Ad Widget .

ಎರಡು ಜೀವಗಳನ್ನು ಬಲಿ ಪಡೆದ ದುಬಾರಿ ಟೊಮ್ಯಾಟೊ| ತೋಟದಿಂದ ಕದಿಯಲು ಹೋಗಿ ಅವಾಂತರ|

. Ad Widget . . Ad Widget . Ad Widget Ad Widget . Ad Widget . Ad Widget . Ad Widget . Ad Widget . Ad Widget . Ad Widget .

ಚಿಕ್ಕಬಳ್ಳಾಪುರ: ಟೊಮ್ಯಾಟೊ ಬೆಲೆ ದುಬಾರಿಯಾಗಿರುವ ಹಿನ್ನೆಲೆಯಲ್ಲಿ ತೋಟದಲ್ಲಿ ಬೆಳೆದಿದ್ದ ಟೋಮ್ಯಾಟೊ ಕದಿಯಲು ಹೋಗಿದ್ದ ಇಬ್ಬರು ಯುವಕರು ಬೇಲಿಗೆ ಹಾಕಿದ್ದ ವಿದ್ಯುತ್ ಪ್ರವಹಿಸಿ ಮೃತಪಟ್ಟ ದಾರುಣ ಘಟನೆ ಜಿಲ್ಲೆಯ ಗೌರಿಬಿದನೂರು ತಾಲ್ಲೂಕಿನ ಚರಕಮಟ್ಟೇನಹಳ್ಳಿ ಬಳಿ ಸಂಭವಿಸಿದೆ.

Ad Widget . Ad Widget . Ad Widget .

ಟೊಮ್ಯಾಟೊ ಬೆಳೆಗೆ ತೋಟದ ಮಾಲಿಕ ಅಶ್ವಥರಾವ್ ವಿದ್ಯುತ್ ಬೇಲಿ ಹಾಕಿದ್ದರು. ವಿದ್ಯುತ್ ಬೇಲಿ ತಗುಲಿ ವಸಂತರಾವ್ (28) ಸ್ಥಳದಲ್ಲೇ ಮೃತಪಟ್ಟರೆ, ಸಾವಿನ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಸ್ಥಳೀಯರು ತೋಟದ ಮಾಲಿಕನನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆಗೈದಿದ್ದಾರೆ.

ತೋಟದ ಮಾಲಿಕ ಅಶ್ವಥರಾವ್ ಮೇಲೆ ಚಾಕು ಮಚ್ಚುಗಳಿಂದ ಸ್ಥಳೀಯರು ಇರಿದಿದ್ದಾರೆ. ಗಂಭೀರ ಗಾಯಗೊಂಡ ಅಶ್ವಥರಾವ್ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ವಸಂತರಾವ್ ಕುಟುಂಬ ಹಾಗೂ ಅಶ್ವಥರಾವ್ ಕುಟುಂಬದ ಮಧ್ಯೆ ಇರುವ ಹಳೆಯ ದ್ವೇಷ ಇತ್ತು ಎನ್ನಲಾಗಿದ್ದು, ಕೈಗೆ ಬಂದಿದ್ದ ಟೊಮ್ಯಟೊ ಕದಿಯಲು ವಸಂತರಾವ್ ಹೋಗಿದ್ದರು ಎನ್ನಲಾಗಿದೆ. ಟೊಮ್ಯಾಟೊ ಬೆಳೆ ರಕ್ಷಿಸಿಕೊಳ್ಳಲು ಅಶ್ವಥರವ್ ತಂತಿ ಬೇಲಿಗೆ ವಿದ್ಯುತ್ ಹರಿಸಿದ್ದರು. ಇದೀಗ ಎರಡೂ ಕುಟುಂಬದವರು ಒಂದು ಜೀವ ಕಳೆದುಕೊಳ್ಳುವಂತಾಗಿದೆ.

ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment

Your email address will not be published. Required fields are marked *