Ad Widget .

‘ದೇಹ ಕೊಟ್ಟು ಉಪಕಾರ ಮಾಡಬಲ್ಲೆ, ನಾನೊಬ್ಬ ಮುಸ್ಲಿಂ’ ಎಂದು ಮಹಿಳೆ ಕೈಗೆ ಮಗು ಕೊಟ್ಟು ಪರಾರಿಯಾದ ಬಳ್ಳಾರಿ ಸಬ್ ರಿಜಿಸ್ಟ್ರಾರ್

Ad Widget . Ad Widget .

ಬಳ್ಳಾರಿ: ತಾನೊಬ್ಬ ಮುಸ್ಲಿಂ, ಅವಿವಾಹಿತ ಎಂದು ಮುಸ್ಲಿಂ ಹೆಸರು ಹೇಳಿಕೊಂಡು ಮುಸ್ಲಿಂ ಯುವತಿಯನ್ನು ನಂಬಿಸಿ ದೈಹಿಕ ಸಂಪರ್ಕ ನಡೆಸಿ, ಮದುವೆಯನ್ನೂ ಆಗಿ ನಂತರ ಮಗುವಾದ ಮೇಲೆ ಬಳ್ಳಾರಿ ಸಬ್ ರಿಜಿಸ್ಟ್ರಾರ್ ಪರಾರಿಯಾಗಿರುವುದಾಗಿ ಯುವತಿ ದೂರಿದ್ದಾರೆ.

Ad Widget . Ad Widget .

ಮಗುವನ್ನು ಹಿಡಿದುಕೊಂಡು ತನಗೆ ನ್ಯಾಯ ಕೊಡಿಸಿ ಎಂದು ಯುವತಿ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

‘ಬಳ್ಳಾರಿ ಸಬ್ ರಿಸ್ಟ್ರಾರ್ ಉಮೇಶ್ ತಮ್ಮ ಹೆಸರನ್ನು ರೆಹಾನ್ ಅಹಮದ್ ಎಂದು ಹೇಳಿಕೊಂಡು ನನ್ನನ್ನು ನಂಬಿಸಿದರು. ತಾವು ಮೊದಲೇ ಮದುವೆಯಾಗಿರುವ ವಿಷಯ ಕೂಡ ಹೇಳಿರಲಿಲ್ಲ. ಅವರನ್ನು ನಾನು ನಂಬಿದೆ. ಅವರ ಪತ್ನಿ ಹಾಗೂ ಮಕ್ಕಳ ಜತೆ ನಾನು ನೋಡಿದ್ದೆ. ಆಗ ಆಕೆ ತನ್ನ ಅತ್ತಿಗೆ ಹಾಗೂ ಅವರ ಮಕ್ಕಳು ಎಂದು ಉಮೇಶ್‌ ಪರಿಚಯಿಸಿದ್ದರು’ ಎಂದು ಯುವತಿ ಆರೋಪಿಸಿದ್ದಾರೆ.

‘ನಾನು ಮೂಲತಃ ದೆಹಲಿಯವಳು. ಮೊದಲು ಪಬ್‌ನಲ್ಲಿ ಮಾಡೆಲ್‌ ಆಗಿದ್ದೆ. ಅಲ್ಲಿ ಉಮೇಶ್ ಪರಿಚಯವಾಗಿತ್ತು. ಅವರು ಒಂದು ಲಕ್ಷ ರೂಪಾಯಿ ಸಹಾಯ ಕೇಳಿದ್ದರು. ನಾನು ಕೊಟ್ಟಿದ್ದೆ. ಅದಕ್ಕೆ ಅವರು ಮುಸ್ಲಿಂ ಹೆಸರಿನಲ್ಲಿ ಪರಿಚಯ ಮಾಡಿಕೊಂಡಿದ್ದರು. ನಂತರ ನಿಮ್ಮ ಸಹಾಯಕ್ಕೆ ನನ್ನ ಬಳಿ ಕೊಡಲು ದೇಹ ಬಿಟ್ಟು ಬೇರೆ ಏನು ಇಲ್ಲ, ದೇಹ ಕೊಟ್ಟು ಉಪಕಾರ ಮಾಡಬಲ್ಲೆ ಎಂದಿದ್ದರು. ನಾನೂ ಅವರನ್ನು ನಂಬಿದೆ. ದೈಹಿಕ ಸಂಪರ್ಕ ಬೆಳೆಸಿದೆ. ನಾನು ಗರ್ಭಿಣಿ ಎಂದು ತಿಳಿದಾಗ, ಅವರಿಗೆ ವಿಷಯ ಹೇಳಿದೆ. ಆಗ ಲೈಂಗಿಕ ಕ್ರಿಯೆ ನಡೆಸಿದ ವೀಡಿಯೋಗಳನ್ನು ಯುಟ್ಯೂಬ್ ಹಾಕುವುದಾಗಿ ಬೆದರಿಸಿ ಹಣ ಸುಲಿಗೆ ಮಾಡಿದ್ದಾರೆ ಎಂದು ಯುವತಿ ಹೇಳಿದ್ದಾರೆ.

ಪತಿಗೆ ಮೊದಲೇ ಮದುವೆಯಾಗಿದ್ದು, ಮಕ್ಕಳಾಗಿರುವ ವಿಷಯ ನಂತರ ನನಗೆ ತಿಳಿಯಿತು. ನಾನು ಅವರ ಬಳಿ ಈ ವಿಷಯ ಕೇಳಿದಾಗ ಹತ್ತು‌ ಕೋಟಿ ವರದಕ್ಷಿಣೆ ಕೊಡು ಎಂದು ಬೆದರಿಕೆ ಹಾಕಿದರು ಎಂದಿರುವ ಯುವತಿ, ಬಳ್ಳಾರಿಯ ಮಹಿಳಾ ಠಾಣೆಯಲ್ಲಿ ಸಬ್ ರಿಜಿಸ್ಟ್ರಾರ್ ವಿರುದ್ಧ ದಾಖಲಿಸಿದ್ದಾರೆ. ಸದ್ಯ ಉಮೇಶ್ ತಲೆಮರೆಸಿಕೊಂಡಿದ್ದಾರೆ.

ಯುವತಿ ಹಾಗೂ ಅವರ ಕುಟುಂಬ ಸದಸ್ಯರಾದ ಇಸ್ಮಾಯಿಲ್, ಜರೀನಾ, ಮಹಮದ್ ತಲೀಬ್ ಸೇರಿ 33.5 ಲಕ್ಷ ಸುಲಿಗೆ ಮಾಡಿರುವುದಾಗಿ ಉಮೇಶ್ ಬಳ್ಳಾರಿಯ ಗಾಂಧಿನಗರ ಠಾಣೆಯಲ್ಲಿ ಪ್ರಕರಣ ಈ ಮೊದಲೇ ದೂರು ದಾಖಲಿಸಿದ್ದರು. ಆದ್ದರಿಂದ ಇದರ ಸತ್ಯಾಸತ್ಯತೆಯ ಬಗ್ಗೆ ಬಳ್ಳಾರಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Comment

Your email address will not be published. Required fields are marked *