Ad Widget .

ಗೆಳತಿಯನ್ನು ಆಕೆಯ‌ ಮನೆಯಲ್ಲಿ ಇರಿದು ಕೊಂದು ಆತ್ಮಹತ್ಯೆ ಮಾಡಿಕೊಂಡ ಭಗ್ನಪ್ರೇಮಿ

Ad Widget . Ad Widget .

ಬೆಂಗಳೂರು: 21ರ ಹರೆಯದ ಯುವಕನೊಬ್ಬ ತನ್ನ 19 ವರ್ಷದ ಪ್ರಿಯತಮೆಯನ್ನು ಆಕೆಯ ಮನೆಯಲ್ಲಿ ಚಾಕುವಿನಿಂದ ಇರಿದು ಕೊಂದು ಹಾಕಿದ ಘಟನೆ ಗುರುವಾರ ಸಂಜೆ ಅದೇ ಮನೆಯ ಸೀಲಿಂಗ್‌ಗೆ ನೇಣು ಬಿಗಿದುಕೊಂಡಿದ್ದಾನೆ.

Ad Widget . Ad Widget .

ಜಿಗಣಿಯ ನಿಸರ್ಗ ಲೇಔಟ್‌ನ ಸಿಂಚನಾ(19) ಹತ್ಯೆಗೊಳಗಾದ ಯುವತಿ. ಏಕೈಕ ಪುತ್ರಿಯಾಗಿರುವ ಈಕೆಯ ತಂದೆ ಆನೇಕಲ್‌ನ ಹರಪನಹಳ್ಳಿಯಲ್ಲಿ ಹಾರ್ಡ್‌ವೇರ್ ಅಂಗಡಿ ಹೊಂದಿದ್ದಾರೆ.

ಆರೋಪಿ ಕಿಶೋರ್ ಕುಮಾರ್, ಆನೇಕಲ್‌ನ ಗೋಡೌನ್ ಚಾಲಕ. ಸಿಂಚನಾ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಕಾಲೇಜಿನಲ್ಲಿ ಪ್ರಥಮ ವರ್ಷದ ವಿದ್ಯಾರ್ಥಿನಿ ಎಂದು ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ಯುವತಿ ‌ತಂದೆ ದೊಡ್ಡಯ್ಯ ಮತ್ತು ಅವರ ಪತ್ನಿ ತಡರಾತ್ರಿ ಮನೆಗೆ ಹಿಂತಿರುಗಿದಾಗ ದುರಂತ ಬೆಳಕಿಗೆ ಬಂದಿದ್ದು, ಮಗಳು ಕತ್ತು ಸೀಳಿ ರಕ್ತದ ಮಡುವಿನಲ್ಲಿ ಬಿದ್ದಿದ್ದು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಇನ್ನೋರ್ವ ಪತ್ತೆಯಾಗಿದ್ದಾನೆ. ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ. “ಸಿಂಚನಾ ದೇಹದ ಬಳಿ ಪಠ್ಯಪುಸ್ತಕಗಳು ಮತ್ತು ಕೆಲವು ನೋಟ್ಸ್ ಕಂಡುಬಂದಿವೆ, ಆ ಸಮಯದಲ್ಲಿ ಅವಳು ಓದುತ್ತಿದ್ದಳು ಎಂದು ತಿಳಿದುಬಂದಿದೆ” ಎಂದು ತನಿಖಾಧಿಕಾರಿ ಹೇಳಿದರು.

Leave a Comment

Your email address will not be published. Required fields are marked *