Ad Widget .

ಅತ್ಯಾಚಾರಕ್ಕೆ ಒಳಗಾದ ಬಿಗ್ ಬಾಸ್‌ ಸ್ಪರ್ಧಿ..?| ಪತಿಯ ಮೇಲೆ ದೂರು ನೀಡಿದ ಸಂತ್ರಸ್ತೆ|

Ad Widget . Ad Widget .

ಬೆಂಗಳೂರು: ತನ್ನ ಪತಿಯೇ ವಿವಾಹಪೂರ್ವದಲ್ಲಿ ಅತ್ಯಾಚಾರ ಮಾಡಿದ್ದಾನೆ ಎಂದು ಕನ್ನಡದ ಬಿಗ್ ಬಾಸ್‌ ಸ್ಪರ್ಧಿ ಹಾಗೂ ನಟಿ ಆರೋಪ ಮಾಡಿದ್ದಾರೆ. ಸುಮಾರು ಒಂಬತ್ತು ಪುಟಗಳ ಸುದೀರ್ಘ ದೂರು ‌ನೀಡಿರುವ ನಟಿ, ಆರೋಪಿ ತನಗೆ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾಗಿದ್ದು, ಗ್ರಾಮೀಣ‌ ಪ್ರತಿಭೆ ಬೆಳೆಯಬೇಕು ಎಂದು ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡು ಎಂದು ಕರೆದಿದ್ದ. ಕೊರೊನಾ ಹಿನ್ನಲೆಯಲ್ಲಿ ಹೊರಗಡೆ ಸಿಗಲಾರದೆ ನನ್ನ ಮನೆಗೆ ಬಂದಿದ್ದ ಆರೋಪಿ ಏಕಾಏಕಿ ನನ್ನನ್ನು ಬಲವಂತವಾಗಿ ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾನೆ. ಈ ವೇಳೆ ನಾನು ಅಳುತ್ತ ಕುಳಿತಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದು, ಹೀಗೆ ಹಲವು ಬಾರಿ ಮನೆಗೆ ಬಂದಾಗ ನನ್ನನ್ನು ಯಾಮಾರಿಸಿ ಅತ್ಯಾಚಾರ ಮಾಡಿದ್ದಾನೆ. ನಂತರ ನನಗೆ ‌ಆರೋಗ್ಯದಲ್ಲಿ ಸಮಸ್ಯೆ ಕಂಡು ಬಂದು ವೈದ್ಯರ ‌ಸಂಪರ್ಕ ಮಾಡಿ ಚಿಕಿತ್ಸೆ ಪಡೆದಿದ್ದೆ. ಕೆಲ ತಿಂಗಳ ಬಳಿಕ ಮದುವೆಯಾಗುವ ವಿಚಾರ ಮಾತನಾಡಿದ್ದು, ಮೊದಲು ಮದುವೆ ಆಗೋಣ ಎನ್ನುತ್ತಿದ್ದವನು ನಿಧಾನವಾಗಿ ದೂರ ಮಾಡಲಾರಂಭಿಸಿದ. ಸೋಶಿಯಲ್​ ಮೀಡಿಯಾಗಳಲ್ಲಿ ಎಲ್ಲಾ ಕಡೆ ನನ್ನನ್ನು ಬ್ಲಾಕ್ ಮಾಡಿದ್ದ. ಇದೇ ವಿಚಾರವಾಗಿ ನಾನು ಗಲಾಟೆ ಮಾಡಿ ಯಾಕೆ ಮೋಸ ಮಾಡುತ್ತಿದ್ದೀಯಾ ಎಂದಾಗ ಮದುವೆಯಾಗುವ ವಿಚಾರವಾಗಿ ನಿರಾಕರಣೆ ಮಾಡಿದ್ದ.

Ad Widget . Ad Widget .

ಇದೇ ವಿಚಾರವಾಗಿ ಚಂದ್ರಲೇಔಟ್ ಬಳಿಯ ದೇವಸ್ಥಾನದಲ್ಲಿ ಮಾತುಕತೆ ನಡೆಸಿ ಗೆಳೆಯರ ಸಮ್ಮುಖದಲ್ಲಿ ತಾಳಿ ಕಟ್ಟಿದ್ದ. ಇದಾದ ಬಳಿಕ ಮನೆಗೆ ಹೋದಾಗ ಮನೆಯವರ ಮುಂದೆ ನಾನು ಮದುವೆ ಆಗಿಲ್ಲ ಎಂದಿದ್ದ. ಇದೇ ವಿಚಾರವಾಗಿ ಗಲಾಟೆಗಳು ನಡೆದು ಕೋಲಾರದಲ್ಲೂ ದೂರು ದಾಖಲಿಸಿದ್ದೆ.

ಅವರ ಮನೆಗೆ ಹೋದ ಮೊದಲ ದಿನವೇ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದರು. ನನ್ನ ಜಾತಿಯನ್ನು ನಿಂದಿಸಿ, ವಾಪಸ್ ಹೋಗುವಂತೆ ಅವಮಾನ ಮಾಡಿ ಕೋಟಿ ಕೋಟಿ ವರದಕ್ಷಿಣೆ ತರುವಂತೆ ಹೇಳಿದರು. ನೀನು ವೇಶ್ಯೆ ಎಂದು ನನ್ನ ಗೌರವಕ್ಕೆ ಧಕ್ಕೆ ತಂದಿದ್ದಾರೆ. ಅವರ ತಂದೆ ನನ್ನನ್ನು ಹತ್ಯೆ ಮಾಡಿ ರೈಲ್ವೆ ಹಳಿಯ ಮೇಲೆ ಹಾಕುತ್ತೇನೆ ಎಂದು ಕೊಲೆ ಬೆದರಿಕೆ ಹಾಕಿದ್ದಾರೆ. ಈ‌ ಹಿನ್ನಲೆಯಲ್ಲಿ ಆರೋಪಿಯ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಸಂತ್ರಸ್ಥೆ ಪೊಲೀಸರ ಬಳಿ ಮನವಿ ಮಾಡಿದ್ದಾರೆ.

ಸದ್ಯ ಬಸವನಗುಡಿ ಮಹಿಳಾ‌ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ದೂರು ಸ್ವೀಕರಿಸಿರುವ ಪೊಲೀಸರು ಎಫ್​ಐಆರ್​ ದಾಖಲು ಮಾಡಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಸಂತ್ರಸ್ಥೆ ಹಾಗೂ ಇಬ್ಬರು ಗೆಳೆಯರ ಹೇಳಿಕೆ ಪಡೆದಿರುವ ಪೊಲೀಸರು, ಸಂತ್ರಸ್ಥೆಗೆ ನೀಡಿರುವ‌ ಚಿಕಿತ್ಸೆ ಸಂಬಂಧ‌ ಮಾಹಿತಿ ಕೋರಿ ವೈದ್ಯರಿಗೆ ನೋಟಿಸ್​ ನೀಡಿದ್ದಾರೆ ಎನ್ನಲಾಗಿದೆ.

Leave a Comment

Your email address will not be published. Required fields are marked *