Ad Widget .

ದೋಣಿ ಮುಳುಗಿ 31 ವಲಸಿಗರು ಜಲಸಮಾಧಿ

Ad Widget . Ad Widget .

ಪ್ಯಾರಿಸ್: ಇಂಗ್ಲಿಷ್ ಕಡಲ್ಗಾಲುವೆಯಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ದೋಣಿ ಮುಳುಗಿ ಬ್ರಿಟನ್’ಗೆ ಪ್ರಯಾಣಿಸುತ್ತಿದ್ದ 31 ವಲಸಿಗರು ಜಲ ಸಮಾಧಿಯಾಗಿರುವ ಘಟನೆ ನಡೆದಿದೆ.

Ad Widget . Ad Widget .

ಘಟನೆ ಕುರಿತು ಮಾಹಿತಿ ನೀಡಿರುವ ಫ್ರಾನ್ಸ್ ನ ಒಳಾಡಳಿತ ಸಚಿವ ಗೆರಾಲ್ಡ್ ಡಾರ್ಮನಿನ್ , ಬ್ರಿಟನ್ ಗೆ ಪ್ರಯಾಣಿಸುತ್ತಿದ್ದ 34 ವಲಸಿಗರ ಪೈಕಿ ಐವರು ಮಹಿಳೆಯರು, ಓರ್ವ ಬಾಲಕಿ ಸೇರಿದಂತೆ 31 ವಲಸಿಗರು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಇಬ್ಬರು ಬದುಕಿದ್ದಾರೆ. ಓರ್ವ ವ್ಯಕ್ತಿ ನಾಪತ್ತೆಯಾಗಿದ್ದಾನೆ. ಪ್ರಯಾಣಿಕರು ಯಾವ ದೇಶದವರು ಎಂದು ತಿಳಿದುಬಂದಿಲ್ಲ ಎಂದು ಹೇಳಿದ್ದಾರೆ.

ಸದ್ಯ ಘಟನಾ ಸ್ಥಳದಲ್ಲಿ ಫ್ರೆಂಚ್-ಬ್ರಿಟಿಷ್ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಇದುವರೆಗೂ ಒಟ್ಟು 31 ಶವಗಳನ್ನು ಹೊರತೆಗೆಯಲಾಗಿದೆ ಎಂದು ಡಾರ್ಮನಿನ್ ಹೇಳಿದ್ದಾರೆ.

Leave a Comment

Your email address will not be published. Required fields are marked *