Ad Widget .

ಇಂದು ‘ಅಪ್ಪು’ ಪುಣ್ಯತಿಥಿ, ಆಟೋರಾಜ ‘ಶಂಕರ್ ನಾಗ್’ ಜನ್ಮದಿನ| ಕನ್ನಡ ಜನತೆಯ ಮನದಲ್ಲಿ ಮರೆಯದ ಮಾಣಿಕ್ಯಗಳು

Ad Widget . Ad Widget .

ಬೆಂಗಳೂರು: ನಟ, ನಿರ್ದೇಶಕ ಶಂಕರ್​ನಾಗ್​ ಜನ್ಮದಿನ ಇಂದು. ಅವರು ಅಭಿಮಾನಿಗಳಿಂದ ಭೌತಿಕವಾಗಿ ದೂರಾಗಿ 31 ವರ್ಷ ಕಳೆದರೂ ಇನ್ನು ಅವರ ನೆನಪು ಅಜರಾಮರ. ರಾಷ್ಟ್ರಮಟ್ಟದಲ್ಲಿ ತಮ್ಮ ಅದ್ಬುತ ನಿರ್ದೇಶನ, ದೂರದೃಷ್ಟಿಗಳಿಂದ ಜನಮನ್ನಣೆ ಪಡೆದವರು ಶಂಕರ್​.

Ad Widget . Ad Widget .

ಕನ್ನಡಿಗರ ಮನದ ರಾಜರತ್ನನಾಗಿದ್ದ ಪುನೀತ್​ ರಾಜ್​ಕುಮಾರ್​ ಅಗಲಿ 12 ದಿನ ಕಳೆದಿದ್ದರೂ ಅಭಿಮಾನಿಗಳ ನೋವು ಮಾತ್ರ ಕಡಿಮೆಯಾಗುತ್ತಲೇ ಇಲ್ಲ. 46 ಪ್ರಾಯದಲ್ಲೇ ಹೃದಯಾಘಾತದಿಂದ ಅಭಿಮಾನಿಗಳಿಂದ ದೂರಾದ ಪ್ರೀತಿಯ ಅಪ್ಪು ಕಳೆದುಕೊಂಡ ನೋವು ಪ್ರತಿಮನೆಯಲ್ಲೂ ಕುಟುಂಬದ ಸದಸ್ಯನ ಕಳೆದುಕೊಂಡ ನೋವಿನಂತೆ ಆಗಿದೆ.

ಇರುವುದೊಂದು ಜನ್ಮ ಅದರಲ್ಲಿ ಏನಾದರೂ ಸಾಧಿಸಬೇಕು ಎಂದು ಅಂದು ಶಂಕರ್​ನಾಗ್ ಪಾಠ ಕಲಿಸಿ ಹೋದರೆ ಇಂದು ಪುನೀತ್​ ನಗುವ ಮೂಲಕ ತಮ್ಮ ಸಾಮಾಜಿಕ ಕಾರ್ಯಗಳ ಮೂಲಕ ಜನರಿಗೆ ಸ್ಪೂರ್ತಿಯಾಗಿದ್ದಾರೆ.

ವಿಶೇಷ ಎಂದರೆ ಶಂಕರ್​ನಾಗ್​ ಅವರ ಒಂದು ಮುತ್ತಿನ ಕಥೆ ಚಿತ್ರಕ್ಕೆ ಬಾಲನಟನಾಗಿದ್ದ ಪುನೀತ್​ ರಾಜ್​ಕುಮಾರ್​ ಕ್ಲಾಪ್​ ಮಾಡಿದ್ದರು. ತಮ್ಮ ಸೃಜನಶೀಲತೆ ಮತ್ತು ಕಲ್ಪನಾಶಕ್ತಿ ಮೂಲಕ ಅತ್ಯಲ್ಪ ಕಾಲದಲ್ಲಿ ಖ್ಯಾತಿ ಗಳಿಸಿದ ಶಂಕರ್​ ಇಂದಿಗೂ ಅನೇಕ ಯುವ ಜನರಿಗೆ ಪ್ರೇರಣೆ ಆಗಿದ್ದಾರೆ.

ಇದ್ದಷ್ಟು ದಿನಗಳ ಕಾಲ ನಗುವನ್ನು ಚೆಲ್ಲಿ, ಎಲ್ಲರೊಂದಿಗೂ ಪ್ರೀತಿಯಿಂದ ಇರಬೇಕು ಎಂಬ ಸರಳ, ವಿನಯತೆಯ ಪ್ರತೀಕವಾಗಿದ್ದ ಪುನೀತ್​ ರಾಜ್​ಕುಮಾರ್​ ಕನ್ನಡಿಗರ ನೆನಪಿನಲ್ಲಿ ಸದಾ ಶಾಶ್ವತವಾಗಿದ್ದಾರೆ.

Leave a Comment

Your email address will not be published. Required fields are marked *