ಬಂಟ್ವಾಳ: ಮಸೀದಿಗೆ ನುಗ್ಗಿ ಧರ್ಮಗುರುಗಳ ಮೇಲೆ ಹಲ್ಲೆಗೆತ್ನಿಸಿದ ಮೂವರು ಆರೋಪಿಗಳನ್ನು ಕೊಣಾಜೆ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬಂಟ್ವಾಳದ ಕುರ್ನಾಡು ನಿವಾಸಿ ಶರಣ್ (24), ವಿಘ್ನೇಶ್ (23) ಮತ್ತು ಹರ್ಷಿತ್ (22) ಎಂದು ಗುರುತಿಸಲಾಗಿದೆ.
ನ.14 ರ ಮಧ್ಯರಾತ್ರಿ ದ್ವಿಚಕ್ರ ವಾಹನದಲ್ಲಿ ಬಂದ ಆರೋಪಿಗಳು ಅಬ್ದುಲ್ ಸಮೀರ್ ಎಂಬವರ ಮನೆ ಬಳಿ ಬಂದು ಅವರ ಸಮುದಾಯವನ್ನು ನಿಂದಿಸಿ, ಸಮೀರ್ ಮನೆಯಿಂದ ಹೊರಗೆ ಬರುತ್ತಿದ್ದಂತೆಯೇ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಬಳಿಕ ಮಸೀದಿಗೆ ನುಗ್ಗಿ ಧರ್ಮಗುರುಗಳನ್ನು ನಿಂದಿಸಿ ಹಲ್ಲೆಗೆ ಯತ್ನಿಸಿ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿತ್ತು. ಇದೀಗ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.