ಮಂಗಳೂರು: ನಿಲ್ಲಿಸಿದ ಕಾರಿನೊಳಗೆ ಶವ ಪತ್ತೆ

ಮಂಗಳೂರು: ನಗರದ ಕಂಕನಾಡಿ ಬಳಿ ನಿಲ್ಲಿಸಿದ ಕಾರಿನೊಳಗೆ ವ್ಯಕ್ತಿಯೊಬ್ಬರ ಮೃತದೇಹ ನವೆಂಬರ್ 12ರ ಶುಕ್ರವಾರ ಪತ್ತೆಯಾಗಿದೆ.

Ad Widget ... ..

ಪೊಲೀಸರ ಮಾಹಿತಿ ಪ್ರಕಾರ, ಮೃತ ವ್ಯಕ್ತಿಯನ್ನು ಪ್ರಶಾಂತ್ ಕೊಟ್ಟಾರಿ(44) ಎಂದು ಗುರುತಿಸಲಾಗಿದೆ. ಮೃತರು ಬರ್ಕೆ ಠಾಣೆ ವ್ಯಾಪ್ತಿಯ ಮಣ್ಣಗುಡ್ಡೆಯಲ್ಲಿ ವಾಸವಿದ್ದರು ಎಂದು ತಿಳಿದು ಬಂದಿದೆ. ಸಾವಿಗೆ ಕಾರಣ ಇನ್ನೂ ಖಚಿತವಾಗಿಲ್ಲ

Ad Widget

ಗುರುವಾರ ರಾತ್ರಿಯಿಂದಲೇ ಕಾರು ಅದೇ ಸ್ಥಳದಲ್ಲಿ ಪಾರ್ಕಿಂಗ್ ಮಾಡಲಾಗಿತ್ತು ಎಂದು ಸಾರ್ವಜನಿಕರು ತಿಳಿಸಿದ್ದು ,ಶುಕ್ರವಾರ ಮಧ್ಯಾಹ್ನದವರೆಗೆ ಕಾರು ಅದೇ ಸ್ಥಳದಲ್ಲಿ ನಿಂತಿರುವುದು ಅನುಮಾನ ಬಂದು ಪರಿಶೀಲಿಸಿದಾಗ ಕಾರಿನೊಳಗೆ ವ್ಯಕ್ತಿಯೊಬ್ಬರು ಬಿದ್ದಿರುವುದು ಕಂಡುಬಂದಿತ್ತು.

ಪೊಲೀಸರು ಸ್ಥಳಕ್ಕೆ ಅಗಮಿಸಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *