Ad Widget .

ದ್ವಾದಶ ರಾಶಿಗಳ ವಾರಭವಿಷ್ಯ

ಸಮಯ ಎನ್ನುವುದು ನಮ್ಮ ಬದುಕಿನ ಪಾಠವನ್ನು ಕಲಿಸುತ್ತದೆ. ಸಮಯಕ್ಕೆ ತಕ್ಕಂತೆ ನಾವು ನಮ್ಮನ್ನು ಬದಲಿಸಿಕೊಳ್ಳುವ ಕೌಶಲ್ಯವನ್ನು ಕಲಿತಿರಬೇಕು. ಇಲ್ಲವಾದರೆ ಸಾಕಷ್ಟು ಸಮಸ್ಯೆಗಳನ್ನು ಎದುರಿಸಬೇಕಾಗುವುದು. ಬದಲಾವಣೆ ಎನ್ನುವುದು ನಿರಂತರವಾಗಿ ಹರಿಯುವ ನದಿಯಂತೆ ಅದು ಹೇಗೆ ಬರುತ್ತದೆಯೋ ಹಾಗೆ ನಾವು ಸ್ವೀಕರಿಸಬೇಕಾಗುವುದು. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ವಾರ ಸಾಕಷ್ಟು ಗ್ರಹಗಳ ಬದಲಾವಣೆಗಳು ಉಂಟಾಗುವುದು ಮತ್ತು ಅವುಗಳ ಪ್ರಭಾವ ರಾಶಿಚಕ್ರಗಳ ಮೇಲೆ ಗಣನೀಯವಾಗಿರುತ್ತವೆ. ಆ ಬದಲಾವಣೆಗಳು ನಿಮ್ಮ ಜೀವನದಲ್ಲಿ ಹೇಗಿರುತ್ತದೆ ಎನ್ನುವುದನ್ನು ತಿಳಿಯಲು ಮುಂದಿರುವ ವಿವರಣೆ ಇಲ್ಲಿದೆ.

Ad Widget . Ad Widget .

ಮೇಷ: ಗ್ರಹಗಳ ವಿದ್ಯಮಾನಗಳು ಹೆಚ್ಚಿನ ಬದಲಾವಣೆ ಇಲ್ಲವಾದ್ದರಿಂದ, ಗುರು-ಶನಿ ಮಕರದಲ್ಲಿರುವುದರಿಂದ ನಿಮಗೆ ಯಾವ ಅಡ್ಡಿ-ಆತಂಕಗಳು ಬಾರದೆ ಈ ವಾರ ಸುಗಮವಾಗಿ ಸಾಗುತ್ತದೆ.
ರಾಶ್ಯಾಧಿಪತಿ ಶುಕ್ರನ ಮನೆಯಲ್ಲಿದ್ದು, ವಿವೇಚನೆಯಿಂದ ವ್ಯವಹಾರ ನಡೆಸಿದರೆ ಧನವೂ ಬರುತ್ತದೆ.

Ad Widget . Ad Widget .

ವೃಷಭ: ರಾಹು ಸ್ವಕ್ಷೇತ್ರಗತನಾಗಿ ಶುಕ್ರನ ಮನೆಯಲ್ಲಿ ಇರುವುದರಿಂದ ಅಡೆ-ತಡೆಗಳಿದ್ದರೂ ಹಣದ ಕೊರತೆಯನ್ನು ಪರಮಾತ್ಮನೇ ನೀಗುತ್ತಾನೆ. ವ್ಯಥೆ ಪಡುವ ಅವಶ್ಯಕತೆ ಇಲ್ಲ. ನವಮದಲ್ಲಿ ಗುರುವಿರುವುದರಿಂದ ಕುಲದೇವರ ಅನುಗ್ರಹದಿಂದ ನಿಮ್ಮನ್ನು ಎಲ್ಲರಿಂದ ಕಾಪಾಡಿ ಯಶಸ್ಸು ಸಿಗುತ್ತದೆ.

ಮಿಥುನ: ರಾಶ್ಯಾಧಿಪತಿ ಬುಧನು ಸಪ್ತಮದಲ್ಲಿ ಗುರು ಮನೆಯಲ್ಲಿದ್ದು, ನಿಮ್ಮನ್ನು ಅಪವಾದಗಳಿಂದ ರಕ್ಷಿಸುತ್ತಾನೆ ಅಷ್ಟಮ ಗುರು-ಶನಿ, ಮಕರದಲ್ಲಿ ಇರುವುದರಿಂದ ಕೆಲಸ, ಕಾರ್ಯಗಳನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗಬೇಕು. ನಿಮ್ಮ ನಿರ್ಧಾರ ನ.20ರ ನಂತರ ತೆಗೆದುಕೊಳ್ಳುವುದು ಒಳ್ಳೆಯದು.

