Ad Widget .

ಉಗ್ರರಿಗೆ ಹಣ‌ ಕಳುಹಿಸುತ್ತಿದ್ದ ದಂಪತಿಗೆ ಕಠಿಣ ಶಿಕ್ಷೆ| ಭಾರತದಲ್ಲೇ‌ ಹಣ ಸಂಗ್ರಹಿಸಿ ಸಿಮಿ ಉಗ್ರರಿಗೆ ನೀಡುತ್ತಿದ್ದ ಗಂಡ-ಹೆಂಡತಿ..!

Ad Widget . Ad Widget .

ಮಂಗಳೂರು : ಭಯೋತ್ಪಾದಕ ಸಂಘಟನೆಯ ಜತೆ ಸಂಪರ್ಕ ಹೊಂದಿ ಉಗ್ರರಿಗೆ ನೆರವು ನೀಡುತ್ತಿದ್ದ ಮಂಗಳೂರಿನ ದಂಪತಿಗೆ ಇದೀಗ 10 ವರ್ಷಗಳ ಶಿಕ್ಷೆಯಾಗಿದೆ.
ಜುಬೇರ್ ಹುಸೇನ್ (42), ಆತನ ಪತ್ನಿ ಆಯೇಷಾ ಬಾನು (39) ಶಿಕ್ಷೆಗೊಳಗಾದವರು.

Ad Widget . Ad Widget .

ಇವರು ನಿಷೇಧಿತ ಸಿಮಿ, ಇಂಡಿಯನ್ ಮುಜಾಹಿದೀನ್ ಸಂಘಟನೆಗಳಿಗೆ ಹಣ ಭಾರತದಿಂದ ಹಣ ಸಂಗ್ರಹಿಸಿ ಕಳುಹಿಸಿಕೊಡುತ್ತಿದ್ದರು.

ಮಂಗಳೂರು ಮೂಲದ ಈ ದಂಪತಿ ಛತ್ತೀಸ್‌ಗಢ ರಾಯಪುರದಲ್ಲಿ ಸದ್ಯ ವಾಸವಾಗಿದ್ದರು. ಆರಂಭದಲ್ಲಿ ಮಂಗಳೂರಿನಿಂದಲೇ ತಮ್ಮ ಕುಕೃತ್ಯ ನಡೆಸುತ್ತಿದ್ದ ಇವರು ನಂತರ ರಾಯಪುರದಲ್ಲಿ ಸಿಕ್ಕಿಬಿದ್ದಿದ್ದರು. ಇವರ ಜತೆ ಇನ್ನೂ ಇಬ್ಬರು ಸಹಚರರು ಪೊಲೀಸರ ಸೆರೆ ಸಿಕ್ಕಿದ್ದರು. ಇವರ ಮೇಲಿನ ಆರೋಪ ಸಾಬೀತಾಗಿರುವ ಹಿನ್ನೆಲೆಯಲ್ಲಿ ರಾಯಪುರದ ಕೋರ್ಟ್‌ 10 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಮಂಗಳೂರಿನಿಂದಲೇ ತಮ್ಮ ಕಾರ್ಯವನ್ನು ಶುರು ಮಾಡಿದ್ದ ಈ ದಂಪತಿ ನೆರೆಹೊರೆಯವರ ಜತೆ ಸಭ್ಯರಂತೆ ವರ್ತಿಸುತ್ತಿದ್ದು ಆಯೆಷಾ ಯಾರಿಗೂ ಅನುಮಾನ ಬಾರದಂತೆ ತನ್ನ ಕೆಲಸ ಮಾಡುತ್ತಿದ್ದಳು. ಅಲ್ಲಿಂದ ಈ ದಂಪತಿ ರಾಯಪುರಕ್ಕೆ ಹೋಗಿ ಅಲ್ಲಿ ತಮ್ಮ ಕುಕೃತ್ಯ ಮುಂದುವರೆಸಿದ್ದರು.

