Ad Widget .

ಕೊನೆ ಕ್ಷಣದಲ್ಲಿ ಕಾಂಗ್ರೆಸ್ ನಿಂದ ಪರಿಷತ್ ಚುನಾವಣಾ ಅಭ್ಯರ್ಥಿಗಳ ಪಟ್ಟಿ ಪ್ರಕಟ| ದ.ಕನ್ನಡದಲ್ಲಿ ಮಂಜುನಾಥ ಭಂಡಾರಿಗೆ ಟಿಕೆಟ್|

Ad Widget . Ad Widget .

ಮಂಗಳೂರು: ಭಾರೀ ಕುತೂಹಲ ಕೆರಳಿಸಿದ್ದ ವಿಧಾನ ಪರಿಷತ್ ಚುನಾವಣೆಯ ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಸಹ್ಯಾದ್ರಿ ಇಂಜಿನಿಯನಿರಿಂಗ್ ಕಾಲೇಜಿನ ಮುಖ್ಯಸ್ಥ ಮಂಜುನಾಥ ಭಂಡಾರಿಗೆ ಕಾಂಗ್ರೆಸ್ ಟಿಕೆಟ್ ನೀಡಿದೆ. ಕಾಂಗ್ರೆಸ್ ಹೈಕಮಾಂಡ್ 17 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ್ದು ಸೋಮವಾರ ಸಂಜೆ ಪಟ್ಟಿ ಬಿಡುಗಡೆಗೊಳಿಸಿದೆ.

Ad Widget . Ad Widget .

ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಎಸ್ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಕಾಂಗ್ರೆಸ್ ಟಿಕೆಟ್ ನೀಡಿದ್ದಾಗಿ ಕೆಲ ಮಾಧ್ಯಮಗಳು ಮತ್ತು ಪ್ರತಿಷ್ಠಿತ ಪತ್ರಿಕೆಯೊಂದರ ವೆಬ್ ಸೈಟ್ ನಲ್ಲಿ ಬರೆಯಲಾಗಿತ್ತು. ಇಂದು ಮಧ್ಯಾಹ್ನ ಸಂಭಾವ್ಯರ ಲಿಸ್ಟ್ ಎನ್ನುವ ನೆಲೆಯಲ್ಲಿ ಟಿವಿ ಮಾಧ್ಯಮಗಳ ಸುದ್ದಿ ಕರಾವಳಿಯಲ್ಲಿ ಸಂಚಲನ ಮೂಡಿತ್ತು. ಎರಡು ದಿನಗಳ ಹಿಂದೆ ಚುನಾವಣೆಗೇ ಸ್ಪರ್ಧಿಸುವುದಿಲ್ಲ ಎಂದು ಹಿಂದಕ್ಕೆ ಸರಿದಿದ್ದ ರಾಜೇಂದ್ರ ಕುಮಾರ್ ಅವರಿಗೇ ಕಾಂಗ್ರೆಸ್ ಟಿಕೆಟ್ ಘೋಷಿಸಿದ್ದಾಗಿ ಸುದ್ದಿಗಳು ಬರುತ್ತಿದ್ದಂತೆ ಕಾಂಗ್ರೆಸಿಗರಿಗೇ ಶಾಕ್ ಆಗಿತ್ತು. ಹಲವಾರು ಮಂದಿ ಮಂಗಳೂರಿನ ಮಾಧ್ಯಮ ಪ್ರತಿನಿಧಿಗಳಿಗೆ ಈ ಬಗ್ಗೆ ಮಾಹಿತಿ ಕೇಳಲು ತೊಡಗಿದ್ದರು. ಹೀಗಿದ್ದರೂ, ಕೆಲವು ಕಾಂಗ್ರೆಸ್ ನಾಯಕರು ಮಂಜುನಾಥ ಭಂಡಾರಿಗೇ ಟಿಕೆಟ್ ಎನ್ನುವುದನ್ನು ಹೇಳುತ್ತಿದ್ದರು. ಸಂಜೆ ವೇಳೆಗೆ 17 ಮಂದಿಯ ಅಭ್ಯರ್ಥಿಗಳ ಲಿಸ್ಟ್ ಬಿಡುಗಡೆ ಆಗಿದ್ದು ಮಂಜುನಾಥ ಭಂಡಾರಿಗೆ ಟಿಕೆಟ್ ಫೈನಲ್ ಆಗಿತ್ತು.

ಉಳಿದಂತೆ ರಾಜ್ಯದ ಇನ್ನುಳಿದ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ ಈ ರೀತಿ ಇದೆ.
ಗುಲ್ಬರ್ಗ – ಶಿವಾನಂದ ಪಾಟೀಲ್ ಮರ್ತೂರು, ಬೆಳಗಾವಿ – ಚೆನ್ನರಾಜ ಬಸವರಾಜ್ ಹಟ್ಟಿಹೊಳ್ಳಿ, ಉತ್ತರ ಕನ್ನಡ – ಭೀಮಣ್ಣ ನಾಯ್ಕ್, ಹುಬ್ಬಳ್ಳಿ- ಧಾರವಾಡ – ಗದಗ- ಹಾವೇರಿ ಮತಕ್ಷೇತ್ರ – ಸಲೀಂ ಅಹ್ಮದ್, ರಾಯಚೂರು- ಶರಣು ಗೌಡ ಪಾಟೀಲ್, ಚಿತ್ರದುರ್ಗ – ಬಿ.ಸೋಮಶೇಖರ್, ಶಿವಮೊಗ್ಗ – ಆರ್. ಪ್ರಸನ್ನ ಕುಮಾರ್, ದಕ್ಷಿಣ ಕನ್ನಡ – ಮಂಜುನಾಥ ಭಂಡಾರಿ, ಚಿಕ್ಕಮಗಳೂರು- ಎ.ವಿ.ಗಾಯತ್ರಿ ಶಾಂತೇಗೌಡ, ಹಾಸನ- ಎಂ.ಶಂಕರ್, ತುಮಕೂರು- ಆರ್. ರಾಜೇಂದ್ರ, ಮಂಡ್ಯ- ಎಂ.ಜಿ. ಗೂಳಿಗೌಡ, ಬೆಂಗಳೂರು ಗ್ರಾಮಾಂತರ – ಎಸ್. ರವಿ, ಕೊಡಗು – ಆರ್. ಮಂತರ್ ಗೌಡ, ಬಿಜಾಪುರ- ಬಾಗಲಕೋಟ- ಸುನಿಲ್ ಗೌಡ ಪಾಟೀಲ್, ಮೈಸೂರು- ಚಾಮರಾಜನಗರ- ಡಾ.ಡಿ.ತಮ್ಮಯ್ಯ, ಬೆಳ್ಳಾರಿ- ಕೆ.ಸಿ.ಕೊಂಡಯ್ಯ ಅವರಿಗೆ ಟಿಕೆಟ್ ನೀಡಲಾಗಿದೆ.

ನ.23 ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದ್ದು, ಅಂತಿಮ ದಿನದಂದು ಕಾಂಗ್ರೆಸ್ ಪಟ್ಟಿ ರಿಲೀಸ್ ಮಾಡಿದೆ.

Leave a Comment

Your email address will not be published. Required fields are marked *