ನವದೆಹಲಿ: ಕಾಂಗ್ರೇಸ್ ಹಿರಿಯ ಮುಖಂಡ ಗುಲಾಬ್ ನಬಿ ಆಜಾದ್ ಸೇರಿದಂತೆ ಸುಮಾರು 20 ಮಂದಿ ಹಿರಿಯ ನಾಯಕರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್ ಗೆ ದೊಡ್ಡ ಆಘಾತ ಉಂಟಾಗಿದೆ.
ಜಮ್ಮು ಕಾಶ್ಮೀರದಲ್ಲಿ ಶೀಘ್ರದಲ್ಲೇ ವಿಧಾನಸಭೆ ಚುನಾವಣೆ ಘೋಷಣೆ ಆಗಲಿದೆ ಎಂಬ ವದಂತಿಗಳ ಬೆನ್ನಲ್ಲೇ ಕಾಂಗ್ರೆಸ್ ಪಕ್ಷವನ್ನು ಹಿರಿಯ ನಾಯಕರು ತೊರೆದಿರುವುದು ದೊಡ್ಡ ಹಿನ್ನಡೆ ಉಂಟಾದಂತಾಗಿದೆ.
ಕೇಂದ್ರಾಡಳಿತ ಪ್ರದೇಶದಲ್ಲಿ ನೇಮಿಸಿರುವ ಪದಾಧಿಕಾರಿಗಳನ್ನು ಕೂಡಲೇ ಬದಲಾಯಿಸಬೇಕು ಎಂದು ರಾಜೀನಾಮೆ ನೀಡಿರುವ ಈ ನಾಯಕರು ಆಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ನೀಡಿದವರಲ್ಲಿ ಮಾಜಿ ಸಿಎಂ ಜಿಎಂ ಸರೋಯಿ, ವಿಕಾರ್ ರಸೂಲ್, ಡಾ.ಮನೋಹರ್ ಲಾಲ್ ಶರ್ಮ ಅಲ್ಲದೇ ಮಾಜಿ ಶಾಸಕರಾದ ಜುಗಾಲ್ ಕಿಶೋರ್ ಶರ್ಮ, ಗುಲಾಮ್ ನಬಿ ಮೊಂಗಾ, ನರೇಶ್ ಗುಪ್ತಾ, ಮೊಹಮದ್ ಅಮಿನ್ ಬಟ್, ಸುಭಾಷ್ ಗುಪ್ತಾ ಸೇರಿದ್ದಾರೆ.