Ad Widget .

ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ

ಉಳ್ಳಾಲ, ಕ್ಷುಲ್ಲಕ ವಿಚಾರ ವೊಂದಕ್ಕೆ ಸಂಬಂಧಿಸಿ ದಂತೆ ವ್ಯಕ್ತಿ ಯೊಬ್ಬನಿಗೆ ತಂಡವೊಂದು ಚೂರಿ ಯಿಂದ ಇರಿದು ಗಾಯಗೊಳಿಸಿದ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಅಜ್ಜಿನಡ್ಕ ಎಂಬಲ್ಲಿ ಗುರುವಾರ ತಡರಾತ್ರಿ ನಡೆದಿದೆ.
ಚೂರಿ ಇರಿತಕ್ಕೊಳಗಾದ ವ್ಯಕ್ತಿಯನ್ನು ಅಜ್ಜಿ ನಡ್ಕ ನಿವಾಸಿ ಇಕ್ಬಾಲ್ (32)ಎಂದು ಗುರುತಿಸಲಾಗಿದೆ.
ಅವರು ಕೆಲಸ ಮುಗಿಸಿ ಮನೆಗೆ ತನ್ನ ಸ್ಕೂಟರ್ ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ತಡೆದು ನಿಲ್ಲಿಸಿ ಚೂರಿ ಯಿಂದ ಇರಿಯಲಾಗಿದೆ . ಹಳೇ ದ್ವೇಷದಿಂದ ಆರೋಪಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.ಗಾಯಗೊಂಡ ಇಕ್ಬಾಲ್ ಅವರನ್ನು ತೊಕ್ಕೋಟ್ಟು ವಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇಕ್ಬಾಲ್ ನೀಡಿದ ದೂರಿನ ಮೇರೆಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Ad Widget . Ad Widget .

ಆರೋಪಿಗಳ ಬಂಧನಕ್ಕೆ ಎಸ್ ಡಿಪಿಐ ಒತ್ತಾಯ
ಅಜ್ಜಿನಡ್ಕದಲ್ಲಿ ಎಸ್ ಡಿಪಿಐ ಕಾರ್ಯಕರ್ತ ಇಕ್ಬಾಲ್ ಎಂಬವರ ಮೇಲೆ ದಾಳಿ ನಡೆಸಿರುವುದನ್ನು ಎಸ್ ಡಿಪಿಐ ಖಂಡಿಸಿದೆ.
ಘಟನೆಯನ್ನು ಖಂಡಿಸಿರುವ ಎಸ್ ಡಿಪಿಐ ಮಂಗಳೂರು ವಿಧಾನಸಭಾ ಕ್ಷೇತ್ರ ಸಮಿತಿಯ ಕಾರ್ಯದರ್ಶಿ ಝಾಹಿದ್ ಮಲಾರ್ ಕೂಡಲೇ ಕೊಲೆ ಯತ್ನ ಪ್ರಕರಣದ ಎಲ್ಲಾ ಆರೋಪಿಗಳನ್ನು ಬಂಧಿಸಬೇಕು ಎಂದು ಒತ್ತಾಯಿಸಿದ್ದಾರೆ

Ad Widget . Ad Widget .

Leave a Comment

Your email address will not be published. Required fields are marked *