Ad Widget .

ಪ್ರೀತಿ ನಿರಾಕರಿಸಿ ಇನ್ನೊಬ್ಬಳ ವರಿಸಲು ಮುಂದಾದ ಪ್ರಿಯಕರ| ನೊಂದ ಪ್ರಿಯತಮೆ ಆತನಿಗೆ ಮಾಡಿದ್ದೇನು ಗೊತ್ತಾ?

Ad Widget . Ad Widget .

ತಿರುವನಂತಪುರಂ: 35 ವರ್ಷದ ಮಹಿಳೆ ತನ್ನ ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದ ನಂತರ ತನ್ನ ಪ್ರಿಯಕರನ ಮೇಲೆ ಆಸಿಡ್ ಎಸೆದ ಆರೋಪದ ಮೇಲೆ ಬಂಧಿಸಲಾಗಿದೆ. ಕೇರಳದ ಇಡುಕ್ಕಿ ಜಿಲ್ಲೆಯ ಆದಿಮಾಲಿ ಎಂಬಲ್ಲಿ ಈ ಘಟನೆ ನಡೆದಿದೆ

Ad Widget . Ad Widget .

ಗಾಯಗೊಂಡ ಅರುಣ್ ಕುಮಾರ್ (27) ತಿರುವನಂತಪುರಂ ಜಿಲ್ಲೆಯ ಪೂಜಾಪ್ಪುರ ಮೂಲದವರು. ಆರೋಪಿ ಶೀಬಾಳನ್ನು ಸಾಮಾಜಿಕ ಜಾಲತಾಣಗಳ ಮೂಲಕ ಭೇಟಿಯಾಗಿದ್ದ ಆತ ಇಬ್ಬರ ನಡುವೆ ಪ್ರೇಮಾಂಕುರವಾಗಿತ್ತು. ಆದರೆ, ಅರುಣ್ ಬೇರೆ ಹುಡುಗಿಯನ್ನು ಮದುವೆಯಾಗಲು ನಿರ್ಧರಿಸಿದ್ದು ಶೀಬಾಳ ಮನಸ್ತಾಪಕ್ಕೆ ಕಾರಣವಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ನವೆಂಬರ್ 16 ರಂದು ಆದಿಮಲಿ ಸಮೀಪದ ಇರುಂಪುಪಾಲಂನಲ್ಲಿರುವ ಸೇಂಟ್ ಆಂಟೋನಿ ಚರ್ಚ್ ಬಳಿ ಶೀಬಾ ಅರುಣ್ ಕುಮಾರ್ ಅವರಿಗೆ ಕರೆ ಮಾಡಿದ್ದಳು. ಅರುಣ್ ಸ್ವಲ್ಪ ದೂರ ಹೋಗುವ ಮೊದಲು ಇಬ್ಬರು ಮಾತನಾಡುತ್ತಿರುವುದು ಆ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳಲ್ಲಿ ಕಂಡುಬರುತ್ತದೆ. ಶೀಬಾ ಅವರತ್ತ ನಡೆದುಕೊಂಡು ಹೋಗಿ ಆಯಸಿಡ್ ದಾಳಿ ನಡೆಸುತ್ತಿರುವುದು ವಿಡಿಯೋದಲ್ಲಿದೆ. ಮದುವೆ ಪ್ರಸ್ತಾಪವನ್ನು ತಿರಸ್ಕರಿಸಿದ್ದಕ್ಕೆ ಪ್ರಿಯಕರನ ಮುಖಕ್ಕೆ ಕೇರಳದ ಯುವತಿ ಆಸಿಡ್ ಎರಚಿದ್ದಾಳೆ

ದಾಳಿಯಲ್ಲಿ ಅರುಣ್ ಕುಮಾರ್ ಅವರ ಒಂದು ಕಣ್ಣಿನ ದೃಷ್ಟಿ ಕಳೆದುಕೊಂಡಿದ್ದು, ಶೀಬಾ ಅವರ ಮುಖ ಮತ್ತು ಕೈಗೂ ಗಂಭೀರ ಗಾಯಗಳಾಗಿವೆ. ಅರುಣ್ ಕುಮಾರ್ ಅವರು ತಿರುವನಂತಪುರಂ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ನಡುವೆ ಶುಕ್ರವಾರ ಶೀಬಾಳನ್ನು ಆದಿಮಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

Leave a Comment

Your email address will not be published. Required fields are marked *