Ad Widget .

ಮಂಗಳೂರು: ಸಮುದ್ರದ ತಂಗಾಳಿಗೆ ಮೈಯೊಡ್ಡಿ ಸಲ್ಲಾಪದಲ್ಲಿದ್ದ ಭಿನ್ನಕೋಮಿನ ಜೋಡಿ ಪೊಲೀಸ್ ವಶ|

Ad Widget . Ad Widget .

ಮಂಗಳೂರು: ನಗರದ ಹೊರವಲಯದ ‌ಸುರತ್ಕಲ್ ಬೀಚ್ ಬಳಿ ಕಾರೊಂದರಲ್ಲಿ ಸಲ್ಲಾಪದಲ್ಲಿ‌ ತೊಡಗಿದ್ದ ಭಿನ್ನ ಕೋಮಿನ ಜೋಡಿಯೊಂದು ಪೊಲೀಸರ ವಶವಾಗಿದೆ.

Ad Widget . Ad Widget .

ಕುದ್ರೋಳಿಯ ಮುಸ್ಲಿಂ ಯುವಕನೊಂದಿಗೆ ಹಿಂದೂ ಯುವತಿಯೊಬ್ಬಳು ಕಾರಿನಲ್ಲಿ ಇಂದು ಸಂಜೆ ಪತ್ತೆಯಾಗಿದ್ದು ಇವರಿಗೆ ಪಕ್ಕದಲ್ಲೇ ಇನ್ನೊಬ್ಬಾತ ಅವರಿಗೆ ಸೆಕ್ಯುರಿಟಿ ನೀಡುವ ಕಾರ್ಯ ಮಾಡುತ್ತಿದ್ದ ಎನ್ನಲಾಗಿದೆ. ಇದನ್ನು ಗಮನಿಸಿದ ಸುರತ್ಕಲ್ ಭಜರಂಗದಳದ ಕಾರ್ಯಕರ್ತರು ಮೊದಲು ಆತನನ್ನು ವಿಚಾರಿಸಿದ್ದು ನಂತರ ಜೋಡಿಗಳನ್ನು ಠಾಣೆಗೆ ಕರೆದೊಯ್ದಿದ್ದಾರೆ.

ಅನ್ಯಕೋಮಿನ ಯುವಕನ ಜೊತೆ ಪತ್ತೆಯಾದ ಯುವತಿ ಸುರತ್ಕಲ್ ಪೋಲಿಸರ ವಶದಲ್ಲಿದ್ದು, ಪತ್ತೆಯಾದ ಯುವಕನನ್ನು ಮೆಹಬೂಬ್ ಎಂದು ಗುರುತಿಸಲಾಗಿದೆ. ಯುವತಿ ಹುಬ್ಬಳ್ಳಿ ಮೂಲದವಳಾಗಿದ್ದು ಕಂಪ್ಯೂಟರ್ ಸೈನ್ಸ್ ಓದುತ್ತಿದ್ದು, ಕೃಷ್ಣಾಪುರದ ಪಿಜಿಯೊಂದರಲ್ಲಿ ವಾಸ್ತವ್ಯ ಇರುವುದಾಗಿ ತಿಳಿದುಬಂದಿದೆ.

Leave a Comment

Your email address will not be published. Required fields are marked *