ಕಟಕ: ಚಂದ್ರನು ನಿತ್ಯವೂ ಗ್ರಹಗಳನ್ನು ಸುತ್ತಿ ಅವನ ಸ್ವಕ್ಷೇತ್ರ, ದ್ವಿತೀಯ, ಸಪ್ತಮ, ಪಂಚಮ, ಏಕಾದಶದಲ್ಲಿ ಲಾಭವನ್ನು ಕೊಡುತ್ತಾನೆ. ಗುರು ಈಗ ಸಪ್ತಮದಲ್ಲಿದ್ದು, ಸಂತಸ ತಂದಿದ್ದಾನೆ. ಕೆಲ ಕಾರ್ಯ ಸ್ಥಗಿತವಾಗಿವೆ. ನ. 20ರಿಂದ ಗುರು ಶನಿಯ ಮನೆಯಲ್ಲಿ ಇರುವುದರಿಂದ ಹಿತ-ಸುಖ ನಿಮ್ಮ ನಿರೀಕ್ಷೆಯಂತೆ ಬರುವುದಿಲ್ಲ.

ಸಿಂಹ: ಸಿಂಹಕ್ಕೆ ಯಾವ ತಾಪತ್ರಯಗಳಾಗಲಿ, ದುಃಖವಾಗಲಿ ಬರುವುದಿಲ್ಲ. 6ರಲ್ಲಿ ಗುರುವಿದ್ದರೂ ತೃಪ್ತಿಯನ್ನೂ, ಮನೋಧೈರ್ಯವನ್ನೂ ನೀಡಿ ಕಾಪಾಡುತ್ತಾನೆ. ನ.20ರ ನಂತರದಲ್ಲಿ ಗುರುವು 7ನೇ ಮನೆಗೆ ಬಂದು ಸುಖ, ಶಾಂತಿ, ಭೋಗ-ಭಾಗ್ಯಗಳನ್ನು ಕೊಟ್ಟು ಕಾಪಾಡುತ್ತಾನೆ. ಸೂರ್ಯನಾರಾಯಣ ಮಂತ್ರ-ಜಪ ಅರ್ಚಿಸಿ.

ಕನ್ಯಾ: ಪಂಚಮ ಗುರು-ಶನಿ ಮಿಶ್ರಫಲ ತಂದುಕೊಟ್ಟು ಸ್ವಸ್ಥ ಚಿತ್ತವಾಗಿರಲು ಹೇಳಿದ್ದಾರೆ. ಆದರೆ ನೀವು ಮಾಡಿದ್ದೇ ಮಾಡುವುದು. ಅದನ್ನು ಕೈಬಿಟ್ಟು, ಗುರುವಿನ ಮಾರ್ಗವನ್ನು ಅನುಸರಿಸಿ ಬದುಕಿದರೆ ಒಳ್ಳೆಯದಾಗುತ್ತದೆ. ಶನಿಯ ಅಷ್ಟೋತ್ತರ ಪಠಿಸಿ. ಗುರುವಿಗೆ ದತ್ತಾತ್ರೇಯನನ್ನು ಆರಾಧಿಸಿ.

ತುಲಾ: ಈ ರಾಶಿಯವರಿಗೆ 4ನೇ ಮನೆಯಲ್ಲಿ ಶನಿಯಿದ್ದು, ಪಂಚಮಕ್ಕೆ ಗುರು ಬರುವವನಿದ್ದಾನೆ. ಗುರು ಸಂತಸ-ಸುಖವನ್ನು ಕೊಡುತ್ತಾನೆ. ಕೆಲಸ, ಕಾರ್ಯಗಳನ್ನು ಎಚ್ಚರಿಕೆಯಿಂದ ನಡೆಸಿಕೊಂಡು ಹೋಗಬೇಕು. ಆದರೆ ವಿಶೇಷವಾದ ದೇವತಾ ಪ್ರಾರ್ಥನೆ ಇರಲಿ. ಗುರು ದತ್ತಾತ್ರೇಯನನ್ನು ಆರಾಧಿಸಿ.

ವೃಶ್ಚಿಕ: ಕೇತುವು ವೃಶ್ಚಿಕರಾಶಿಯಲ್ಲಿದ್ದು ಗಣಪತಿಯು ಅವನ ಪೂಜೆಗೆ ನಿಮ್ಮನ್ನು ಆಹ್ವಾನಿಸುತ್ತಿದ್ದಾನೆ. ಗರಿಕೆಯನ್ನು, ಕೆಂಪು ವಸ್ತ್ರವನ್ನು ಕೊಟ್ಟು ಪೂಜಿಸಿ, ಕೇಳಿದ ವರ ನೀಡುತ್ತಾನೆ. ಭಾಗ್ಯದಲ್ಲಿ ಶನಿ ಇದ್ದು, ಯಾವ ಕೊರತೆ ಇರುವುದಿಲ್ಲ. ವಿವೇಕದಿಂದ ವ್ಯವಹರಿಸಿದರೆ ನಿಮ್ಮ ಭಂಡಾರ ಭರ್ತಿಯಾಗುತ್ತದೆ.

