ಪುತ್ತೂರು: ಮೊಟ್ಟೆತ್ತಡ್ಕ ಎನ್ ಆರ್ ಸಿ ಸಿ ಬಳಿ ಇಂದು ಸಂಜೆ 6.30 ರ ಸುಮಾರಿಗೆ ಟಿಪ್ಪರ್ ಹಾಗೂ ದ್ವಿಚಕ್ರ ವಾಹನವು ಡಿಕ್ಕಿಯಾಗಿರುವುದು ವರದಿಯಾಗಿದೆ.

ಮುಂಡೂರು ಕಡೆಯಿಂದ ಪುತ್ತೂರು ಕಡೆಗೆ ಹೋಗುತ್ತಿದ್ದ ಟಿಪ್ಪರ್ ಹಾಗೂ ಪುತ್ತೂರು ಕಡೆಯಿಂದ ತನ್ನ ಕೆಲಸ ಮುಗಿಸಿ ಮನೆಯ ಕಡೆ ಹೋಗುತ್ತಿದ್ದ ದ್ವಿಚಕ್ರ ವಾಹನ ಸವಾರರಾದ ಕುರಿಯ ನಿವಾಸಿ ನಾರಾಯಣ ಹಾಗೂ ವಸಂತ ರವರಿಗೆ ಗಂಭೀರ ಗಾಯಗೊಂಡು ಮಂಗಳೂರಿನ ಎ.ಜೆ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದಿದೆ.