Ad Widget .

ಪುನೀತ್ ರೀತಿಯಲ್ಲೇ ಸಾವನ್ನಪ್ಪಿದ ಒಲಿಂಪಿಯಾ ದಂತಕಥೆ ಶಾನ್ ರೋಡೆನ್| 46ರ‌ ವಯಸ್ಸಲ್ಲಿ ಕಣ್ಮುಚ್ಚಿದ ಬಾಡಿ ಬಿಲ್ಡರ್|

Ad Widget . Ad Widget .

ಡಿಜಿಟಲ್ ಡೆಸ್ಕ್: ಮಾಜಿ ಮಿಸ್ಟರ್ ಒಲಂಪಿಯಾ ಚಾಂಪಿಯನ್ ಶಾನ್ ರೋಡೆನ್ ಅವರು 46 ನೇ ವಯಸ್ಸಿನಲ್ಲಿ ಶನಿವಾರ ನಿಧನರಾದರು. ರೋಡೆನ್ ಹೃದಯಾಘಾತದಿಂದ ಸಾವನ್ನಪ್ಪಿದ್ದು, ಇದೆ ಅವರ ನಿಧನಕ್ಕೆ ಕಾರಣವಾಗಿದೆ.
ಅವರ ತರಬೇತುದಾರರು ಹೃದಯಾಘಾತದಿಂದ ಸಾವನ್ನಪಿರುವುದಾಗಿ ದೃಢಪಡಿಸಿದರು. 43 ನೇ ವಯಸ್ಸಿನಲ್ಲಿ ಒಲಿಂಪಿಯಾವನ್ನು ಗೆದ್ದ ರೋಡೆನ್ ಕ್ರೀಡಾ ದಂತಕಥೆ ಎಂದರೆ ತಪ್ಪಾಗಲಾರದು.

Ad Widget . Ad Widget .

ಶಾನ್ ರೋಡೆನ್ ಅವರ ಮರಣವು ಈಗ ಹಲವಾರು ಕ್ರೀಡಾಪಟುಗಳು ಮತ್ತು ದೇಹದಾರ್ಢ್ಯ ಪಟುಗಳನ್ನು ಚಿಂತೆಗೆ ದೂಡಿದ್ದು ದಿವಂಗತ ಬಾಡಿಬಿಲ್ಡರ್‌ಗೆ ಸಂತಾಪ ಸೂಚಿಸಲು ಎಲ್ಲರೂ ಮುಂದಾಗಿದ್ದರೂ ಸಹ ಇದೀಗ ಎಲ್ಲರೂ ಬಾಡಿ ಬಿಲ್ಡಿಂಗ್ ಬಗ್ಗೆ ಹಾಗೂ ಆರೋಗ್ಯದ ಮೇಲೆ ಇದರ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಯೋಚನೆ ಮಾಡುತ್ತಿದ್ದಾರೆ.

ಲೆಜೆಂಡರಿ ಬಾಡಿಬಿಲ್ಡರ್ ರಿಚ್ ಗ್ಯಾಸ್ಪರಿ ಕೂಡ ಟ್ವಿಟರ್‌ನಲ್ಲಿ ರೋಡೆನ್ ಅವರ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ. ಇತ್ತೀಚಿಗೆ ಪುನೀತ್ ರಾಜ್ ಕುಮಾರ್ ಸಹ ಹೃದಯಾಘಾತದಿಂದ ಮರಣ ಹೊಂದಿದ್ದನ್ನು ನಾವು ಇಲ್ಲಿ ಸ್ಮರಿಸಬಹುದಾಗಿದೆ

Leave a Comment

Your email address will not be published. Required fields are marked *