Ad Widget .

ವಿಶ್ವಪ್ರಸಿದ್ದ ಮುರುಡೇಶ್ವರದ ಶಿವನ ಮೂರ್ತಿಗೆ ಬಂತೇ ಸಂಚಕಾರ..?, ಐಸಿಸ್ ಪತ್ರಿಕೆಯಲ್ಲಿ ವಿರೂಪಗೊಂಡ ಪ್ರತಿಮೆ| ಏನಿದು ಮಹಾದೇವಾ..?

Ad Widget . Ad Widget .

ಕಾರವಾರ: ಇತಿಹಾಸ ಪ್ರಸಿದ್ಧ ಧಾರ್ಮಿಕ ಸ್ಥಳಗಳಲ್ಲಿ ಒಂದಾದ ಉತ್ತರ ಕನ್ನಡದ ಮುರುಡೇಶ್ವರದ ಬೃಹತ್ ಈಶ್ವರ ಪ್ರತಿಮೆ ಚಿತ್ರ ಜಗತ್ತಿನ ಕುಖ್ಯಾತ ಉಗ್ರ ಸಂಘಟನೆಯ ಪತ್ರಿಕೆಯಲ್ಲಿ ಪ್ರಕಟವಾಗಿದ್ದು, ಇನ್ನು ಇದು ಉಗ್ರ ಸಂಘಟನೆ ದಾಳಿಯ ಪಿತೂರಿ ಎಂಬ ಅನುಮಾನ ಮೂಡಿದೆ.

Ad Widget . Ad Widget .

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುರುಡೇಶ್ವರ ಶಿವನ ವಿಗ್ರಹದ ಶಿರವನ್ನು ಕತ್ತರಿಸಿದಂತೆ ಎಡಿಟ್ ಮಾಡಲಾದ ಫೋಟೊವನ್ನು ಉಗ್ರ ಸಂಘಟನೆ ಐಸಿಸ್ ಪತ್ರಿಕೆಯಲ್ಲಿ ಪ್ರಕಟಿಸಲಾಗಿದ್ದು, ಸಧ್ಯ ಈ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

ಮಾದ್ಯಮ ಸುದ್ದಿ ವಿಶ್ಲೇಷಕ ಅಂಶುಲ್ ಸಕ್ಸೇನಾ ಎಂಬುವವರು ಇದನ್ನು ತಮ್ಮ ಖಾತೆಗಳಲ್ಲಿ ಪೋಸ್ಟ್ ಮಾಡಿ ಸರ್ಕಾರದ ಗಮನ ಸೆಳೆಯಲು ಯತ್ನಿಸಿದ್ದಾರೆ. ಐಸಿಸ್ ಮುಖವಾಣಿ ಪತ್ರಿಕೆ ದಿ ವಾಯ್ಸ್ ಆಫ್ ಹಿಂದ್ ನಲ್ಲಿ ಮುರುಡೇಶ್ವರದ ಶಿವನ ವಿಗ್ರಹವನ್ನು ಪ್ರಕಟಿಸಲಾಗಿದೆ. ಅದರ ಮೇಲೆ ಇದು ನಕಲಿ ದೇವರನ್ನು ಒಡೆಯುವ ಸಮಯ ಎಂಬ ವಾಕ್ಯವನ್ನು ಬರೆಯಲಾಗಿದೆ. ಶಿವನ ಪ್ರತಿಮೆಯ ತಲೆಯನ್ನು ಕತ್ತರಿಸಿ, ತಲೆಯ ಭಾಗದಲ್ಲಿ ಉಗ್ರ ಸಂಘಟನೆಯ ಮಾದರಿಯ ಧ್ವಜ ಹಾರಾಡುತ್ತಿರುವಂತೆ ಚಿತ್ರಿಸಲಾಗಿದೆ.

ಇನ್ನು ಇದರ ಕುರಿತು ಕೂಡಲೇ ಸುರಕ್ಷಾ ಕ್ರಮ ಕೈಗೊಳ್ಳಬೇಕು ಎಂದು ಅವರು ತಮ್ಮ ಪೋಸ್ಟ್‌ನಲ್ಲಿ ಸರ್ಕಾರಗಳನ್ನು ಆಗ್ರಹಿಸಿದ್ದಾರೆ.

Leave a Comment

Your email address will not be published. Required fields are marked *