Ad Widget .

ಆತ್ಮಹತ್ಯೆ ಮಾಡಿಕೊಂಡ ಎರಡು ತಿಂಗಳ ಗರ್ಭಿಣಿ| ಸಾವಿಗೆ ಕಾರಣನಾದವನ ಹೆಸರು ಬರೆದಿದ್ದೆಲ್ಲಿ ಗೊತ್ತಾ?

Ad Widget . Ad Widget .

ಕೋಲ್ಕತ್ತಾ: ಎರಡು ತಿಂಗಳ ಗರ್ಭಿಣಿಯಾಗಿದ್ದ 20 ವರ್ಷದ ಮಹಿಳೆಯೊಬ್ಬರು ಕಿರುಕುಳಕ್ಕೆ ಒಳಗಾಗಿ ಟಾಲಿಗಂಜ್ ರಸ್ತೆಯ ತನ್ನ ನಿವಾಸದಲ್ಲಿ ಗುರುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ತನ್ನ ಅತ್ತೆಯೇ ಕಾರಣ ಎಂದು ಬರೆದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೃತರನ್ನು ಪೂಜಾ ಚಂದಾ ಎನ್ನಲಾಗಿದ್ದು ತನ್ನ ಸಾವಿಗೆ ತನ್ನ ಅತ್ತೆ ಶೀಲಾ ಕಾರಣ ಎಂದು ಆರೋಪಿಸಿ ತನ್ನ ಎಡ ಅಂಗೈಯಲ್ಲಿ ಆತ್ಮಹತ್ಯೆ ಪತ್ರವನ್ನು ಬರೆದುಕೊಂಡಿದ್ದಾರೆ.

Ad Widget . Ad Widget .

ಟೋಲಿಗಂಜ್ ಪ್ರದೇಶದಲ್ಲಿ ಮೊಬೈಲ್ ಅಂಗಡಿ ಹೊಂದಿರುವ ಸಂಜೋಯ್ ಚಂದ್ರ ಅವರನ್ನು ಕೇವಲ ಒಂದು ವರ್ಷದ ಹಿಂದೆ ಪೂಜಾ ವಿವಾಹವಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಗುರುವಾರ ರಾತ್ರಿ 7.50ರ ಸುಮಾರಿಗೆ ಪೂಜಾ ತನ್ನ ಮಲಗುವ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ .
“ಸಾಮಾನ್ಯವಾಗಿ ಸತ್ತವರು ಕಾಗದದ ಮೇಲೆ ಅಥವಾ ನೋಟ್‌ಬುಕ್‌ಗಳು, ಗೋಡೆಗಳು ಅಥವಾ ಕನ್ನಡಿಗಳಂತಹ ಸುಲಭವಾಗಿ ಸಿಗುವ ವಸ್ತುಗಳ ಮೇಲೆ ಆತ್ಮಹತ್ಯೆಗೆ ಕಾರಣಗಳನ್ನು ಬರೆಯುತ್ತಾರೆ. ಮೃತರ ದೇಹದ ಮೇಲೆ ಬರಹಗಳು ಕಂಡುಬಂದರೂ, ಅಂಗೈಯಲ್ಲಿ ಈ ರೀತಿಯಲ್ಲಿ ಬರೆದಿರುವ ಪ್ರಕರಣ ವಿಧಿವಿಜ್ಞಾನ ಸಾಹಿತ್ಯದಲ್ಲಿ ವರದಿಯಾಗಿಲ್ಲ ಎಂದು ವಿಧಿವಿಜ್ಞಾನ ತಜ್ಞರು ಹೇಳಿದ್ದಾರೆ. ಸಂಜೋಯ್ ಮತ್ತು ಶೀಲಾ ಎನ್ನುವವರನ್ನು ಈಗಾಗಲೇ ಬಂಧಿಸಿದ್ದು ಬಂಧಿತರು ಹೆಚ್ಚಿನ ವರದಕ್ಷಿಣೆಗಾಗಿ ಮೃತ ಮಹಿಳೆಯ ಮೇಲೆ ಒತ್ತಡ ಹೇರುತ್ತಿದ್ದರು ಎಂಬುದಕ್ಕೆ ಪೊಲೀಸರ ಬಳಿ ಸಾಕ್ಷ್ಯವಿದೆ ಎಂದು ವರದಿಯಾಗಿದೆ.
“ಸಂಜೋಯ್ ಮತ್ತು ಶೀಲಾ ವಿರುದ್ಧ ಐಪಿಸಿ ಸೆಕ್ಷನ್ 304 ಬಿ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದು ಡಿಸಿ ಆಕಾಶ್ ಮಘರಿಯಾ ಹೇಳಿದ್ದಾರೆ.

Leave a Comment

Your email address will not be published. Required fields are marked *