Ad Widget .

ಶಾಲಾ‌ ಶಿಕ್ಷಕನ ಮರ್ಮಾಂಗ ಕತ್ತರಿಸಿ ಭೀಕರ ಹತ್ಯೆ| ಬರದ‌ ನಾಡಲ್ಲೊಂದು ಘೋರ ಕೃತ್ಯ|

Ad Widget . Ad Widget .

ಬೀದರ್: ಪ್ರಾಥಮಿಕ ಶಾಲೆಯೊಂದರ ಶಿಕ್ಷಕನ ಮರ್ಮಾಂಗವನ್ನು ಕತ್ತರಿಸಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೀದರ್ ನ ಔರಾದ್ ಪಟ್ಟಣದಲ್ಲಿ ನಡೆದಿದೆ.

Ad Widget . Ad Widget .

ಬೀದರ್ ಜಿಲ್ಲೆಯ ಔರಾದ್ ನ ಲಿಡ್ಕರ್ ಕಾಲನಿ ನಿವಾಸಿ 46 ವರ್ಷ ವಯಸ್ಸಿನ ವಿಜಯ್ ಕುಮಾರ್ ಟೀಳೆಕರ್ ಹತ್ಯೆಗೀಡಾದ ಶಿಕ್ಷಕ. ಇವರು ಔರಾದ್ ನ ಕರಂಜಿ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿದ್ದರು.

ಘಟನಾ ಸ್ಥಳಕ್ಕೆ ಎಸ್ ಪಿ ಡಿ.ಎಲ್.ನಾಗರಾಜ್, ಎಎಸ್ ಪಿ ಪೃಥ್ವಿಕುಮಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹತ್ಯೆ ಮಾಡಿದ್ದು ಯಾರು? ಹತ್ಯೆಗೆ ಕಾರಣ ಏನು ಎನ್ನುವುದು ಪೊಲೀಸ್ ತನಿಖೆಯಿಂದಲೇ ತಿಳಿದು ಬರಬೇಕಿದೆ.

Leave a Comment

Your email address will not be published. Required fields are marked *