Ad Widget .

ಕಾಸರಗೋಡು ಜಿಲ್ಲೆಯ ರೇಷನ್ ಕಾರ್ಡ್‍ಗಳಲ್ಲಿ ಕನ್ನಡ ಮುದ್ರಿಸಲು ಒತ್ತಾಯ

Ad Widget . Ad Widget .

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಪಡಿತರ ಕಾರ್ಡ್ ಗಳಲ್ಲಿ ಹೆಸರು ಮತ್ತು ಇತರ ವಿವರಗಳನ್ನು ಕನ್ನಡದಲ್ಲಿ ಮುದ್ರಿಸಬೇಕು ಎಂದು ಕರ್ನಾಟಕ ಗಡಿ ಪ್ರದೇಶ ಅಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್ ಅವರು ಕಾಸರಗೋಡಿನ ಜಿಲ್ಲಾಧಿಕಾರಿ, ಕೇರಳಾದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ , ಆಹಾರ ಸಚಿವರು ಹಾಗೂ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

Ad Widget . Ad Widget .

ಕಾಸರಗೋಡು ಜಿಲ್ಲೆಯಲ್ಲಿ ಅಕ್ಷಯ ಯೋಜನೆಯಡಿ ಅಕ್ಷಯ ಕೇಂದ್ರಗಳಲ್ಲಿ ಹೊಸದಾಗಿ ರೇಷನ್ ಕಾರ್ಡ್‍ಗಳನ್ನು ಮುದ್ರಿಸುತ್ತಿದ್ದು, ಈ ರೇಷನ್ ಕಾರ್ಡುಗಳಲ್ಲಿ ಮಲಯಾಳಿ ಭಾಷೆ ಮಾತ್ರ ಮುದ್ರಿತವಾಗುತ್ತಿರುವುದನ್ನು ಅಲ್ಲಿನ ಕನ್ನಡ ಭಾಷಾ ಅಲ್ಪ ಸಂಖ್ಯಾತರಿರುವ ಜನ ವಿರೋಧಿಸಿರುತ್ತಾರೆ. ಈ ಹಿನ್ನೆಲೆ ಹಾಗೂ ಕೇರಳದ ಕಾಸರಗೋಡು ಜಿಲ್ಲೆಯಲ್ಲಿ ಮಾತೃ ಭಾಷೆಯಾಗಿ ಕನ್ನಡವನ್ನು 95 ಶೇ. ಜನ ಉಪಯೋಗಿಸುತ್ತಿದ್ದು, ಮಲಯಾಳೀ ಭಾಷೆ ಗೊತ್ತಿಲ್ಲದೇ ಇರುವವರು ಇದ್ದಾರೆ.
ಈ ಲೋಪದೋಷವನ್ನು ತಕ್ಷಣ ಸರಿಪಡಿಸಿ ಅಕ್ಷಯ ಕೇಂದ್ರಗಳಲ್ಲಿ ಬರುವ ಎಲ್ಲಾ ರೇಷನ್ ಕಾರ್ಡ್‍ಗಳು ಹಾಗೂ ಇತರೆ ಗುರುತಿನ ಚೀಟಿಗಳಲ್ಲಿ ಕಡ್ಡಾಯವಾಗಿ ಮಲಯಾಳಂ ಭಾಷೆಯ ಜೊತೆ ಕನ್ನಡವನ್ನು ಮುದ್ರಿಸುವಂತೆ ಒತ್ತಾಯ ಮಾಡಿದ್ದಾರೆ.

ಇದಲ್ಲದೆ ಮಂಜೇಶ್ವರದ ಹೆಸರನ್ನು ರೇಷನ್ ಕಾರ್ಡ್‍ನಲ್ಲಿ ಮಂಜೇಶ್ವರಂ ಎಂದು ಇಂಗ್ಲಿಷ್ ಭಾಷೆಯಲ್ಲಿ ಮಲಯಾಳೀಕರಣ ಮಾಡಲಾಗಿದೆ. ಇದನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರವು ಪ್ರಬಲವಾಗಿ ಖಂಡಿಸಿದೆ.

Leave a Comment

Your email address will not be published. Required fields are marked *