Ad Widget .

ಮಂಗಳೂರು: ನಾಗಬಿಂಬದ ಕಲ್ಲು ಹಾನಿಗೆಡಹಿದ ಕಿಡಿಗೇಡಿಗಳು| ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಎಚ್ಚರಿಕೆ|

Ad Widget . Ad Widget .

ಮಂಗಳೂರು: ನಗರದ ಕೋಡಿಕಲ್‌ ನಾಗಬನದ ಕಲ್ಲನ್ನು ಎಸೆದಿರುವ ಕಿಡಿಗೇಡಿಗಳನ್ನು ಬಂಧಿಸದೇ ಇರುವ ಪೊಲೀಸ್ ಕ್ರಮವನ್ನು ಖಂಡಿಸಿ ಇಂದು ಕೋಡಿಕಲ್‌ನ ನಾಗಬನದ ಬಳಿ ವಿಎಚ್ ಪಿ ಹಾಗೂ ಸ್ಥಳೀಯ ನಾಗರೀಕರು ಪ್ರತಿಭಟನೆ ನಡೆಸಿದರು. ನಾಳೆ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ

Ad Widget . Ad Widget .

ಕೋಡಿಕಲ್ ನಾಗಬನದಲ್ಲಿನ 13 ನಾಗಕಲ್ಲಿನಲ್ಲಿ ಒಂದು ಬಿಂಬವನ್ನು ಕಿಡಿಗೇಡಿಗಳು ಎಸೆದು ಅಪವಿತ್ರಗೊಳಿಸಿದ್ದರು. ಘಟನೆ ನಡೆದು ಕೆಲವು ದಿನಗಳು ಕಳೆದರೂ ಕೂಡ ಇಲ್ಲಿಯವರೆಗೆ ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸ್ ಇಲಾಖೆ ಸಫಲವಾಗಿಲ್ಲ. ಈ ಹಿನ್ನಲೆ ಇಂದು ವಿಎಚ್ ಪಿ ಹಾಗೂ ಸ್ಥಳೀಯ ನಾಗರೀಕರು ಕೋಡಿಕಲ್ ನಾಗಬನದ ಸಮೀಪದಲ್ಲೇ ಪ್ರತಿಭಟನೆ ನಡೆಸಿದರು.

ಇಷ್ಟು ದಿನ ಸಂದರೂ ಇನ್ನೂ ಪೊಲೀಸರು ಆರೋಪಿಗಳನ್ನು ಬಂಧಿಸಿಲ್ಲ. ಆರೋಪಿಗಳನ್ನು ಬಂಧಿಸಲು ವಿಳಂಬ ಏಕೆ ಎಂದು ಸ್ಥಳಕ್ಕಾಗಮಿಸಿದ ನಗರ ಪೊಲೀಸ್ ಕಮಿಷನರ್‌ ಎನ್ ಶಶಿಕುಮಾರ್‌ ಅವರನ್ನು ಇಲ್ಲಿನ ಭಕ್ತ ಸಮುದಾಯದ ಮುಖಂಡರು ಪ್ರಶ್ನಿಸಿದರು. ಆರೋಪಿಗಳನ್ನು ಬಂಧಿಸುವುದಾಗಿ ಹೇಳಿಕೆ ನೀಡಬೇಕೆಂದು ವಿಶ್ವಹಿಂದು ಪರಿಷತ್‌ ಮುಖಂಡ ಶರಣ್ ಪಂಪ್ವಲ್‌ ಅವರು ಪೊಲೀಸ್ ಕಮಿಷನರ್‌ ಎನ್‌ ಶಶಿಕುಮಾರ್ ಅವರನ್ನು ಆಗ್ರಹಿಸಿದರು. ಅ

ಅಲ್ಲದೆ ಜಿಲ್ಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಹಿಂದೂ ದೇವಸ್ಥಾನ, ದೈವಸ್ಥಾನದ ಮೇಲೂ ಕಿಡಿಗೇಡಿಗಳ ಕೃತ್ಯ ಹೆಚ್ಚಾಗುತ್ತಿದೆ. ಅಪವಿತ್ರಗೊಳಿಸಲಾಗುತ್ತಿದೆ ಎಂದು ಶರಣ್‌ ಪಂಪ್ ವೆಲ್ ಆಕ್ರೋಶ ವ್ಯಕ್ತಪಡಿಸಿದರು. ನಾಳೆ ಸಂಜೆಯೊಳಗೆ ಆರೋಪಿಗಳನ್ನು ಬಂಧಿಸದಿದ್ದರೆ ಕೋಡಿಕಲ್ ಬಂದ್ ಮಾಡುವ ಎಚ್ಚರಿಕೆಯನ್ನು ಪ್ರತಿಭಟನಾಕಾರರು ನೀಡಿದ್ದಾರೆ. ಇನ್ನು ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್ ಭೇಟಿ ನೀಡಿ ಆರೋಪಿಗಳನ್ನು ಶೀಘ್ರ ಬಂಧಿಸುವ ಭರವಸೆ ನೀಡಿದ್ದಾರೆ.

Leave a Comment

Your email address will not be published. Required fields are marked *