Ad Widget .

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು-ಬದಲು ಪ್ರಕರಣ| ಸಂತ್ರಸ್ತ ಮಗು ಡಿಎನ್ಎ ವರದಿ ಬರುವ ಮೊದಲೇ ಸಾವು|

Ad Widget . Ad Widget .

ಮಂಗಳೂರು: ಇಲ್ಲಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎನ್ನಲಾದ ಮಗು ಅದಲು-ಬದಲು ಪ್ರಕರಣದಲ್ಲಿನ ಸಂತ್ರಸ್ತ ಮಗು ಸೋಮವಾರ ಆಸ್ಪತ್ರೆಯಲ್ಲಿ ಮೃತಪಟ್ಟಿದೆ. ಮೂಲಗಳ ಪ್ರಕಾರ, ಉಸಿರಾಟದ ತೊಂದರೆಯಿಂದ ಮಗು ಮೃತಪಟ್ಟಿದೆ ಎನ್ನಲಾಗಿದೆ.

Ad Widget . Ad Widget .

ಅದಲು ಬದಲು ಪ್ರಕರಣದಲ್ಲಿ ಪೋಷಕರು ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದು, ಬಳಿಕ ಮಗುವಿನ ಡಿ ಎನ್ ಎ ಪರೀಕ್ಷೆಗಾಗಿ ಮಾದರಿಯನ್ನು ಹೈದರಾಬಾದಿಗೆ ಕಳುಹಿಸಿಕೊಡಲಾಗಿತ್ತು. ಪರೀಕ್ಷಾ ವರದಿ ಬರುವುದಕ್ಕಿಂತ ಮೊದಲೇ ಮಗು ಮೃತಪಟ್ಟಿದೆ.

ಮಂಗಳೂರಿನ ಲೇಡಿಗೋಶನ್ ಆಸ್ಪತ್ರೆಯಲ್ಲಿ ಅಕ್ಟೋಬರ್ 15ರಂದು, ಕುಂದಾಪುರ ಮೂಲದ ಪೋಷಕರು, ನಮಗೆ ಆಸ್ಪತ್ರೆಯ ಸಿಬ್ಬಂದಿ ಮೊದಲು, ಮಗು ಹೆಣ್ಣು ಎಂದು ಹೇಳಿದ್ದರು. ದಾಖಲೆಗಳಲ್ಲಿ ಕೂಡಾ ಅದನ್ನೇ ಉಲ್ಲೇಖಿಸಿ, ಕೊನೆಗೆ ಯಾರದೋ ಗಂಡು ಮಗುವನ್ನು ಕೊಟ್ಟಿದ್ದಾರೆ ಎಂದು ದೂರು ದಾಖಲಿಸಿದ್ದರು. ಕೊನೆಗೆ ಪ್ರಕರಣ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು. ಆ ಬಳಿಕ ಕೋರ್ಟ್ ಆದೇಶದಂತೆ DNA ಪರೀಕ್ಷೆಗಾಗಿ ಮಗುವಿನ ಮತ್ತು ಪೋಷಕರ ಮಾದರಿಗಳನ್ನು ಕಳುಹಿಸಿಕೊಡಲಾಗಿತ್ತು. ಇದೀಗ ಅದರ ವರದಿ ಬರುವ ಮೊದಲೇ ಮಗು ಮಾತ್ರ ಮೃತಪಟ್ಟಿದೆ.

ಘಟನೆಯ ಕುರಿತು ಪ್ರತಿಕ್ರಿಯಿಸಿದ ಲೇಡಿಗೋಶನ್ ವೈದ್ಯಕೀಯ ಅಧೀಕ್ಷಕ ಡಾ ದುರ್ಗಾ ಪ್ರಸಾದ್ , ಮಗು ಮೃತಪಟ್ಟಿರುವುದನ್ನು ಖಚಿತಪಡಿಸಿದ್ದಾರೆ. ಮಗುವಿನ ಅಂತ್ಯಸಂಸ್ಕಾರ ಕಾನೂನಿನ ಪ್ರಕಾರವೇ ನಡೆಯಲಿದೆ. ಮಗುವಿನ ಪೋಷಕರಿಗೂ ಮಾಹಿತಿ ನೀಡಲಾಗಿದೆ ಎಂದು ಹೇಳಿದ್ದಾರೆ

Leave a Comment

Your email address will not be published. Required fields are marked *