Ad Widget .

ಸುಳ್ಯ| ಶಾಂತಿನಗರ ತಿರುವಲ್ಲೊಂದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಹೈಮಾಸ್ಟ್ ಲ್ಯಾಂಪ್|

Ad Widget . Ad Widget .

ಸುಳ್ಯ: ಬೆಳೆಯುತ್ತಿರುವ ಸುಳ್ಯದಲ್ಲಿ ಕೊರತೆಗಳು ಹಲವಾರಿವೆ. ಕೆಲವೊಂದು ಜನಪ್ರತಿನಿಧಿಗಳ ಗಮನಕ್ಕೆ ಬಂದು ನಿವಾರಣೆಯಾಗುತ್ತವೆ. ಇನ್ನೂ ಹಲವು ಸಮಸ್ಯೆಗಳು ಅರಿವಿದ್ದರೂ ನಮಗೂ ಅದಕ್ಕೂ ಯಾವುದೇ ಸಂಬಂಧ ಇಲ್ಲ ಎಂದು ಅಧಿಕಾರಿಗಳು, ಜನಪ್ರತಿನಿಧಿಗಳು‌ ಸುಮ್ಮನಿದ್ದಾರೆ. ಅದಕ್ಕೆ ಮತ್ತೊಂದು ಉದಾಹರಣೆ ಶಾಂತಿನಗರ ಜಂಕ್ಷನ್ ನಲ್ಲಿರುವ ಹೈಮಾಸ್ಟ್ ದೀಪಸ್ಥಂಭ.

Ad Widget . Ad Widget .

ಹೌದು, ಕಳೆದೊಂದು ವರ್ಷದಿಂದ ಈ ಹೈಮಾಸ್ಟ್ ದೀಪ ತಟಸ್ಥವಾಗಿದೆ. ನಗರ ಪಂಚಾಯತ್ ನ ಸದಸ್ಯರಿಗೆ ಈ ಸಮಸ್ಯೆಯ ಅರಿವಿದ್ದರೂ ಯಾವುದೇ ಕ್ರಮ ಕೈಗೊಳ್ಳದೇ ಸುಮ್ಮನಿದ್ದಾರೆ. ದೀಪಸ್ತಂಭವೇನೋ ಐದು ದೀಪಗಳನ್ನು ಹೊಂದಿ ಬೃಹತ್ತಾಗಿ ನಿರ್ಮಾಣಗೊಂಡಿದೆ. ಆದರೆ ಇದು ಉರಿಯದೇ ಇರುವುದು ಊಟಕ್ಕಿಲ್ಲದ ಉಪ್ಪಿನಕಾಯಿಯಂತಾಗಿದೆ.

ಮಾಣಿ- ಮೈಸೂರು ರಾಷ್ಟ್ರೀಯ ಹೆದ್ದಾರಿಯನ್ನು ಸಂಪರ್ಕಿಸುವ ಶಾಂತಿನಗರ ರಸ್ತೆಯಾಗಿದ್ದು ಇಲ್ಲೊಂದು ಬಸ್ ತಂಗುದಾಣವೂ ಇದೆ. ಇಲ್ಲಿ ರಾತ್ರಿವೇಳೆ ಬಸ್ ಗಾಗಿ, ಅಟೋಗಾಗಿ ಕಾಯುವವರ ಸಂಖ್ಯೆಯೂ ಅಧಿಕವಾಗಿದೆ. ಇಲ್ಲಿ ಬಹಳ ಮುತುವರ್ಜಿಯಿಂದಲೇ ಹೈಮಾಸ್ಟ್ ದೀಪವನ್ನು ನ.ಪಂಚಾಯತ್ ನಿರ್ಮಿಸಿತ್ತು. ಆದರೆ ಇದೀಗ ಸರಿಯಾದ ನಿರ್ವಹಣೆಯಿಲ್ಲದೆ ಸಾರ್ವಜನಿಕ ಉಪಯೋಗಕ್ಕೆ ಲಭಿಸುತ್ತಿಲ್ಲ. ಇನ್ನಾದರೂ ಈ ಕುರಿತಂತೆ ಪಂಚಾಯತ್ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.

ವರದಿ: ಸುನಿಲ್ ಸುಳ್ಯ

(ನಿಮ್ಮೂರ ಸಮಸ್ಯೆಗಳಿಗೆ ನೀವೇ ವರದಿಗಾರರಾಗಿ. ಸುದ್ದಿಯನ್ನು ಕಳುಹಿಸಬೇಕಾದ ವಾಟ್ಸಪ್ ನಂಬರ್ 8431491115 ಅಥವಾ 9481761063)

Leave a Comment

Your email address will not be published. Required fields are marked *