ ಬಳಿ ಕೈಮುಗಿದು ಕೇಳಿ ಕೊಂಡರೂ ಪ್ರಯೋಜನವಾಗಿಲ್ಲ. ಅಪ್ಪು ಅಭಿಮಾನಿಗಳ ಆತ್ಮಹತ್ಯೆ ಸರಣಿ ಇನ್ನೂ ನಿಂತಿಲ್ಲ.

ಇಂದು ಹಾಸನದಲ್ಲಿ ಅಪ್ಪು ಅಭಿಮಾನಿ ಮಯೂರ ಎಂಬುವರು ನೇಣಿಗೆ ಶರಣಾಗಿದ್ದಾರೆ. ಮಯೂರ ಡಾ.ರಾಜ್‌ಕುಮಾರ್ ಅವರ ಅಭಿಮಾನಿಯಾಗಿದ್ದರು. ಅಂತೆಯೇ ಪುನೀತ್ ಅವರ ಅಭಿಮಾನಿಯೂ ಆಗಿದ್ದರು. ಹಲವು ಭಾರಿ ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾಗಿದ್ದರು. ಪುನೀತ್, ಶಿವಣ್ಣ ಹುಟ್ಟುಹಬ್ಬ ಆಚರಣೆ, ರಾಜ್‌ಕುಮಾರ್ ಹುಟ್ಟುಹಬ್ಬ, ಪುಣ್ಯಸ್ಮರಣೆಯನ್ನು ತಪ್ಪದೆ ಆಚರಿಸುತ್ತಿದ್ದರು. ರಾಜ್‌ಕುಮಾರ್ ಅಭಿಮಾನಿ ಸಂಘದ ಅಧ್ಯಕ್ಷರೂ ಆಗಿದ್ದರು ಮಯೂರ.

ಅಪ್ಪು ನಿಧನದ ಬಳಿಕ ಮಯೂರ ಬಹಳ ಮನನೊಂದಿದ್ದರು. ತೀವ್ರ ಆಘಾತಕ್ಕೆ ಒಳಗಾಗಿದ್ದರು. ಪ್ರತಿ ದಿನವೂ ಸಾಮಾಜಿಕ ಜಾಲತಾಣಗಳಲ್ಲಿ ಪುನೀತ್ ರಾಜ್‌ಕುಮಾರ್ ಕುರಿತು ಚಿತ್ರಗಳು, ವಿಡಿಯೋಗಳು, ಸ್ಟೇಟಸ್‌ ಹಾಕುತ್ತಿದ್ದರು. ಕೊನೆಗೆ ನವೆಂಬರ್ 24 ರಂದು ರಾತ್ರಿ ತಮ್ಮ ನಿವಾಸದಲ್ಲಿ ನೇಣು ಕುಣಿಕೆಗೆ ಕೊರಳೊಡ್ಡಿದ್ದಾರೆ. ಘಟನೆಯು ಪೆನ್ಷನ್ ಮೊಹಲ್ಲ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಪುನೀತ್ ಸಾವಿನ ಬಳಿಕ ಸುಮಾರು 15 ಕ್ಕೂ ಹೆಚ್ಚು ಮಂದಿ ಅಪ್ಪು ಅಭಿಮಾನಿಗಳು ನಿಧನ ಹೊಂದಿದ್ದಾರೆ. ಅದರಲ್ಲಿ ಅರ್ಧಕ್ಕಿಂತ ಹೆಚ್ಚು ಮಂದಿ ಅಭಿಮಾನಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

Leave a Comment

Your email address will not be published. Required fields are marked *