ತಿರುವನಂತಪುರ : ಕೇರಳದ ಪ್ರಸಿದ್ದ ಯಾತ್ರಾಕ್ಷೇತ್ರ ಶಬರಿಮಲೆ ಅಯ್ಯಪ್ಪಸ್ವಾಮಿ ಸನ್ನಿಧಾನವು ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ಕೊರೊನಾ ಹಾವಳಿಯಿಂದ ಕಳೆದ ವರ್ಷ ಶಬರಿಮಲೆಗೆ ಯಾತ್ರೆ ಮಾಡಿದವರ ಸಂಖ್ಯೆ ತೀರಾ ಕಡಿಮೆಯಿದ್ದು ಈ ಬಾರಿ ಹೆಚ್ಚಿನ ಭಕ್ತಾಧಿಗಳು ಆಗಮಿಸುವ ನಿರೀಕ್ಷೆಯಿದೆ.
ಈ ಬಾರಿ ದರ್ಶನಕ್ಕೆ ಕನಿಷ್ಟ ನಿಯಮಗಳೊಂದಿಗೆ ಅವಕಾಶ ನೀಡಲಾಗಿದ್ದು,ಮಾಲಾಧಾರಣೆ ಆರಂಭಗೊಂಡಿದೆ. ಈ ನಡುವೆ ಅಯ್ಯಪ್ಪ ಸ್ವಾಮಿಯ ಪ್ರಸಿದ್ಧ ‘ಆರಾವಣಾ ಪಾಯಸಮ್’ನಲ್ಲಿ ಅರಬಿ ಹೆಸರು ಹಾಗೂ ಹಲಾಲ್ ಪ್ರಮಾಣಪತ್ರ ಇದೆ ಎಂಬ ವಿಚಾರ ಬೆಳಕಿಗೆ ಬಂದಿದೆ. ಹಿಂದೂ ಧರ್ಮಕ್ಷೇತ್ರದ ಪ್ರಸಾದದಲ್ಲಿ ಅನ್ಯಧರ್ಮದ ಹೆಸರೇಗೆ ಬಂತು ಎಂಬುದು ಚರ್ಚೆಗೆ ಗ್ರಾಸವಾಗಿದೆ.
ಶಬರಿಮಲೆ ದೇವಸ್ಥಾನದಲ್ಲಿ ಸಿಗುವ ‘ಅರಾವಣಾ ಪಾಯಸಮ್’ಗೆ ಬಹಳ ಪ್ರಮುಖ ಸ್ಥಾನವಿದೆ. ಈ ಸಾಂಪ್ರದಾಯಿಕ ಸಿಹಿ ಪ್ರಸಾದವನ್ನು ತರದೆ ಅಯ್ಯಪ್ಪ ಯಾತ್ರೆ ಸಂಪೂರ್ಣವಾಗುವುದಿಲ್ಲ. ಆದರೆ ಈ ಪ್ರಸಾದ ತಯಾರಿಕೆಯ ಗುತ್ತಿಗೆಯನ್ನು ಕೇರಳ ತಿರುವಾಂಕೂರ್ ದೇವಸ್ವಂ ಮಂಡಳಿಯು ಓರ್ವ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ನೀಡಿದೆ ಎಂದು ಹೇಳಲಾಗಿದೆ. ಇದು ಭಕ್ತರ ಭಾವನೆ ಕೆರಳಿಸಿದೆ.
ಈ ಪ್ರಸಾದಕ್ಕೆ ‘ಅಲ ಝಹಾ’ ಎಂಬ ಅರೇಬಿ ಹೆಸರು ನೀಡಿದೆ ಹಾಗೂ ಅದರ ಮೇಲೆ `ಹಲಾಲ್ ಪ್ರಮಾಣೀಕೃತ’ ಎಂದು ಉಲ್ಲೇಖಿಸಲಾಗಿದೆ.
ಇದು ಅಯ್ಯಪ್ಪ ಭಕ್ತರ ಅಸಹನೆಗೆ ಕಾರಣವಾಗಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ.