Ad Widget .

ಅರವಣ ಪಾಯಸ ಶಬರಿಮಲೆಯಲ್ಲೇ ತಯಾರಾಗುತ್ತೆ| ಸ್ಪಷ್ಟನೆ ನೀಡಿದ ದೇವಸ್ವಂ ಮಂಡಳಿ

Ad Widget . Ad Widget .

ತಿರುವನಂತಪುರಂ: ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ದೇವಸ್ಥಾನದ ಸಿಬ್ಬಂದಿಗಳೇ ತಯಾರಿಸುತ್ತಾರೆ; ಕೇವಲ ಅಕ್ಕಿ ಮತ್ತು ಬೆಲ್ಲದ ಪೂರೈಕೆಯ ಗುತ್ತಿಗೆಗಳನ್ನು ಮಾತ್ರ ಹೊರಗೆ ನೀಡಲಾಗುತ್ತದೆ, ಎಂದು ಕೇರಳ ದೇವಸ್ವಂ ಬೋರ್ಡ್‌ನ ಕಾರ್ಯನಿರ್ವಾಹಕ ಅಧಿಕಾರಿ ಸ್ಪಷ್ಟಪಡಿಸಿದರು.

Ad Widget . Ad Widget .

ಕೇರಳ ದೇವಸ್ವಂ ಬೋರ್ಡ್ ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಓರ್ವ ಮುಸಲ್ಮಾನ ವ್ಯಕ್ತಿಗೆ ನೀಡಲಾಗಿದೆ. ಈ ಪ್ರಸಾದಕ್ಕೆ ‘ಅಲ್-ಝಹಾ’ ಎಂಬ ಅರೇಬಿಕ್ ಹೆಸರನ್ನು ನೀಡಲಾಗಿದೆ ಮತ್ತು ಇದನ್ನು ‘ಹಲಾಲ್’ ಎಂದು ಉಲ್ಲೇಖಿಸಲಾಗಿದೆ’, ಈ ಸುದ್ದಿ ಎಲ್ಲೆಡೆ ಹರಡಿತ್ತು. ಇದಾದ ಬಳಿಕ ದೇಶಾದ್ಯಂತ ತೀವ್ರ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಈ ಕುರಿತು ಸ್ಪಷ್ಟೀಕರಣ ನೀಡುತ್ತಾ, ‘ಶಬರಿಮಲೆ ದೇವಸ್ಥಾನದಲ್ಲಿ ‘ಅರಾವಣಾ ಪಾಯಸಂ’ ಈ ಪ್ರಸಾದವನ್ನು ತಯಾರಿಸುವ ಗುತ್ತಿಗೆಯನ್ನು ಅರೇಬಿಕ್ ಸಂಸ್ಥೆಗೆ ನೀಡಿಲ್ಲ’ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ರೀತಿಯ ಪ್ರಸಾದವನ್ನು ಯಾರು ಬೇಕಾದರೂ ತಯಾರಿಸಿ ಮಾರಾಟ ಮಾಡಬಹುದು ಎಂದೂ ಹೇಳಲಾಗುತ್ತಿದೆ.

Leave a Comment

Your email address will not be published. Required fields are marked *