Ad Widget .

60 ರೂಪಾಯಿಗೆ ಕೊಡಬಹುದಾದ ಪೆಟ್ರೋಲ್ ಗೆ 100 ರೂ.ಗಿಂತಲೂ ಅಧಿಕ| ಕಚ್ಚಾ ತೈಲ ಬೆಲೆಯಲ್ಲಿ ಗರಿಷ್ಠ ಇಳಿಕೆ| ಆದರೂ ಈ ಬೆಲೆ ಏರಿಕೆ ಯಾಕೆ?

Ad Widget . Ad Widget .

ಡಿಜಿಟಲ್ ಡೆಸ್ಕ್: ಜಾಗತಿಕ ಕಚ್ಚಾ ತೈಲ ದರವು ಮೂರು ವರ್ಷದಲ್ಲಿ ಗರಿಷ್ಠ ಮಟ್ಟಕ್ಕೆ ಇಳಿಕೆ ಕಂಡಿದೆ. ಕೆಲವು ದಿನಗಳ ಹಿಂದೆ ಬ್ಯಾರೆಲ್‌ಗೆ 85 ಯುಎಸ್‌ಡಿ ಇತ್ತು. ಆದರೆ ಈಗ ಜಾಗತಿಕ ಕಚ್ಚಾ ತೈಲ ಬೆಲೆಯು ಬ್ಯಾರೆಲ್‌ಗೆ 83 ಡಾಲರ್‌ಗೆ ಕುಸಿದಿದ್ದು ಇದು ಮೂರು ವರ್ಷದಲ್ಲಿ ಗರಿಷ್ಠ ಮಟ್ಟದ ಇಳಿಕೆಯಾಗಿದೆ.

Ad Widget . Ad Widget .

ದೇಶದಲ್ಲಿ ನಿರಂತರವಾಗಿ ಪೆಟ್ರೋಲ್‌ ಹಾಗೂ ಡೀಸೆಲ್‌ ದರವು ಏರುತ್ತಿದ್ದವು. ಕೇವಲ 45 ದಿನಗಳಲ್ಲಿ 30 ಬಾರಿ ಏರಿಕೆಯಾಗಿತ್ತು. ಕೇಂದ್ರ ಸರ್ಕಾರವು ಇತ್ತೀಚೆಗೆ ಪೆಟ್ರೋಲ್‌ ಹಾಗೂ ಡಿಸೇಲ್‌ ಮೇಲಿನ ಅಬಕಾರಿ ಸುಂಕವನ್ನು ಕಡಿತ ಮಾಡಿದೆ. ಕೇಂದ್ರ ಸರ್ಕಾರವು ಪೆಟ್ರೋಲ್ 5 ರೂ, ಹಾಗೂ ಡೀಸೆಲ್ ಮೇಲೆ 10 ರೂಪಾಯಿ ಅಬಕಾರಿ ಸುಂಕವನ್ನು ಇಳಿಕೆ ಮಾಡಿ ಆದೇಶ ಹೊರಡಿಸಿದೆ. ಸದ್ಯ 5 ದಿವಸಗಳಿಂದ ಬೆಲೆಯು ಸ್ಥಿರವಾಗಿದೆ.

ಸರ್ಕಾರ ಮಾರ್ಚ್ ಹಾಗೂ ಮೇ ತಿಂಗಳಿನಲ್ಲಿ ಪೆಟ್ರೋಲ್‌ ಹಾಗೂ ಡಿಸೇಲ್ ಮೇಲಿನ ಅಬಕಾರಿ ಸುಂಕವನ್ನು ಪರಿಷ್ಕರಣೆ ಮಾಡಿದ್ದು ಈ ಹಿನ್ನೆಲೆಯಲ್ಲಿ ಪೆಟ್ರೋಲ್‌ ಹಾಗೂ ಡೀಸೆಲ್‌ ಮೇಲಿನ ಅಬಕಾರಿ ಸುಂಕವು ತೀವ್ರ ಪ್ರಮಾಣದಲ್ಲಿ ಏರಿಕೆ ಆಗಿತ್ತು. ಕೇಂದ್ರ ಸರ್ಕಾರವು ಅಬಕಾರಿ ಸುಂಕವನ್ನು ಕಡಿತ ಮಾಡುವ ಮುನ್ನ 45 ದಿನಗಳಲ್ಲಿ 30 ಬಾರಿ ಡಿಸೇಲ್ ‌ದರವು ಏರಿಕೆಯನ್ನು ಮಾಡಿದ್ದರೆ ಪೆಟ್ರೋಲ್‌ ಬೆಲೆಯನ್ನು 41 ದಿನಗಳಲ್ಲಿ 28 ಬಾರಿ ಏರಿಕೆ ಮಾಡಿತ್ತು. ಇದೀಗ ದರ ಕಡಿಮೆಯಾದ ಬಳಿಕ ದೆಹಲಿಯಲ್ಲಿ ಪೆಟ್ರೋಲ್‌ ದರವು ಲೀಟರ್‌ಗೆ 103.97 ರೂಪಾಯಿ ಹಾಗೂ ಡೀಸೆಲ್‌ ಲೀಟರ್‌ ಗೆ 86.67 ರೂಪಾಯಿ ಆಗಿದೆ. ಮುಂಬೈನಲ್ಲಿ ಪೆಟ್ರೋಲ್‌ 109.98 ರೂ. ಆಗಿದ್ದು, ಡೀಸೆಲ್‌ ಬೆಲೆಯು ಲೀಟರ್‌ಗೆ 94.14 ಇದೆ. ಕೋಲ್ಕತ್ತಾದಲ್ಲಿ ಪೆಟ್ರೋಲ್‌ ಬೆಲೆಯು 104.67 ರೂ. ಮತ್ತು ಡಿಸೇಲ್‌ ಬೆಲೆ 89.79 ರೂ. ಆಗಿದೆ.

