Ad Widget .

ಕ್ರಿಕಟಿಗ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಐಪಿಎಲ್ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾರಿಂದ ಅತ್ಯಾಚಾರ| ಗಂಭೀರ ಆರೋಪ ಮಾಡಿದ ಗ್ಯಾಂಗ್ ಸ್ಟರ್ ರಿಯಾಝ್ ಭಾಟಿ‌ ಪತ್ನಿ|

Ad Widget . Ad Widget .

Ad Widget . Ad Widget .

ಮುಂಬೈ: ಕ್ರಿಕೆಟಿಗರಾದ ಹಾರ್ದಿಕ್ ಪಾಂಡ್ಯ, ಮುನಾಫ್ ಪಟೇಲ್, ಐಪಿಎಲ್ ನ ಮಾಜಿ ಅಧ್ಯಕ್ಷ ರಾಜೀವ್ ಶುಕ್ಲಾ ಸೇರಿದಂತೆ ಹಲವು ಗಣ್ಯರ ವಿರುದ್ಧ ಗ್ಯಾಂಗ್ ಸ್ಟರ್ ರಿಯಾಜ್ ಭಾಟಿ ಪತ್ನಿ ಅತ್ಯಾಚಾರ ಆರೋಪ ಹೊರಿಸಿದ್ದಾರೆ.

ತಮ್ಮ ಉದ್ಯಮ ಪಾಲುದಾರರು ಹಾಗೂ ಇತರ ಗಣ್ಯ ವ್ಯಕ್ತಿಗಳೊಂದಿಗೆ ಲೈಂಗಿಕ ಸಂಬಂಧ ಹೊಂದಲು ತನ್ನ ಪತಿ ತನ್ನನ್ನು ಒತ್ತಾಯಿಸಿದ್ದರು ಎಂದು ದಾವೂದ್ ಇಬ್ರಾಹಿಂ ಆಪ್ತ ಗ್ಯಾಂಗ್ ಸ್ಟರ್ ರಿಯಾಝ್ ಭಾಟಿ ಪತ್ನಿ ರೆಹನುಮಾ ಭಾಟಿ ಆರೋಪಿಸಿದ್ದಾರೆ ಎಂದು ವರದಿಯಾಗಿದೆ.

ಮುಂಬೈನ ಸಾಂತಾಕ್ರೂಜ್ ಪೊಲೀಸರಿಗೆ ಸಲ್ಲಿಸಿರುವ ಅರ್ಜಿಯಲ್ಲಿ ಆಕೆ ಕ್ರಿಕೆಟಿಗರಾದ ಮುನಾಫ್ ಪಟೇಲ್ ಹಾಗೂ ಹಾರ್ದಿಕ್ ಪಾಂಡ್ಯ, ರಾಜೀವ್ ಶುಕ್ಲಾ ಹಾಗೂ ರಾಜಕಾರಣಿ ಪೃಥ್ವಿರಾಜ್ ಕೊಠಾರಿ ಹೆಸರುಗಳನ್ನು ಉಲ್ಲೇಖಿಸಿದ್ದಾರೆ.

ರೆಹನುಮಾ 24 ಸೆಪ್ಟೆಂಬರ್ 2021 ರ ತನ್ನ ಅರ್ಜಿಯಲ್ಲಿ ಪಾಂಡ್ಯ, ಪಟೇಲ್, ಶುಕ್ಲಾ ಮತ್ತು ಕೊಠಾರಿ ಅವರ ಯಾವುದೇ ವಿಳಾಸಗಳನ್ನು ನೀಡಿಲ್ಲ ಅಥವಾ ಘಟನೆಗಳು ನಡೆದ ನಿರ್ದಿಷ್ಟ ದಿನಾಂಕಗಳು ಅಥವಾ ಸ್ಥಳಗಳನ್ನು ಉಲ್ಲೇಖಿಸಿಲ್ಲ ಎಂದು ವರದಿ ತಿಳಿಸಿದೆ.

“ನಾನು ಎಫ್‌ಐಆರ್ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಲು ಪ್ರಯತ್ನಿಸುತ್ತಿದ್ದೇನೆ, ಆದರೆ ಅದು ಸಾಧ್ಯವಾಗಿಲ್ಲ. ನನ್ನ ಅರ್ಜಿಯನ್ನು ಸೆಪ್ಟೆಂಬರ್‌ನಲ್ಲಿ ಸಲ್ಲಿಸಲಾಗಿದೆ. ನಾನು ವಿವಿಧ ಹಂತದ ಪೊಲೀಸ್ ಅಧಿಕಾರಿಗಳನ್ನು ಹಲವು ಬಾರಿ ಭೇಟಿ ಮಾಡಿದ್ದೇನೆ. ಅವರು ಹಣಕ್ಕೆ ಭೇಟಿ ಇಟ್ಟಿದ್ದರು. ಆದರೆ ನಾನೇಕೆ ಭ್ರಷ್ಟಾಚಾರವನ್ನು ಮಾಡಲಿ? ನಾನು ಸರಿಯಾಗಿದ್ದೇನೆ. ಅವರೇ ಅಪರಾಧಿಗಳು” ಎಂದು ರೆಹನುಮಾ ಹೇಳಿಕೆಯನ್ನು ದಿ ಪ್ರಿಂಟ್ ವರದಿ ಮಾಡಿದೆ.

ರಿಯಾಜ್ ತನ್ನನ್ನು ಅಪರಿಚಿತರೊಂದಿಗೆ ಲೈಂಗಿಕ ಕ್ರಿಯೆ ನಡೆಸುವಂತೆ ಬಲವಂತ ಮಾಡುತ್ತಿದ್ದು, ತನ್ನನ್ನು ವೇಶ್ಯೆಯಾಗಿ ಬಳಸಿಕೊಂಡಿದ್ದಾನೆ ಎಂದು ರೆಹನುಮಾ ದೂರಿನಲ್ಲಿ ತಿಳಿಸಿದ್ದಾರೆ. ತನ್ನೊಂದಿಗೆ ಬಲವಂತವಾಗಿ ನಡೆಸಿ ಕೊಂಡವರಲ್ಲಿ ಪಾಂಡ್ಯ ಒಬ್ಬನೆಂದು ಹೇಳುದ್ದಾರೆ. ಕೃತ್ಯ ನಡೆದ ಸಮಯದಲ್ಲಿ ಪಾಂಡ್ಯ ಮದ್ಯಪಾನ ಮಾಡಿದ್ದನ್ನು ರೆಹನುಮಾ ಉಲ್ಲೇಖಿಸಿದ್ದಾರೆ.

Leave a Comment

Your email address will not be published. Required fields are marked *