ಬಂಟ್ವಾಳ: ತಡರಾತ್ರಿ ಲಾರಿ-ಬೈಕ್ ನಡುವೆ ಢಿಕ್ಕಿ| ಗಂಭೀರವಾಗಿ ಗಾಯಗೊಂಡ ಸವಾರ ಸಾವು|

Ad Widget ... ..

ಬಂಟ್ವಾಳ: ಇಲ್ಲಿನ ಮೆಲ್ಕಾರ್ ಜಂಕ್ಷನ್ ಬಳಿ ನ.16ರಂದು ತಡರಾತ್ರಿ ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಗಂಭೀರವಾಗಿ ಗಾಯಗೊಂಡ ಬೈಕ್ ಸವಾರ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ನಡೆದಿದೆ. ಮಂಗಳೂರು ನಿವಾಸಿ ಗಣೇಶ್(36) ಮೃತಪಟ್ಟವರು.

Ad Widget

ಗಣೇಶ್ ಅವರು ಮೆಲ್ಕಾರ್ ಜಂಕ್ಷನ್‌ ನಲ್ಲಿ ಬೈಕ್ ಸವಾರಿ ಮಾಡುತ್ತಾ ಮುಡಿಪು ರಸ್ತೆಗೆ ಕ್ರಾಸ್ ಮಾಡುತ್ತಿದ್ದರು. ಈ ಸಂದರ್ಭ ಹೆದ್ದಾರಿಯಲ್ಲಿ ಸಾಗುತ್ತಿದ್ದ ಲಾರಿ ಢಿಕ್ಕಿ ಹೊಡೆದಿದೆ.

ಪರಿಣಾಮ ರಸ್ತೆಗೆ ಬಿದ್ದ ಗಣೇಶ್ ಅವರು ಗಂಭೀರವಾಗಿ ಗಾಯಗೊಂಡಿದ್ದರು.‌ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅವರು ಚಿಕಿತ್ಸೆ ಫಲಕಾರಿಯಾಗದೆ ನಸುಕಿನ ವೇಳೆ ಮೃತಪಟ್ಟಿದ್ದಾರೆ.

Leave a Comment

Your email address will not be published. Required fields are marked *