ಅಂತಾರಾಷ್ಟ್ರಿಯ ಕಚ್ಚಾ ತೈಲಬೆಲೆ 105 ಡಾಲರ್ ನಿಂದ 135 ಡಾಲರ್ ತನಕ ಇದ್ದಾಗ ಯುಪಿಎ ಸರಕಾರದ ಅವಧಿಗಳಲ್ಲಿ 70 ರೂ. ಆಸುಪಾಸಿನಲ್ಲಿ ಪೆಟ್ರೋಲ್ ಮತ್ತು 55 ರೂ. ಆಸುಪಾಸಲ್ಲಿ ಡೀಸೆಲ್ ದೊರೆಯುತ್ತಿತ್ತು. ಹೀಗೆ ಬೆಲೆ ಏರಿದರೆ ಏನು ಮಾಡೋದು, ಜನರು ಸಾಯಬೇಕಾ, ಕರುಣಾಹೀನ ಸರಕಾರ ಎಂದು ಹೇಳುತ್ತಿದ್ದ ಮೋದಿಯವರು ವಿಪರೀತವಾಗಿ ಇಂಧನ ಮೇಲಿನ ತೆರಿಗೆಗಳನ್ನು ಹೆಚ್ಚಿಸುತ್ತಾ ಹೋದ ಪರಿಣಾಮ ಪ್ರಸ್ತುತ ದರವಾಗಿದೆ. ಇಂಧನ ದರ ಎಂದರೆ ಅದು‌ ಹಾಲು ಕರೆಯುವ ಹಸು‌ ಅಂತ ಗೊತ್ತೇ ಇದೆ. ಆದ್ದರಿಂದಲೇ ತೈಲದರಗಳನ್ನು ಇಳಿಸದೇ ಈಗಲೂ ರಕ್ತ‌ಬರುವವರೆಗೆ ಕರೆಯುತ್ತಿದೆ. ಇನ್ನು ತಡೆಯಲು ಸಾಧ್ಯವಿಲ್ಲ ಅಂದಾಗ‌ ಕೊಂಚ ಬೆಲೆ ಇಳಿಸಿ ಶಹಬ್ಬಾಸ್ ಗಿಟ್ಟಿಸಿತ್ತು.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ 60 ಡಾಲರ್ಗಿಂತಲೂ ಬೆಲೆ ಕುಸಿದಿತ್ತು. ಈಗ 83 ಡಾಲರ್ ಇದೆ. ಹಿಂದಿನ ಯುಪಿಎ ಸರಕಾರಕ್ಕೆ ಹೋಲಿಸಿದರೆ ಈಗಲೂ ಅತಿಯಾದ ತೆರಿಗೆ ಇಂಧನ ಮೇಲೆ ಇದ್ದು 60 ರೂಪಾಯಿಗೆ ಸಿಗಬೇಕಾದ ಪೆಟ್ರೋಲ್ ಶತಕ ದಾಟಿಯೇ ಇದೆ. ಇನ್ನು ಈ ಬೆಲೆ ಇಳಿಸಲು ಇನ್ನೊಂದು ಚುನಾವಣೆ ಬರಬೇಕೇನೋ.! ಅದಲ್ಲದಿದ್ದರೆ ಮತ್ತೆ ಬೆಲೆ ಏರಿಕೆ ಬಿಸಿ ಗ್ಯಾರಂಟಿ.

Leave a Comment

Your email address will not be published. Required fields are marked *