Ad Widget .

ಕರ್ತವ್ಯನಿರತ ಸಾರಿಗೆ ಬಸ್ ಚಾಲಕನ ಮೇಲೆ ಹಲ್ಲೆ| ಆರೋಪಿ ಅಂದರ್|

Ad Widget . Ad Widget .

ಸುಳ್ಯ: ಸುಬ್ರಹ್ಮಣ್ಯ- ಮಂಜೇಶ್ವರ ರಾಜ್ಯ ಹೆದ್ದಾರಿಯ ನಿಂತಿಕಲ್ಲ್ ಎಂಬಲ್ಲಿ ಕರ್ತವ್ಯನಿರತ ರಾಜ್ಯ ಸಾರಿಗೆ ಬಸ್ ಚಾಲಕನಿಗೆ ಹಲ್ಲೆ ನಡೆಸಿದ ಪ್ರಕರಣ ನಡೆದಿದ್ದು, ಆರೋಪಿಗೆ ಸುಳ್ಯ ನ್ಯಾಯಾಲಯ ಬಂಧನ ವಿಧಿಸಿದೆ.

Ad Widget . Ad Widget .

ಕುಕ್ಕೆ ಸುಬ್ರಹ್ಮಣ್ಯದಿಂದ ಪುತ್ತೂರಿಗೆ ಹೋಗುವ ಕೆ.ಎಸ್.ಆರ್.ಟಿ.ಸಿ ಬಸ್ ಡ್ರೈವರ್ ಗೆ ಅದೇ ಮಾರ್ಗವಾಗಿ ಬಂದ ಸ್ಕೂಟಿ ಸವಾರ ನಿಖಿಲ್ ಎಂಬಾತ ಬಸ್ಸನ್ನು ಅಡ್ಡಗಟ್ಡಿ ನಿಲ್ಲಿಸಿ ಚಾಲಕ ಚೆನ್ನಪ್ಪ ಎಂಬವರಿಗೆ ಕೈಯಿಂದ ಹಲ್ಲೆ ನಡೆಸಿದ್ದು ಈ ಬಗ್ಗೆ ಬೆಳ್ಳಾರೆ ಠಾಣೆಯಲ್ಲಿ ಚಾಲಕ ದೂರು ನೀಡಿದ್ದರು.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮಂಗಳೂರು ಕಂಕನಾಡಿ ಮೂಲದ ನಿಖಿಲ್ ಎಂಬಾತನನ್ನು ಬಂಧಿಸಿ ಸರಕಾರಿ ಕೆಲಸಕ್ಕೆ ಅಡ್ಡಿ ಎಂದು ಪ್ರಕರಣ ದಾಖಲಿಸಿದ್ದು, ಆತನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ವಿಚಾರಣೆ ನಡೆಸಿದ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ ಎಂದು ತಿಳಿದು ಬಂದಿದೆ.

Leave a Comment

Your email address will not be published. Required fields are marked *