ಮಂಗಳೂರು: ಮಕ್ಕಳನ್ನು ಮಾರುವವರಿಗೂ ಹಾಗೂ ಕೊಳ್ಳುವವರಿಗೂ ಬಾಲನ್ಯಾಯ ಕಾಯ್ದೆ-2015ರ ಸೆಕ್ಷನ್ 81 ಪ್ರಕಾರ 5 ವರ್ಷ ಸೆರೆಮನೆ ವಾಸ ಹಾಗೂ 1 ಲಕ್ಷ ರೂಪಾಯಿ ದಂಡ ವಿಧಿಸಲಾಗುವುದು.
ಮಕ್ಕಳ ಮಾರಾಟ ಅಪರಾಧವಾಗಿದ್ದು, ಈ ಅಪರಾಧದಲ್ಲಿ ಆಸ್ಪತ್ರೆಯವರು ಶಾಮೀಲಾದರೆ ಶಿಕ್ಷೆಯನ್ನು 3 ರಿಂದ 7 ವರ್ಷಗಳವರೆಗೆ ವಿಧಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ರಾಜ್ಯ ದತ್ತು ಸಂಪನ್ಮೂಲ ಏಜೆನ್ಸಿ ದೂ.ಸಂ:080-22867381/2, ನಗರದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ದೂ.ಸಂ.:0824-2440004 ಸಂಪರ್ಕಿಸುವಂತೆ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.