Ad Widget .

“ನೀವಂತೂ ಸ್ಲಿಮ್ ಆಗಿದ್ದೀರಿ, ಹಾಗೆ ಪೆಟ್ರೋಲ್ ರೇಟ್ ಕೂಡಾ ಕಡಿಮೆ ಮಾಡ್ಸಿ!” | ಸಚಿವೆ ಸ್ಮೃತಿ ಇರಾನಿಗೆ ನೆಟ್ಟಿಗರ ರಿಕ್ವೆಸ್ಟ್|

Ad Widget . Ad Widget .

ನವದೆಹಲಿ: ಕೇಂದ್ರ ಸಚಿವೆ ಸ್ಮೃತಿ ಇರಾನಿ ತೂಕ ಇಳಿಸಿಕೊಂಡ ಲೇಟೆಸ್ಟ್ ಫೋಟೊ ನೋಡಿ ನೆಟ್ಟಿಗರು ಮಾಜಿ ನಟಿ, ಸಚಿವೆಯ ವೈಟ್ ಲಾಸ್‌ ಬಗ್ಗೆ ಮಾತನಾಡುತ್ತಿದ್ದಾರೆ. ನಟಿ ಸೋನಂ ಕಪೂರ್, ಮೌನಿಯಂತಹ ನಟಿಯರು ಫೊಟೋ ನೋಡಿ ಅಚ್ಚರಿಪಟ್ಟಿದ್ದಾರೆ. ಹಾಗಿದ್ರೆ ನಿಜಕ್ಕೂ ಮತ್ತೆ ಹಿಂದಿನ ರೂಪ ಪಡೆದುಕೊಂಡರಾಸ್ಮೃತಿ ಇರಾನಿ ?

Ad Widget . Ad Widget .

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಮತ್ತು ಮಾಜಿ ನಟಿ ಸ್ಮೃತಿ ಇರಾನಿ ಅವರು ಇತ್ತೀಚೆಗೆ ವೈಟ್ ಲಾಸ್ ಫೋಟೋ ಮೂಲಕ ತಮ್ಮ ಅಭಿಮಾನಿಗಳ ಗಮನ ಸೆಳೆದರು.

ಸ್ಮೃತಿ ಇರಾನಿ ಇತ್ತೀಚೆಗೆ ತಮ್ಮ ಇನ್‌ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಮರದ ಬಳಿ ನಿಂತಿರುವ ಫೋಟೋವನ್ನು ಹಂಚಿಕೊಂಡಿದ್ದಾರೆ. ಕ್ಯುಕಿ ಸಾಸ್ ಭಿ ಕಭಿ ಬಹು ಥಿ ನಟಿ ಪ್ರಿಂಟೆಡ್ ದುಪಟ್ಟಾದೊಂದಿಗೆ ಸಲ್ವಾರ್ ಸೂಟ್‌ನಲ್ಲಿ ಪೋಸ್ ಕೊಟ್ಟಿದ್ದಾರೆ.

ಫೊಟೋದಲ್ಲಿ ಮಾಜಿ ನಟಿ ಹೊರಗೆ ಗಾರ್ಡನ್ ಏರಿಯಾದಲ್ಲಿದ್ದರು. ಇರಾನಿ ಅವರು ಮರದ ಮೇಲಿರುವ ಹೂವುಗಳ ಗುಚ್ಛವನ್ನು ನೋಡುತ್ತಿದ್ದರು. ಕ್ಯಾಪ್ಶನ್ ಮೂಲಕ ತಮ್ಮ ಅನುಯಾಯಿಗಳಿಗೆ ಅವುಗಳನ್ನು ಕೀಳದಂತೆ ಕೇಳಿಕೊಂಡರು.

ಹಲವಾರು ಬಾಲಿವುಡ್ ಮತ್ತು ಟಿವಿ ಸೆಲೆಬ್ರಿಟಿಗಳು ಫೋಟೋಗೆ ಪ್ರತಿಕ್ರಿಯಿಸಿದ್ದಾರೆ. ಸೋನಮ್ ಕಪೂರ್ ಅದ್ಭುತವಾಗಿ ಕಾಣುತ್ತಿದೆ ಎಂದು ಹೊಗಳಿದರೆ ಮೌನಿ ರಾಯ್ ಖೂಬ್ ಸುಂದರ್ ಎಂದು ಕರೆದು ಕಮೆಂಟ್ ಮಾಡಿದ್ದಾರೆ.

ಇರಾನಿ ಅವರ ಕೆಲವು ಅಭಿಮಾನಿಗಳು ಅವರ ರೂಪಾಂತರವನ್ನು ಗಮನಿಸಿ ಕೆಲವು ಸಲಹೆಗಳನ್ನು ನೀಡುವಂತೆ ಕೇಳಿಕೊಂಡಿದ್ದಾರೆ. ಅಭಿಮಾನಿಗಳಲ್ಲಿ ಒಬ್ಬರು ನಟಿಯಿಂದ ಪ್ರೇರಿತರಾಗಿ, ಅದ್ಭುತವಾಗಿ ಕಾಣುತ್ತಿದ್ದೀರಿ. ನಿಮ್ಮ ತೂಕ ಇಳಿಸುವ ರಹಸ್ಯವನ್ನು ನಾನು ತಿಳಿದುಕೊಳ್ಳಬಹುದೇ ಎಂದು ಪ್ರಶ್ನಿಸಿದ್ದಾರೆ.

ನೀವು ನಿಜವಾಗಿಯೂ ಎಲ್ಲಾ ಕ್ಷೇತ್ರಗಳಲ್ಲಿ ಸಾಧಕರಾಗಿದ್ದೀರಿ ಎಂದು ಮತ್ತೊಬ್ಬರು ಬರೆದರೆ, ನೀವು ತುಂಬಾ ತೂಕವನ್ನು ಕಳೆದುಕೊಂಡಿದ್ದೀರಿ. ಹ್ಯಾಟ್ಸ್ ಆಫ್ ಎಂದು ಬರೆದಿದ್ದಾರೆ. ಮತ್ತೊಬ್ಬ ಅಭಿಮಾನಿ ನಿಮ್ಮಂತೆಯೇ ಪೆಟ್ರೋಲ್ ಬೆಲೆ ಇಳಿಕೆ ಮಾಡಿ‌ ಎಂದು ಕೇಳಿಕೊಂಡಿದ್ದಾರೆ.

Leave a Comment

Your email address will not be published. Required fields are marked *