Ad Widget .

ಭೀಕರ ರಸ್ತೆ ದುರಂತ| ಹೊತ್ತಿ ಉರಿದ ಪ್ರವಾಸಿ ಬಸ್| 12 ಮಕ್ಕಳು ಸೇರಿ 45 ಮಂದಿ ದುರ್ಮರಣ

Ad Widget . Ad Widget .

ಸೋಫಿಯಾ: ಬಲ್ಗೇರಿಯಾದ ಹೆದ್ದಾರಿಯಲ್ಲಿ ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಬಸ್ ಅಪಘಾತವಾಗಿ ಬೆಂಕಿ ಹೊತ್ತಿಕೊಂಡಿದ್ದು, 12 ಮಕ್ಕಳು ಸೇರಿದಂತೆ ಕನಿಷ್ಠ 45 ಜನರು ಮಂಗಳವಾರ ಸಾವನ್ನಪ್ಪಿದ್ದಾರೆ.

Ad Widget . Ad Widget .

ಬಲ್ಗೇರಿಯನ್ ಅಧಿಕಾರಿಗಳು ಇದನ್ನು ಬಾಲ್ಕನ್ ದೇಶದ ಇತಿಹಾಸದಲ್ಲಿ ಅತ್ಯಂತ ಮಾರಣಾಂತಿಕ ಬಸ್ ಅಪಘಾತ ಎಂದು ಕರೆದಿದ್ದಾರೆ. ಅಪಘಾತದ ಕಾರಣ ಅಸ್ಪಷ್ಟವಾಗಿದೆ. ಆದರೆ ಬೆಂಕಿ ಹೊತ್ತಿಕೊಳ್ಳುವ ಮೊದಲು ಅಥವಾ ನಂತರ ಬಸ್ ಹೆದ್ದಾರಿ ತಡೆಗೋಡೆಗೆ ಅಪ್ಪಳಿಸಿದೆ ಎಂದು ಬಲ್ಗೇರಿಯನ್ ಅಧಿಕಾರಿಗಳು ತಿಳಿಸಿದ್ದಾರೆ.

ಉರಿಯುತ್ತಿರುವ ಬಸ್‌ನಿಂದ ಜಿಗಿದ ಏಳು ಜನರನ್ನು ಸೋಫಿಯಾದ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಅವರ ಸ್ಥಿತಿ ಸ್ಥಿರವಾಗಿದೆ ಎಂದು ಆಸ್ಪತ್ರೆ ಸಿಬ್ಬಂದಿ ತಿಳಿಸಿದ್ದಾರೆ.

Leave a Comment

Your email address will not be published. Required fields are marked *