Ad Widget .

‘ಸಂಸತ್ ನಲ್ಲಿ ಅಂಗೀಕಾರವಾಗದ ಹೊರತು‌ ನಾವು ಪ್ರಧಾನಿಯನ್ನು ನಂಬಲ್ಲ’ – ರೈತ ನಾಯಕ ರಾಕೇಶ್ ಹೇಳಿಕೆ

Ad Widget . Ad Widget .

ನವದೆಹಲಿ: ಕೃಷಿ ಮಸೂದೆಗಳನ್ನು ರದ್ದುಪಡಿಸಿ ಘೋಷಣೆ ಹೊರಡಿಸಿದ ಪ್ರಧಾನಿ ಮೋದಿಯವರ ನಿರ್ಧಾರದ ಸಂಬಂಧ ಮಾತನಾಡಿದ ಭಾರತೀಯ ಕಿಸಾನ್​ ಯೂನಿಯನ್​ ನಾಯಕ ರಾಕೇಶ್​ ಟಿಕಾಯತ್​, ಸಂಸತ್​ನಲ್ಲಿ ಈ ನಿರ್ಧಾರವನ್ನು ಅಂಗೀಕರಿಸಿದ ಬಳಿಕವೇ ಸತ್ಯಾಗ್ರಹದ ಸ್ಥಳದಿಂದ ರೈತರು ತಮ್ಮ ಮನೆಗೆ ಮರಳಲಿದ್ದಾರೆ ಎಂದು ಹೇಳಿದ್ದಾರೆ.

Ad Widget . Ad Widget .

ಕೃಷಿ ಮಸೂದೆ ವಾಪಸ್​ ಪಡೆದುಕೊಂಡ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ರಾಕೇಶ್​, ರೈತರ ಬೆಳೆಗಳಿಗೆ ಕನಿಷ್ಟ ಬೆಂಬಲ ಬೆಲೆ ಕಾನೂನು ಬದ್ಧಗೊಳಿಸುವುದು ಸೇರಿದಂತೆ ಇನ್ನೂ ಅನೇಕ ಬೇಡಿಕೆಗಳು ಹಾಗೆಯೇ ಉಳಿದಿದೆ. ಇವುಗಳ ಬಗ್ಗೆ ಪ್ರಧಾನಿ ಯಾವುದೇ ಮಾಹಿತಿ ನೀಡಿಲ್ಲ. ನಮ್ಮ ಸಂಪೂರ್ಣ ಕಾರ್ಯ ಮುಗಿದ ಬಳಿಕವೇ ನಾವು ಈ ಸ್ಥಳದಿಂದ ಹಿಂತಿರುಗಲಿದ್ದೇವೆ. ಸಂಸತ್​ನಲ್ಲಿ ಈ ನಿರ್ಣಯ ಅಂಗೀಕಾರವಾಗುವವರೆಗೂ ಯಾವುದೇ ಹೇಳಿಕೆಗಳನ್ನು ನಾವು ನಂಬುವುದಿಲ್ಲ ಎಂದು ಹೇಳಿದ್ರು.

ಸಂಯುಕ್ತ ಕಿಸಾನ್​ ಮೋರ್ಚಾ ಸಭೆಯನ್ನು ಇಂದು ನಡೆಸಲಾಗುತ್ತೆ. ಈ ಸಭೆಯಲ್ಲಿ ಮುಂದಿನ ನಡೆಯ ಬಗ್ಗೆ ಚರ್ಚೆ ನಡೆಸಲಿದ್ದೇವೆ. ಪ್ರಧಾನಿ ಮೋದಿ ಹೇಳಿಕೆಯನ್ನು ನಾವು ಸಂಪೂರ್ಣವಾಗಿ ಸ್ವಾಗತಿಸುತ್ತಿಲ್ಲ. ಇದೊಂದು ಪ್ರಾರಂಭ ಎಂದಷ್ಟೇ ಹೇಳಬಲ್ಲೆವು ಅಂತಾ ರಾಕೇಶ್​ ಟಿಕಾಯತ್​ ಹೇಳಿದ್ದಾರೆ.

Leave a Comment

Your email address will not be published. Required fields are marked *