2013ರಲ್ಲಿ ಬೀದಿ ಬದಿಯಲ್ಲಿ ಹೋಟೆಲ್ ಮಾಡುತ್ತಿದ್ದ ಧೀರಜ್ ಸಾವೋ ಎಂಬ ಉಗ್ರನನ್ನು ಬಂಧಿಸಲಾಗಿತ್ತು. ಈತ ಇಂಡಿಯನ್ ಮುಜಾಹಿದೀನ್, ಸಿಮಿ ಸಂಘಟನೆ ಜತೆ ಸಂಬಂಧ ಹೊಂದಿದವರಿಗೆ ಪಾಕಿಸ್ತಾನದ ಖಾಲಿದ್ ಎಂಬುವವನಿಂದ ಹಣ ಪಡೆದು ಉಗ್ರರ ಖಾತೆಗೆ ರವಾನಿಸುತ್ತಿದ್ದ ವಿಷಯ ಬಹಿರಂಗಗೊಂಡಿತು.

ಈತನ ಹಿನ್ನೆಲೆ ಕೆದಕಿದಾಗ ಸಿಕ್ಕಿದ್ದೇ ಈ ಆಯೇಷಾ ಬಾನೋ. ಈಕೆಯ ಬ್ಯಾಂಕ್ ಖಾತೆಗೂ ಸಹ ಈತನಿಂದ ಹಣದ ವರ್ಗಾವಣೆ ಆಗುತ್ತಿತ್ತು. ಆಕೆಯ ಮೂಲ ಕೆದಕಿದಾಗ ಮಂಗಳೂರು ಮೂಲಕ ಈಕೆ ತನ್ನ ಪತಿಯ ಜತೆಗೂಡಿ ಉಗ್ರ ಕೃತ್ಯದಲ್ಲಿ ತೊಡಗಿರುವುದು ತಿಳಿಯಿತು. ಸಿಮಿ ಹಾಗೂ ಇಂಡಿಯನ್ ಮುಜಾಹಿದೀನ್ ಉಗ್ರರ ಜತೆ ಕೂಡ ಈಕೆ ನಂಟು ಹೊಂದಿರುವುದು ಬಹಿರಂಗವಾಯಿತು. ಇವಳು ಬಿಹಾರದ ಸುಮಾರು 50 ಬ್ಯಾಂಕ್ ಖಾತೆಯ ನೆಟ್ ಬ್ಯಾಂಕಿಂಗ್ ಅನ್ನು ಹೊಂದಿದ್ದಳು. ಇದರ ಮೂಲಕ ಉಗ್ರರಿಗೆ ಹಣ ನೀಡುತ್ತಿದ್ದಳು.

ಆದಾಯ ತೆರಿಗೆ ಇಲಾಖೆಯ ಕಣ್ಣನ್ನು ತಪ್ಪಿಸಲು 49 ಸಾವಿರಕ್ಕಿಂತ ಕಡಿಮೆ ಹಣವನ್ನು ವರ್ಗವಣೆ ಮಾಡುತ್ತಿದ್ದಳು. ಮೊದಮೊದಲು ಅಕ್ಕಪಕ್ಕದ ಮನೆಯವರಿಗೆ ವಿಚಾರಿಸಿದಾಗ ಸಭ್ಯಳಂತೆ ಇದ್ದ ಈಕೆಯ ಬಗ್ಗೆ ಯಾರಿಗೂ ಸುಳಿವೇ ಇರದದ್ದು ತಿಳಿಯಿತು. ಕೊನೆಗೆ ಎಲ್ಲಾ ಸಾಕ್ಷ್ಯಾಧಾರಗಳನ್ನು ಕಲೆಹಾಕಿದ ಪೊಲೀಸರ ಕೈಗೆ ಕೊನೆಗೂ ಸಿಕ್ಕಿಬಿದ್ದಳು. ಈ ದಂಪತಿ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿ ಕೇಸ್‌ ದಾಖಲಾಗಿತ್ತು. ಇದೀಗ 10 ವರ್ಷಗಳ ಕಠಿಣ ಶಿಕ್ಷೆಯಾಗಿದೆ.

Leave a Comment

Your email address will not be published. Required fields are marked *