ಕಾರವಾರ: ವಿಶ್ವ ಪ್ರಸಿದ್ದ ಧಾರ್ಮಿಕ ಮತ್ತು ಪ್ರವಾಸಿ ತಾಣವಾದ ಮುರ್ಡೇಶ್ವರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಣ್ಣು ಬಿದ್ದಿರುವ ಶಂಕೆಯ ಮೇಲೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಕೆಲ ದಿನಗಳ ಹಿಂದಿನಿಂದ ಇಲ್ಲಿನ ಬೃಹತ್ ಶಿವನ ವಿಗ್ರಹ ವಿರೂಪಗೊಳಿಸಿದ ಪೋಟೋ ವೈರಲ್ ಆಗಿದ್ದರಿಂದ ಸರ್ಕಾರ ಎಚ್ಚೆತ್ತುಕೊಂಡಿದೆ.
ಧಾರ್ಮಿಕ ಭಾವನೆಗೆ ಧಕ್ಕೆ ತಂದ ಕುಚೋದ್ಯರನ್ನ ಬಂಧಿಸಬೇಕೆಂದು ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು, ಹಿಂದೂ ಪರ ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಏನಿದು ಘಟನೆ?
ಉತ್ತರ ಕನ್ನಡ ಜಿಲ್ಲೆಯ ಮುರುಡೇಶ್ವರಕ್ಕೆ ಈಗ ಹೆಚ್ಚಿನ ಪೋಲಿಸ್ ಭದ್ರತೆ ಒದಗಿಸಲಾಗಿದೆ. ಐಸಿಸ್ ಮ್ಯಾಗ್ ಜಿನ್ ನಲ್ಲಿ ಶಿರಚ್ಛೇದ ವಾದ ಈಶ್ವರನ ಬೃಹತ್ ಮೂರ್ತಿಯನ್ನ ಹರಿದಾಡಿ ಸಾಕಷ್ಟು ಆತಂಕ ಸೃಷ್ಟಿಸಿದ ಬೆನ್ನಲ್ಲೆ ಭದ್ರತೆ ನೀಡಲಾಗಿದೆ. ಮುರುಡೇಶ್ವರ ದಲ್ಲಿ ಹಿಂದುಪರ ಸಂಘಟನೆಯಿಂದ ಉಗ್ರ ಸಂಘಟನೆ ವಿರುದ್ದ ಪ್ರತಿಭಟನೆ ಕೂಡಾ ನಡೆಯುತ್ತಿದೆ. ವಿಕೃತಿ ಎಸಗಿದವರ ವಿರುದ್ದ ಕೇಂದ್ರ ಸರಕಾರ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂಬ ಕೂಗು ಆಕ್ರೋಶ ಜೋರಾಗಿದೆ. ಇನ್ನು ಮುರುಡೇಶ್ವರದಲ್ಲಿ ಹೆಚ್ಚಿನ ಪೋಲಿಸ್ ಭದ್ರತೆ ಯನ್ನ ಒದಗಿಸಲಾಗಿದೆ ಜತೆಗೆ ಸಮುದ್ರದಲ್ಲಿ ಕರಾವಳಿ ಕಾವಲು ಪಡೆಯಿಂದ ನಿರಂತರ ಗಸ್ತು ನಡೆಯುತ್ತಿದೆ. ನಿನ್ನೆಯಿಂದ ಮುರುಡೇಶ್ವರ ಕ್ಕೆ ಬರುವ ಪ್ರತಿ ಪ್ರವಾಸಿಗರ ವಾಹನವನ್ನ ತಪಾಸಣೆ ಮಾಡಿ ಮುಂದಿನ ಸಂಚಾರಕ್ಕೆ ಅನುವು ನಾಡಿಕೊಡಲಾಗುತ್ತಿದೆ. ಹೀಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ ವಿಕೃತ ಪೋಟೊ ಸಾಕಷ್ಟು ಆತಂಕ ಸೃಷ್ಟಿಸಿದೆ.
ಐಸಿಸ್ ಮುಖವಾಣಿಯಲ್ಲಿ ಮುರ್ಡೇಶ್ವರದ ಚಿತ್ರ
ಶ್ರೀ ಮುರುಡೇಶ್ವರ ದೇವಾಲಯಕ್ಕೆ ಸಾಕಷ್ಟು ಸಂಖ್ಯೆಯಲ್ಲಿ ಭಕ್ತರು ಆಗಮಿಸ್ತಾರೆ. ವಿಶ್ವ ಪ್ರಸಿದ್ದವಾಗಿರುವ ಈ ಕ್ಷೇತ್ರದ ಮೇಲೆ ಐಸಿಸ್ ಉಗ್ರ ಸಂಘಟನೆ ಕಾಕ ದೃಷ್ಟಿ ಬಿದ್ದಿರುವ ಅನುಮಾನ ಮೂಡಿದೆ. ಇಲ್ಲಿರುವ ಶಿವನ ಪ್ರತಿಮೆಯ ಪೋಟೋವನ್ನ ವಿರೂಪಗೊಳಿಸಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಿರುವುದು ಆತಂಕಕ್ಕೆ ಕಾರಣವಾಗಿದೆ. ಐಸಿಸ್ ಮುಖವಾಣಿ ದಿ ವೈಸ್ ಆಪ್ ಹಿಂದ್ ನಲ್ಲಿ ಈ ರೀತಿಯಾಗಿ ಪ್ರಕಟವಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹರಿದಾಡತ್ತಿದೆ. ಈ ಹಿನ್ನಲೆಯಲ್ಲಿ ರಾಜ್ಯ ಗೃಹ ಇಲಾಖೆ ಸೂಚನೆ ಮೇರೆಗೆ ಮುರ್ಡೇಶ್ವರಕ್ಕೆ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಮುರ್ಡೇಶ್ವರ ಆಸುಪಾಸಿನ ಪ್ರದೇಶಗಳಲ್ಲಿ ಪೊಲೀಸರನ್ನ ನಿಯೋಜಿಸಲಾಗಿದೆ.