Ad Widget .

ಬಸ್ ನಿಲ್ದಾಣದಲ್ಲಿ ಗುಂಪುಘರ್ಷಣೆ| ಓರ್ವ ಗಂಭೀರ|

Ad Widget . Ad Widget .

ಚಿಕ್ಕಮಗಳೂರು: ಬಸ್​ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ನಡೆದ ಮಾರಾಮಾರಿಯಲ್ಲಿ ಓರ್ವ ಗಂಭೀರ ಗಾಯಗೊಂಡಿರುವ ಘಟನೆ ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.

Ad Widget . Ad Widget .

ಮೂಡಿಗೆರೆ ಬಸ್​ ನಿಲ್ದಾಣದಲ್ಲಿ ಎರಡು ಗುಂಪುಗಳ ನಡುವೆ ಏಕಾಏಕಿ ಮಾರಾಮಾರಿ ನಡೆದಿದ್ದು, ಘಟನೆಯಲ್ಲಿ ಓರ್ವ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಯುವಕರ ವರ್ತನೆ ಕಂಡು ಸ್ಥಳದಲ್ಲಿದ್ದ ಪ್ರಯಾಣಿಕರು ಕಂಗಾಲಾಗಿದ್ದಾರೆ.

ಬಸ್​ ನಿಲ್ದಾಣದಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿನಿಯರು ಹಾಗೂ ಮಹಿಳೆಯರಿಗೆ ಭದ್ರತೆ ಇಲ್ಲ ಎನ್ನುವಂತಾಗಿದೆ. ನಿಲ್ದಾಣದಲ್ಲಿ ಇರುವ ಸಿಸಿ ಕ್ಯಾಮರಗಳು ಕೆಟ್ಟುನಿಂತಿವೆ. ಕೂಡಲೇ ಸಿಸಿಟಿವಿ ದುರಸ್ಥಿ ಮಾಡಿ ಪುಂಡರ ಹಾವಳಿ ನಿಯಂತ್ರಿಸುವಂತೆ ಸ್ಥಳೀಯರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಘಟನೆ ಸಂಬಂಧಿಸಿದಂತೆ ಓರ್ವ ಬಂಧನಕ್ಕೆ ಒಳಗಾಗಿದ್ದಾನೆ.

Leave a Comment

Your email address will not be published. Required fields are marked *