ಧನು: ಮನುಷ್ಯನು ನಾಲ್ಕುಚಕ್ರದ ವಾಹನದಲ್ಲಿ ಕೂತರೆ ವಾಹನ ಮೈಲಿಯ ವೇಗವನ್ನು ಸೂಚಿಸುತ್ತದೆ. ಹಾಗೆಂದ ಮಾತ್ರಕ್ಕೆ ಪ್ರಾಣವನ್ನು ತೆತ್ತು ಅತಿವೇಗದ ಮೈಲಿಯನ್ನು ದಾಟಬಾರದು. ಸದೃಢವಾದ ಆರೋಗ್ಯ ಕಾಯ್ದುಕೊಳ್ಳಲು ಗಮನ ನೀಡಿ. ಯಾರು ಏನೇನು ಮಾಡುವರೆಂದು ಕಾದು ಉತ್ತರ ಕೊಟ್ಟರೆ ಗುರು ರಾಶಿಯಲ್ಲಿ ಜನಿಸಿದ ನಿಮಗೆ ಅತ್ಯಂತ ಸುಖವೂ, ಧರ್ಮ ಮಾರ್ಗವೂ ಉಂಟಾಗಿ ಇಚ್ಛಿಸಿದ್ದನ್ನು ಕೊಡುತ್ತಾನೆ.

ಮಕರ: ಗುರುಸಂಚಾರವು ಮಕರದಿಂದ ದ್ವಿತೀಯಕ್ಕೆ ಬರಲಿದ್ದು, ನ.20ರಿಂದ ನಿಮಗೆ ವಿಶೇಷವಾದ ಲಾಭಗಳು ಬರಲಿವೆ. ದೇವರಲ್ಲಿ ಪ್ರಾರ್ಥಿಸಿ. ದತ್ತಾತ್ರೇಯನ ಅನುಗ್ರಹದಿಂದ ಕೇಳಿದ್ದನ್ನು ಕೊಟ್ಟು ನಿಮ್ಮ ಮುಖದಲ್ಲಿ ಸಂತಸ ಮೂಡಿಸುವಂತೆ ಮಾಡುತ್ತಾನೆ. ಜನ್ಮ ಶನಿಯ ಹಿಡಿತದಿಂದ ಬಿಡಿಸಿಕೊಳ್ಳಲು ಸಮಯವಿದ್ದು, ದೈವಮಾರ್ಗದಲ್ಲಿ ಸಾಗಿರಿ.

ಕುಂಭ: ನ. 20ರಿಂದ ಗುರುವು ಬಂದು ನಿರ್ದಿಷ್ಟ ಕಾರ್ಯದಲ್ಲಿ ಜಯ, ಧನಲಾಭ ತೋರುತ್ತಾನೆ. ಲಗ್ನಾತ್ ಗುರುವಿಗೆ ಗುರು ಪರಂಪರಾ ಸ್ತೋತ್ರವನ್ನು ಪಠಿಸಿ ವ್ಯವಹಾರ ಸುಗಮವಾಗಿ ನಡೆಸಿಕೊಳ್ಳಬಹುದು. ಆದರೆ ಎಚ್ಚರ. ಶನಿ ಇನ್ನು ದ್ವಾದಶದಲ್ಲೇ ಇರುತ್ತಾನೆ. ಕರ್ವಧಿಪತಿ ಶನಿ ಪಾಪ-ಪುಣ್ಯಗಳನ್ನು ವಿಶ್ಲೇಷಿಸಿ ಫಲನೀಡುತ್ತಾನೆ. ಶನಿದೇವರಿಗೆ ಎಣ್ಣೆಮಜ್ಜನ ಮಾಡಿಸಿ, ಸ್ನಾನ ಮಾಡಿರಿ ಶುಭವಾಗುತ್ತದೆ.

ಮೀನ: ಈ ರಾಶಿಯವರಿಗೆ ಗುರು-ಶನಿ ಏಕಾದಶದಲ್ಲಿದ್ದು ನಿಮ್ಮನ್ನು ಸುಖದಲ್ಲೇ ಇಟ್ಟಿರುತ್ತಾನೆ. ಯಶಸ್ಸಿನತ್ತ ಕೊಂಡೊಯ್ಯುತ್ತಾನೆ. ಜನ್ಮಾಂತರದಲ್ಲಿ ಪೂಜೆಗೆ ತಂದ ಹೂವುಗಳು ಪುಣ್ಯಸಂಗ್ರಹ ಮಾಡಿ ನಿಮ್ಮ ಬಾಳನ್ನು ಸುಖವಾಗಿರುವಂತೆ ನೋಡಿಕೊಳ್ಳುತ್ತಾನೆ. ಈಶ್ವರನ ಆರಾಧನೆ ಇರಲಿ. ಉಪಕಾರದ ಮನಸ್ಸಿರಲಿ. ದೈವಸಂಪತ್ತು ವೃದ್ಧಿಯಾಗಲಿ.

Leave a Comment

Your email address will not be published. Required fields are marked *