ಬೆಂಗಳೂರಿನ ಯುವಕ ಮಂಗಳೂರಿನಲ್ಲಿ ಸಮುದ್ರಪಾಲು| ಪ್ರವಾಸಕ್ಕೆ ಬಂದು ದುರಂತ

Ad Widget ... ..

ಮಂಗಳೂರು : ಬೆಂಗಳೂರಿನಿಂದ ಮಂಗಳೂರಿಗೆ ಪ್ರವಾಸ ಬಂದಿದ್ದ ತಂಡವೊಂದರಲ್ಲಿದ್ದ 20 ವರ್ಷದ ಯುವಕ ಸಮುದ್ರಪಾಲಾದ ಘಟನೆ ಪಣಂಬೂರು ಸಮುದ್ರ ತೀರದಲ್ಲಿ ನಡೆದಿದೆ. ದಿನೇಶ್ ಎಂಬ 20 ವರ್ಷದ ಯುವಕ ಸಮುದ್ರಪಾಲಾದ ವ್ಯಕ್ತಿ. ದೀಪಕ್, ಶ್ರೀನಿವಾಸ, ಪ್ರಶಾಂತ್ ಸುನೀಲ್, ಸುದೀಪ್, ಪ್ರಜ್ವಲ್, ದಿನೇಶ, ಸೀನಾ ಎಂಬ 8 ಮಂದಿ ನಿನ್ನೆ ರಾತ್ರಿ ಬೆಂಗಳೂರಿನಿಂದ ಕಾರು ಮಾಡಿಕೊಂಡು ಮಂಗಳೂರು ಪ್ರವಾಸಕ್ಕೆ ಬಂದಿದ್ದರು.

Ad Widget

ಇವರು ಇಂದು ಮಧ್ಯಾಹ್ನ ಪಣಂಬೂರು ಬೀಚ್ ತಲುಪಿದ್ದು ಇಲ್ಲಿ ಮೋಜು ಮಾಡುತ್ತಿದ್ದ ವೇಳೆ ದಿನೇಶ್ ಸಮುದ್ರದಲ್ಲಿ ಬಂದ ಅಬ್ಬರದ ಅಲೆಗೆ ಕೊಚ್ಚಿಕೊಂಡು ಹೋಗಿದ್ದಾರೆ. ಇತರರು ರಕ್ಷಣೆಗೆ ಪ್ರಯತ್ನ ಪಟ್ಟರೂ ದಿನೇಶ್ ಪತ್ತೆ ಮಾಡಲು ಸಾಧ್ಯವಾಗಲಿಲ್ಲ. ಸಮುದ್ರದ ಅಲೆಗೆ ಕೊಚ್ಚಿಕೊಂಡು ಹೋಗಿರುವ ಘಟನೆ ಹಿನ್ನೆಲೆಯಲ್ಲಿ ಪಣಂಬೂರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಲಾಗಿದೆ

Leave a Comment

Your email address will not be published. Required fields are marked *