ಭ್ರಷ್ಟರ ಬೇಟೆ| ನೀರಿನ ಪೈಪ್ ಒಳಗೂ ಹಣ ಕೂಡಿಟ್ಟ ಅಸಾಮಿ|

Ad Widget ... ..

ಕಲಬುರಗಿ: ಇಲ್ಲಿ ಬುಧವಾರ ನಡೆದ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಕಂತೆ ಕಂತೆ ನೋಟುಗಳನ್ನು ಕಂಡು ಅಧಿಕಾರಿಗಳೇ ಬೆಚ್ಚಿ ಬಿದ್ದಿದ್ದಾರೆ. ಲೋಕೋಪಯೋಗಿ ಇಲಾಖೆಯ ಜೆಇ ಶಾಂತಗೌಡ ಬಿರಾದಾರ ಮನೆ ಮೇಲೆ ಎಸಿಬಿ ದಾಳಿ ವೇಳೆ ನೀರಿನ ಪೈಪ್ ನಲ್ಲಿ ಹಣ ಪತ್ತೆಯಾಗಿದ್ದು ಇದನ್ನು ನೋಡಿದ ಅಧಿಕಾರಿಗಳು ದಂಗಾಗಿ ಹೋಗಿದ್ದಾರೆ.

Ad Widget

ಎಸಿಬಿ ದಾಳಿ ನಡೆದಾಗ ಹಣವನ್ನು ಪೈಪ್ ನಲ್ಲಿ ತುಂಬಿರುವ ಶಂಕೆ ವ್ಯಕ್ತವಾಗಿದೆ. ಪರಿಶೀಲನೆ ‌ನಡೆಸಿದಾಗ ನೀರಿನಂತೆ ಹಣ ಪೈಪ್ ಒಳಗಿಂದ ಹರಿದು ಬಂದಿದೆ.

ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳು ಬುಧವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ರಾಜ್ಯದ 68 ಕಡೆಗಳಲ್ಲಿ ಭ್ರಷ್ಟ ಅಧಿಕಾರಿಗಳ ನಿವಾಸಗಳ ಮೇಲೆ ದಾಳಿ ನಡೆಸಿದ್ದು, ಭಾರಿ ಪ್ರಮಾಣದ ಚಿನ್ನಾಭರಣ, ನಗದು ಪತ್ತೆಯಾಗಿದೆ.

Leave a Comment

Your email address will not be published. Required fields are marked *