Ad Widget .

ರಾಜಕೀಯ ನಾಯಕರೇ ನಿಜವಾದ ಗೂಂಡಾಗಳು, ಭ್ರಷ್ಟರನ್ನು ಗುಂಡಿಟ್ಟು ಕೊಲ್ಲಬೇಕು – ಮುತಾಲಿಕ್ ಕಿಡಿ

Ad Widget . Ad Widget .

ವಿಜಯಪುರ: ರಾಜಕೀಯ ನಾಯಕರು ನಿಜವಾದ ಗೂಂಡಾಗಳು. ಚುನಾವಣೆ ಬಂದಾಗ ಹಿಂದೂಗಳನ್ನು ಬಳಸಿಕೊಳ್ಳುತ್ತಾರೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ವಾಗ್ದಾಳಿ ನಡೆಸಿದ್ದಾರೆ.

Ad Widget . Ad Widget .

ವಿಜಯಪುರದಲ್ಲಿ ಮಾತನಾಡಿದ ಮುತಾಲಿಕ್, ಚುನಾವಣೆ ಬಂದಾಗ ರಾಜಕೀಯಕ್ಕೆ ಹಿಂದೂಗಳನ್ನು ಬಳಸಿಕೊಳ್ಳುತ್ತಾರೆ. ಬಳಿಕ ಹಿಂದುತ್ವಕ್ಕೆ ಹೋರಾಡಿದವರ ಮೇಲೆ ರೌಡಿಶೀಟರ್ ಕೇಸ್ ಹಾಕಲಾಗುತ್ತದೆ. ಅದನ್ನು ತಡೆಗಟ್ಟುವುದನ್ನು ಬಿಟ್ಟು, ತಮ್ಮ ಸ್ವಾರ್ಥಕ್ಕಾಗಿ ಹಿಂದುಗಳನ್ನು ಬಳಸಿಕೊಳ್ಳುತ್ತಾರೆ ಎಂದು ಹೇಳಿದ್ದಾರೆ.

ಹಂಸಲೇಖ ಅವರು ದೊಡ್ಡ ವ್ಯಕ್ತಿ. ಅವರು ಅಂತಹ ಶಬ್ದ ಮಾತನಾಡಬಾರದಿತ್ತು. ಆದರೂ ಮಾತನಾಡಿದ್ದಾರೆ. ಅದನ್ನು ಖಂಡಿಸಿದ್ದೇನೆ. ಅವರು ಕ್ಷಮೆ ಕೇಳಿದ್ದಾರೆ. ಇಷ್ಟೆಲ್ಲಾ ಮಾಡುವ ಚೇತನ್ ಎಷ್ಟು ದಲಿತ ಕೇರಿಗಳಿಗೆ ಭೇಟಿ ನೀಡಿದ್ದಾರೆ. ದಲಿತರ ಪರ ನಿಮ್ಮ ಕೊಡುಗೆ ಏನು? ಇಂತಹದ್ದೆ ಅವಕಾಶಕ್ಕೆ ಕಾಯುತ್ತಿರುತ್ತಾರೆ ಎಂದು ಹೇಳಿದ್ದಾರೆ.

ಎಸಿಬಿ ರೇಡ್ ವಿಚಾರವಾಗಿ ಮಾತನಾಡಿದ ಅವರು, ಇಂತಹ ಅಧಿಕಾರಿಗಳನ್ನು ಗಲ್ಲಿಗೆ ಏರಿಸಬೇಕು. ಸಾಲಾಗಿ ನಿಲ್ಲಿಸಿ ಗುಂಡು ಹಾಕಬೇಕು. ಇವರ ಹಿಂದೆ ದೊಡ್ಡ ದೊಡ್ಡ ರಾಜಕಾರಣಿಗಳಿದ್ದಾರೆ. ಅವರನ್ನೂ ಹೊರಗೆ ಹಾಕಬೇಕು. ಹೊರಗೆ ಇದ್ದೋರು ಬಂದೂಕು, ಚಾಕು ಚೂರಿ ಹಿಡಿದುಕೊಂಡು ಲೂಟಿ ಮಾಡ್ತಾರೆ. ರಾಜಕೀಯದಲ್ಲಿ ಇದ್ದವರು ಅಧಿಕಾರಿಗಳನ್ನು ಬಳಸಿಕೊಂಡು ಲೂಟಿ ಮಾಡುತ್ತಾರೆ. ಎಲ್ಲ ಪಕ್ಷದ ಬಹುತೇಕ ರಾಜಕಾರಣಿಗಳು ಭ್ರಷ್ಟರು, ಗೂಂಡಾಗಳಾಗಿದ್ದಾರೆ ಎಂದು ಹೇಳಿದ್ದಾರೆ.

Leave a Comment

Your email address will not be published. Required fields are marked *