Ad Widget .

ನಾವೆಲ್ಲ ಜೀವಕ್ಕೆ ವಿಮೆ ಮಾಡ್ಸಿದ್ರೆ ಇಲ್ಲೊಬ್ಬಳು ಯಾವ್ದಕ್ಕೆ ವಿಮೆ ಮಾಡ್ಸಿದಾಳೆ ಗೊತ್ತಾ?

Ad Widget . Ad Widget .

ನ್ಯೂಸ್ ಡೆಸ್ಕ್: ನಾವು ನಮ್ಮ ಜೀವಕ್ಕೆ, ಮನೆಗೆ, ಕಾರಿಗೆ ವಿಮೆ ಮಾಡಿಸುತ್ತೇವೆ. ಯಾಕೆಂದರೆ ಅದು ಹಾಳಾದರೆ, ರಿಪೇರಿ ವೆಚ್ಚಕ್ಕೆ ಬೇಕಾಗುತ್ತದೆ ಎಂಬ ಮುಂಜಾಗ್ರತೆ. ಜೀವಕ್ಕಾದರೆ ನಮ್ಮನ್ನು ಅವಲಂಭಿಸಿದ ಇನ್ನೊಬ್ಬರಿಗೆ ಉಪಯೋಗ ಆಗ್ಲಿ ಅಂತ. ಆದರೆ ಯಾವತ್ತಾದ್ರೂ ಯಾರಾದರೂ ಪೃಷ್ಠಕ್ಕೆ ಅಥವಾ ನಿತಂಬಕ್ಕೆ ವಿಮೆ ಮಾಡಿಸಿದ್ದನ್ನು ಕೇಳಿದ್ದೀರಾ?! ಹಾಗಿದ್ರೆ ಈ ಕಥೆ ಓದಿನೋಡಿ…

Ad Widget . Ad Widget .

ಬ್ರೆಜಿಲ್‌ನ 35 ವರ್ಷದ ಮಾಡೆಲ್‌ ನ್ಯಾಥಿ ಕಿಹಾರಾ ಅವರು ತಮ್ಮ ಹಿಂಬದಿಗೆ ಬರೋಬ್ಬರಿ 13 ಕೋಟಿ ರೂ.ಮೊತ್ತದ ವಿಮೆ ಮಾಡಿಸಿದ್ದಾರೆ. ಅವರ ಪೃಷ್ಠವು 126 ಸೆಂ.ಮೀ. ಅಗಲವಿದೆಯಂತೆ. ಇದನ್ನು ಜೋಪಾನವಾಗಿ ಕಾಪಾಡಿಕೊಂಡಿರುವ ನ್ಯಾಥಿಗೆ 2021ನೇ ಸಾಲಿನ ಸುಂದರ ನಿತಂಬ ಸುಂದರಿ ‘ ಮಿಸ್‌ ಬುಮ್‌ಬುಮ್‌’ ಪ್ರಶಸ್ತಿ ಕೂಡ ನೀಡಲಾಗಿದೆ.

ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ನಾಲ್ಕು ತಿಂಗಳಲ್ಲೇ ನ್ಯಾಥಿಗೆ ನಿತಂಬ ಸುಂದರಿ ಕಿರೀಟ ಸಿಕ್ಕಿರುವುದು ವಿಶೇಷ. ಅಂದಹಾಗೆ, ಆಕೆಗೆ 9 ವರ್ಷದ ದೊಡ್ಡ ಮಗ ಕೂಡ ಇದ್ದಾನೆ.

ಬ್ರೆಜಿಲ್‌ನಲ್ಲೇ ಅತ್ಯಂತ ದೊಡ್ಡ, ವಿಶಾಲವಾದ ನಿತಂಬ ಇರುವುದು ನನ್ನ ಬಳಿ ಮಾತ್ರ. ಈ ಬಗ್ಗೆ ಹೆಮ್ಮೆ ಇದೆ. ಅನೇಕ ಮಹಿಳೆಯರು ತಮ್ಮ ದೇಹದ ಸೌಂದರ್ಯದ ಬಗ್ಗೆ ತಾವಾಗಿಯೇ ಕೀಳರಿಮೆ ಬೆಳೆಸಿಕೊಂಡಿರುತ್ತಾರೆ. ಅವರು ತಮ್ಮ ದೇಹವನ್ನು ದ್ವೇಷಿಸುತ್ತಿರುತ್ತಾರೆ. ಎದೆ ದಪ್ಪಗಿದೆ, ತೊಡೆ ಸಣ್ಣಗಿದೆ ಎಂದು ಕೊರಗುತ್ತಲೇ ಇರುತ್ತಾರೆ. ಇವರಿಗೆಲ್ಲ ನನ್ನ ನಿತಂಬ ಸೌಂದರ್ಯ ಪ್ರೀತಿಯಿಂದ ಸಂದೇಶ ಕೊಡಲು ಇಷ್ಟಪಡುತ್ತೇನೆ. ನಮ್ಮ ದೇಹ ಹೇಗಿದೆಯೋ ಹಾಗೆಯೇ ಪ್ರೀತಿಸಬೇಕಿರುವುದು ಬಹಳ ಮುಖ್ಯ. ಇದರಿಂದ ಆತ್ಮವಿಶ್ವಾದ ಹೆಚ್ಚುತ್ತದೆ. ನಮ್ಮ ಘನತೆಯನ್ನು ನಾವಾಗಿಯೇ ಕೆಳಕ್ಕೆ ಇಳಿಸಬಾರದು ಎಂದು ಸ್ಥಳೀಯ ಪತ್ರಿಕೆಯೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮನದಾಳ ಹಂಚಿಕೊಂಡಿದ್ದಾರೆ. ನ್ಯಾಥಿಯ ಮುಂದಿನ ಗುರಿ ತನ್ನ ನಿತಂಬವನ್ನು ಹೆಚ್ಚುವರಿ 4 ಸೆ.ಮೀ. ವಿಶಾಲ ಆಗಿಸುವುದಂತೆ.!

Leave a Comment

Your email address will not be published. Required fields are marked *