Ad Widget .

ಉಪ್ಪಿನಂಗಡಿ: ವಿದ್ಯಾರ್ಥಿನಿಗಾಗಿ ಹೊಡೆದಾಡಿಕೊಂಡ ವಿದ್ಯಾರ್ಥಿಗಳು| ಐವರು ಆಸ್ಪತ್ರೆಗೆ ಅಡ್ಮಿಟ್|

Ad Widget . Ad Widget .

ಉಪ್ಪಿನಂಗಡಿ: ವಿದ್ಯಾರ್ಥಿನಿಗಾಗಿ ಕಾಲೇಜು ಆವರಣದಲ್ಲಿ ಎರಡು ವಿದ್ಯಾರ್ಥಿ ತಂಡಗಳ ಮಧ್ಯೆ ಹೊಡೆದಾಟ ನಡೆದ ಘಟನೆ ಉಪ್ಪಿನಂಗಡಿ ಕಾಲೇಜೊಂದರಲ್ಲಿ ನಡೆದಿದೆ.

Ad Widget . Ad Widget .

ಹೊಡೆದಾಟದಲ್ಲಿ ಎರಡೂ ಕಡೆಯ 5 ಮಂದಿ ಪುತ್ತೂರು ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿದ್ಯಾರ್ಥಿನಿಯೋರ್ವಳ ಮೊಬೈಲ್ ಸಂಖ್ಯೆಯನ್ನು ನೀಡಬೇಕೆಂದು ಭಿನ್ನ ಕೋಮಿನ ಸಹಪಾಠಿ ವಿದ್ಯಾರ್ಥಿಯೋರ್ವ ಕೇಳಿದ್ದು ಇದನ್ನು ಆಕ್ಷೇಪಿಸಿ ವಿದ್ಯಾರ್ಥಿನಿ ಪರ ತಂಡದ ಮೂವರು ವಿದ್ಯಾರ್ಥಿಗಳು ವಿಚಾರಿಸಲು ಹೋಗಿದ್ದಾಗ ಇವರ ಮೇಲೆ ಮೂವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿಗಳ ಗುಂಪು ಮುಗಿಬಿದ್ದು, ಪರಸ್ಪರ ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಇನ್ನೊಂದು ಮೂಲಗಳ ಪ್ರಕಾರ ಕಾಲೇಜಿನಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರ ತಂಡವೊಂದು ಜೊತೆಯಾಗಿ ಪೊಟೋ ತೆಗೆಸಿಕೊಂಡಿದ್ದು, ಈ ತಂಡದಲ್ಲಿ ಭಿನ್ನ ಕೋಮಿನ ಓರ್ವ ವಿದ್ಯಾರ್ಥಿಯೂ ಇದ್ದು, ಈ ವಿಚಾರದಲ್ಲಿ ಇತರೇ ಕೆಲ ವಿದ್ಯಾರ್ಥಿಗಳು, ಅವರುಗಳೊಂದಿಗೆ ನೀನು ಯಾಕೆ ಫೊಟೋ ತೆಗೆಯಲು ನಿಂತಿದ್ದು ಎಂದು ಭಿನ್ನಕೋಮಿನ ವಿದ್ಯಾರ್ಥಿಯಲ್ಲಿ ವಿಚಾರಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದು ಹೊಡೆದಾಡಿಕೊಂಡಿದ್ದಾರೆ ಎಂದು ಹೇಳಲಾಗಿದೆ.

ಒಟ್ಟಿನಲ್ಲಿ ಒಂದು ತಂಡದಿಂದ ಮೂವರು ವಿದ್ಯಾರ್ಥಿಗಳು ಮತ್ತು ಇನ್ನೊಂದು ತಂಡದಿಂದ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಆದರೆ ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಯಾವುದೇ ದೂರು ದಾಖಲಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *