Ad Widget .

ಪುತ್ತೂರು: ಮಹಿಳೆಯ ದೇಹ ಸ್ಪರ್ಶಿಸಿ ಯುವಕನಿಂದ ಅಸಭ್ಯ ವರ್ತನೆ| ಕೇಸು ದಾಖಲು

Ad Widget . Ad Widget .

ಪುತ್ತೂರು : ಯುವಕನೊಬ್ಬ ಅನ್ಯ ಧರ್ಮದ ಮಹಿಳೆಯ ದೇಹ ಸ್ಪರ್ಷಿಸಿ ಕಿರುಕುಳ ನೀಡಿದ್ದಾನೆ ಎಂದು ಆರೋಪಿಸಿ ತಂಡವೊಂದು ಯುವಕನನ್ನು ಧಳಿಸಿದ ಹಾಗೂ ಸಂತ್ರಸ್ತ ಮಹಿಳೆ ಯುವಕನ ವಿರುದ್ದ ಠಾಣೆಗೆ ದೂರು ನೀಡಿದ ಘಟನೆ ಪುತ್ತೂರು ನಗರದ ಹೊರವಲಯ ಮರೀಲ್ ನಲ್ಲಿ ನ.18ರಂದು ನಡೆದಿದೆ.

Ad Widget . Ad Widget .

ಪುತ್ತೂರು ತಾಲೂಕು ರಾಮಕುಂಜ ಗ್ರಾಮದ ಹಳೆನೇರೆಂಕಿ ನಿವಾಸಿ ಪ್ರಕಾಶ್ (32ವ.) ಕಿರುಕುಳ ನೀಡಿರುವ ಬಗ್ಗೆ ಸಂತ್ರಸ್ತ ಮಹಿಳೆ ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದು ಅದರಂತೆ ಪ್ರಕರಣ ದಾಖಲಾಗಿದೆ.

ಸಂತ್ರಸ್ತ ಮಹಿಳೆ, ಆರೋಪಿ ಯುವಕ ಹಾಗೂ ಮಕ್ಕಳು ಆಟೋ ರಿಕ್ಷಾವೊಂದರಲ್ಲಿ ಪುತ್ತೂರಿನಿಂದ ಬೆದ್ರಾಳಕ್ಕೆ ಪ್ರಯಾಣಿಸುತ್ತಿದ್ದ ವೇಳೆ ಮರೀಲ್‌ ಎಂಬಲ್ಲಿ ಕೃತ್ಯ ನಡೆದಿದೆ ಎಂದು ಆರೋಪಿಸಲಾಗಿದೆ . ಆಟೋ ರಿಕ್ಷಾ ಮರೀಲ್ ಸಮೀಪಿಸುತ್ತಿದ್ದಂತೆ ಯುವಕ ಮಹಿಳೆಯ ದೇಹವನ್ನು ಕೈ ಯಿಂದ ಉದ್ದೇಶಪೂರ್ವಕವಾಗಿ ಅಸಭ್ಯವಾಗಿ ಸ್ಪರ್ಷಿಸಿದ್ದಾಗಿ ಹೇಳಲಾಗುತ್ತಿದೆ. ಆಗ ಮಹಿಳೆಯೂ , ಯುವಕ ತನಗೆ ಕಿರುಕುಳ ನೀಡುತ್ತಿರುವುದಾಗಿ ಆಟೋ ರಿಕ್ಷಾಚಾಲಕನಲ್ಲಿ ತಿಳಿಸಿದ್ದು , ಹೀಗಾಗಿ ಚಾಲಕ ರಿಕ್ಷಾ ನಿಲ್ಲಿಸಿದ್ದಾನೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *