Ad Widget .

ಭೀಕರ ಅಪಘಾತ| ಢಿಕ್ಕಿಯ ರಭಸಕ್ಕೆ ವಿದ್ಯುತ್ ತಂತಿಯಲ್ಲಿ ನೇತಾಡಿದ ಬೈಕ್ ಸವಾರ|

Ad Widget . Ad Widget .

ತಮಿಳುನಾಡು: ಇಲ್ಲಿನ ನೀಲಕೊಟ್ಟೈ ಬಳಿ ಭಾನುವಾರ ಬೈಕ್ ಮತ್ತು ಕಾರಿನ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಮಧುರೈನ ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಅಪಘಾತದ ತೀವ್ರತೆಗೆ ಚಿಮ್ಮಿದ ಒಬ್ಬಾತನ ಶವ ರಸ್ತೆ ಪಕ್ಕದ ವಿದ್ಯುತ್ ತಂತಿಯ ಮೇಲೆ ನೇತಾಡುತಿತ್ತು. ಮಧುರೈನ ಪೆರುಂಗುಡಿಯ ವಿ ಕಾಮರಾಜ್ (28) ಮತ್ತು ಆತನ ಸ್ನೇಹಿತ ಪಿ ಅಜಿತ್ ಕಣ್ಣನ್ (20) ಎಂದು ಗುರುತಿಸಲಾಗಿದೆ.

Ad Widget . Ad Widget .

ಇವರಿಬ್ಬರು ತಮ್ಮ ಕೆಲವು ಸ್ನೇಹಿತರೊಂದಿಗೆ ಕೊಡೈಕೆನಾಲ್‌ಗೆ ತೆರಳಿದ್ದರು ಎಂದು ಪೊಲೀಸರ ಪ್ರಾಥಮಿಕ ವಿಚಾರಣೆಯಿಂದ ತಿಳಿದುಬಂದಿದೆ. ಭಾನುವಾರ ಸಂಜೆ ಮಧುರೈಗೆ ಹಿಂತಿರುಗುತ್ತಿದ್ದಾಗ ಈ ಅವಘಡ ಸಂಭವಿಸಿದೆ. ಮಧುರೈನಿಂದ ವಾತಲಗುಂಡು ಮುಖ್ಯರಸ್ತೆಯ ನಿಲಕೊಟ್ಟೈ ಬಳಿಯ ಸಿಕ್ಕುವಾರಪಟ್ಟಿ ಎಂಬಲ್ಲಿ ಬೈಕ್‌ನಲ್ಲಿ ಇಬ್ಬರು ಪ್ರಯಾಣಿಸುತ್ತಿದ್ದ ಬೈಕ್‌ಗೆ ಕಾರು ಮುಖಾಮುಖಿ ಡಿಕ್ಕಿಯಾಗಿದೆ.

ತೀವ್ರತೆಗೆ ಇಬ್ಬರು ಮೇಲಕ್ಕೆ ಎಸೆಯಲ್ಪಟ್ಟಿದ್ದು, ಕಾಮರಾಜ್ ವಿದ್ಯುತ್ ಕಂಬದ ತಂತಿಯಲ್ಲಿ ನೇತಾಡುತ್ತಿದ್ದರು.

Leave a Comment

Your email address will not be published. Required fields are marked *