Ad Widget .

ಆರ್ಥಿಕ ಪಾರುಪತ್ಯ ಮೆರೆದ ಚೈನಾ| ಅಮೇರಿಕಾದ ಸಂಪತ್ತಿಗೇ ಸವಾಲ್!

Ad Widget . Ad Widget .

ಬೀಜಿಂಗ್: ಪ್ರಪಂಚದಲ್ಲಿ ದೊಡ್ಡಣ್ಣನ ಸ್ಥಾನದಲ್ಲಿದ್ದ ಅಮೆರಿಕವನ್ನು ಸಂಪತ್ತಿನ ವಿಚಾರದಲ್ಲಿ ಚೀನಾ ದೇಶ ಹಿಂದಿಕ್ಕಿದೆ. ಚೈನಾ ಸಂಪತ್ತು ಅಮೇರಿಕಾವನ್ನು ಹಿಂದಿಕ್ಕಿದೆ ಎಂದು ಬ್ಲೂಮ್ ಬರ್ಗ್ ವರದಿ ಮಾಡಿದೆ.

Ad Widget . Ad Widget .

ಜಾಗತಿಕ ಮಟ್ಟದ ಆಡಳಿತ ವ್ಯವಸ್ಥಾಪನಾ ಸಲಹಾ ಸಂಸ್ಥೆ ಮೆಕಿನ್ಸೆ & ಕಂಪನಿ ಪ್ರಕಟಿಸಿರುವ ವರದಿ ಪ್ರಕಾರ, ಕಳೆದ 2 ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ಹೆಚ್ಚಾಗಿದ್ದು, ಜಾಗತಿಕ ನಿವ್ವಳ ಲಾಭದ ಪೈಕಿ ಚೀನಾ ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ.

“ನಾವು ಹಿಂದೆಂದಿಗಿಂತಲೂ ಈಗ ಸಂಪದ್ಭರಿತವಾಗಿದ್ದೇವೆ” ಎಂದು ಜ್ಯೂರಿಚ್’ನಲ್ಲಿರುವ ಮೆಕಿನ್ಸೆ ಗ್ಲೋಬಲ್ ಇನ್ಸ್ಟಿಟ್ಯೂಟ್’ನ ಪಾಲುದಾರರಾದ ಜಾನ್ ಮಿಶ್ಕೆ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಮೆಕಿನ್ಸೆ&ಕಂಪನಿ ಪ್ರಕಟಿಸಿರುವ ವರದಿ ಪ್ರಕಾರ, 2000ನೇ ಇಸವಿಯಲ್ಲಿ 156 ಟ್ರಿಲಿಯನ್ ಡಾಲರ್’ನಷ್ಟಿದ್ದ ವಿಶ್ವಾದ್ಯಂತ ನಿವ್ವಳ ಮೌಲ್ಯ 2020ರಲ್ಲಿ 514 ಟ್ರಿಲಿಯನ್ ಗೆ ಏರಿಕೆಯಾಗಿದೆ ಎಂದು ಹೇಳಿದೆ. ಈ ಏರಿಕೆಯಲ್ಲಿ ಚೀನಾ ಮೂರನೇ ಒಂದರಷ್ಟು ಪಾಲನ್ನು ಹೊಂದಿದೆ.

2000ನೇ ಇಸವಿಯಲ್ಲಿ 7 ಟ್ರಿಲಿಯನ್ ಡಾಲರ್’ನಷ್ಟಿದ್ದ ಚೀನಾದ ಸಂಪತ್ತು ಈಗ 120 ಟ್ರಿಲಿಯನ್ ಡಾಲರ್’ಗೆ ಏರಿಕೆಯಾಗಿದೆ. ಆಸ್ತಿ ಬೆಲೆಗಳ ಏರಿಕೆ ಕಂಡ ಅಮೆರಿಕದಲ್ಲಿ ಸಂಪತ್ತಿನ ನಿವ್ವಳ ಮೌಲ್ಯ ಈ ಅವಧಿಯಲ್ಲಿ ದುಪ್ಪಟ್ಟಾಗಿದ್ದು 90 ಟ್ರಿಲಿಯನ್ ಡಾಲರ್’ಗೆ ತಲುಪಿದೆ.

ಜಗತ್ತಿನ ಅತಿ ದೊಡ್ಡ ಆರ್ಥಿಕತೆಗಳಾದ ಎರಡೂ ರಾಷ್ಟ್ರಗಳಲ್ಲಿ ಶೇ.10 ರಷ್ಟಿರುವ ಶ್ರೀಮಂತರ ಮನೆಗಳು ಮೂರನೇ ಎರಡರಷ್ಟು ಸಂಪತ್ತನ್ನು ಹೊಂದಿವೆ ಹಾಗೂ ಅವರ ಪಾಲು ಏರುತ್ತಲೇ ಇದೆ ಎಂದು ವರದಿ ಹೇಳಿದೆ.

ಜಾಗತಿಕ ನಿವ್ವಳ ಮೌಲ್ಯದ ಶೇ.68 ರಷ್ಟು ರಿಯಲ್ ಎಸ್ಟೇಟ್’ನಲ್ಲಿ ಸಂಗ್ರಹವಾಗಿದ್ದರೆ, ಉಳಿದದ್ದು ಮೂಲಸೌಕರ್ಯ, ಯಂತ್ರೋಪಕರಣಗಳು ಮತ್ತು ಉಪಕರಣಗಳಲ್ಲಿದ್ದು ಅತ್ಯಂತ ಕಡಿಮೆ ಪ್ರಮಾಣದಲ್ಲಿ ಬೌದ್ಧಿಕ ಆಸ್ತಿ ಮತ್ತು ಪೇಟೆಂಟ್ ನಲ್ಲಿ ಸಂಗ್ರಹವಾಗಿದೆ ಎಂದು ವರದಿ ತಿಳಿಸಿದೆ.

Leave a Comment

Your email address will not be published. Required fields are marked *